ನವದೆಹಲಿ: ಚೀನಾದ ಕೈಗಾರಿಕಾ ಉತ್ಪನ್ನಾ ಬೆಳವಣಿಗೆ ದರವು ಕಳೆದ 17 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದ್ದು, ಮತ್ತು ಚೀನಾ- ಅಮೆರಿಕ ನಡುವಿನ ವಾಣಿಜ್ಯ ಉದ್ವಿಗ್ನತೆ ಸಡಿಲಗೊಂಡಿದ್ದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರದಲ್ಲಿ ಇಳಿಕೆಯಾಗಿದೆ.
ಬುಧವಾರದ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದಲ್ಲಿ 64 ಸೆಂಟ್ ಅಥವಾ ಶೇ 1ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್ 60.66 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ. ಮಂಗಳವಾರದ ವಹಿವಾಟಿನಂದು ಅತ್ಯಧಿಕ ಶೇ 4.7ರಷ್ಟು ಏರಿಕೆ ಆಗಿತ್ತು. ಡಿಸೆಂಬರ್ ಬಳಿಕ ಒಂದೇ ದಿನದಲ್ಲಿ ಬುಧವಾರ ಗರಿಷ್ಠ ಇಳಿಕೆ ದಾಖಲಿಸಿದೆ.