ಮುಂಬೈ: ಗ್ರಾಹಕರ ಕುಂದು ಕೊರತೆಗಳ ಪರಿಹಾರವಾಗಿ ಈಗಿರುವ ಮೂರು ಯೋಜನೆಗಳನ್ನು 'ಒಂದು ರಾಷ್ಟ್ರ ಒಂದು ಓಂಬುಡ್ಸ್ಮನ್' ಅಡಿ ಸಂಯೋಜಿಸುವುದಾಗಿ ರಿಸರ್ವ್ ಬ್ಯಾಂಕ್ ತಿಳಿಸಿದೆ.
ಬ್ಯಾಂಕಿಂಗ್, ಬ್ಯಾಂಕೇತರ ಹಣಕಾಸು ಕಂಪನಿಗಳು ಮತ್ತು ಡಿಜಿಟಲ್ ವಹಿವಾಟುಗಳಲ್ಲಿ ಗ್ರಾಹಕರ ಕುಂದು ಕೊರತೆ ಪರಿಹಾರಕ್ಕಾಗಿ ಪ್ರತ್ಯೇಕವಾದ ಒಂಬುಡ್ಸ್ಮನ್ ಯೋಜನೆಗಳಿವೆ.
ಪ್ರಸ್ತುತ ಬ್ಯಾಂಕ್ಗಳಿಗೆ ಮೂರು ಪ್ರತ್ಯೇಕ ಒಂಬುಡ್ಸ್ಮನ್ಗಳಿವೆ. ಬ್ಯಾಂಕಿಂಗ್, ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಮತ್ತು ಬ್ಯಾಂಕೇತರ ಪ್ರಿಪೇಯ್ಡ್ ಪಾವತಿ ನೀಡುವವರು (ಪಿಪಿಐ). ಇವುಗಳನ್ನು ದೇಶಾದ್ಯಂತ ಇರುವ 22 ಒಂಬುಡ್ಸ್ಮನ್ ಕಚೇರಿಗಳಿಂದ ಆರ್‌ಬಿಐ ನಿರ್ವಹಿಸುತ್ತದೆ.
ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನದ ನಿಯಂತ್ರಿತ ಘಟಕಗಳ ಗ್ರಾಹಕರಿಗೆ ಸರಳ ಮತ್ತು ಹೆಚ್ಚು ಸ್ಪಂದಿಸುವಂತೆ ಮಾಡಲು, ಮೂರು ಒಂಬುಡ್ಸ್ಮನ್ ಯೋಜನೆಗಳ ಏಕೀಕರಣ ಮತ್ತು ಕುಂದುಕೊರತೆ ಪರಿಹಾರಕ್ಕಾಗಿ 'ಒನ್ ನೇಷನ್ ಒನ್ ಒಂಬುಡ್ಸ್ಮನ್' (ಒಂದು ರಾಷ್ಟ್ರ ಒಂದು ತನಿಖೆ) ವಿಧಾನ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು.