ಕರ್ನಾಟಕ

karnataka

ETV Bharat / business

ಹೊಸ ವರ್ಷಕ್ಕೆ ದರ ಏರಿಕೆಯ ಬರೆ: ಸಿಲಿಂಡರ್​ ಬೆಲೆಯಲ್ಲಿ ಮತ್ತೆ ಏರಿಕೆ!

ವಾಣಿಜ್ಯ ಗ್ರಾಹಕರು ಈಗ ಪ್ರತಿ ಸಿಲಿಂಡರ್‌ಗೆ ಹೆಚ್ಚುವರಿಯಾಗಿ 17 ರೂ. ಪಾವತಿಸಬೇಕಿದೆ. ತೈಲ ಮಾರುಕಟ್ಟೆ ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ದರವನ್ನು ಅವಲಂಬಿಸಿ ಪ್ರತಿ ತಿಂಗಳ ಮೊದಲ ದಿನ ಎಲ್‌ಪಿಜಿಯ ಬೆಲೆಯನ್ನು ಪರಿಷ್ಕರಿಸುತ್ತವೆ.

cylinder
ಸಿಲಿಂಡರ್

By

Published : Jan 1, 2021, 1:22 PM IST

ನವದೆಹಲಿ: ಜನವರಿ 1ರಿಂದ ಜಾರಿಗೆ ಬರುವಂತೆ ಸಬ್ಸಿಡಿ ರಹಿತ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸಿಲಿಂಡರ್‌ ಬೆಲೆ ದೆಹಲಿ ಮತ್ತು ಮುಂಬೈಗಳಲ್ಲಿ ತಲಾ 694 ರೂ.ನಷ್ಟಿದೆ (14.2 ಕಿಲೋಗ್ರಾಂ) ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ (ಐಒಸಿ) ವೆಬ್‌ಸೈಟ್ ತಿಳಿಸಿದೆ.

ವಾಣಿಜ್ಯ ಗ್ರಾಹಕರು ಈಗ ಪ್ರತಿ ಸಿಲಿಂಡರ್‌ಗೆ ಹೆಚ್ಚುವರಿಯಾಗಿ 17 ರೂ. ಪಾವತಿಸಬೇಕಿದೆ. ತೈಲ ಮಾರುಕಟ್ಟೆ ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ದರವನ್ನು ಅವಲಂಬಿಸಿ ಪ್ರತಿ ತಿಂಗಳ ಮೊದಲ ದಿನ ಎಲ್‌ಪಿಜಿಯ ಬೆಲೆಯನ್ನು ಪರಿಷ್ಕರಿಸುತ್ತವೆ.

ಐಒಸಿ ವೆಬ್‌ಸೈಟ್‌ನ ಪ್ರಕಾರ, ದೆಹಲಿಯ ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ ಹೊಸ ದರ 19 ಕೆಜಿ ಈಗ 1,349 ರೂ.ಗಳಾಗಿದ್ದು, ಹಿಂದಿನ ಬೆಲೆ 1,332 ರೂ.ನಷ್ಟಿತ್ತು. ಇತರ ಮೆಟ್ರೋ ನಗರಗಳಲ್ಲಿಯೂ ಬೆಲೆಗಳು ಮೇಲ್ಮುಖವಾಗಿ ಪರಿಷ್ಕರಣೆ ಕಂಡಿದೆ. ಕೋಲ್ಕತ್ತಾದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 1,387.50 ರೂ.ಯಿಂದ 22.50 ರೂ. ಹೆಚ್ಚಳವಾಗಿ 1,410 ರೂ.ಗೆ ಹೆಚ್ಚಿಸಲಾಗಿದೆ. ಮುಂಬೈನಲ್ಲಿ ಇದು 1,280.50 ರೂ.ಯಿಂದ 1,297.50 ರೂ.ಗೆ ತಲುಪಿದೆ. ಚೆನ್ನೈನಲ್ಲಿ 1,446.50 ರೂ.ಯಿಂದ 16.50 ರೂ. ಏರಿಕೆಯಾಗಿ 1463.50 ರೂ.ಗೆ ಮುಟ್ಟಿದೆ.

ಸಬ್ಸಿಡಿ ರಹಿತ 14 ಕೆಜಿ ಇಂಡೇನ್ ಗ್ಯಾಸ್ ಸಿಲಿಂಡರ್‌ನ ಬೆಲೆಗಳನ್ನು ಮೇ 2020ರಿಂದ ಐದು ತಿಂಗಳವರೆಗೆ ವಿರಾಮಗೊಳಿಸಲಾಯಿತು. ಆ ನಂತರ ಡಿಸೆಂಬರ್ 1 ಮತ್ತು ಡಿಸೆಂಬರ್ 15 ರಂದು ಬೆಲೆ ಪರಿಷ್ಕರಣೆ ಮಾಡಲಾಯಿತು.

ABOUT THE AUTHOR

...view details