ನವದೆಹಲಿ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲ ದರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸಬ್ಸಿಡಿ ರಹಿತ ಅಡಿಗೆ ಅನಿಲ ದರ ಪ್ರತಿ ಸಿಲಿಂಡರ್ಗೆ ₹ 62.50 ಇಳಿಕೆಯಾಗಿದೆ ಎಂದು ಭಾರತೀಯ ತೈಲ ಕಾರ್ಪೊರೇಷನ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ ₹ 62.50, ಮುಂಬೈ ಹಾಗೂ ಚೆನ್ನೈನಲ್ಲಿ ₹ 62 ಇಳಿಕೆಯಾಗಿದೆ. ಸಬ್ಸಿಡಿಯೇತರ ಸಿಲಿಂಡರ್ ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಲ್ಲಿ ಕ್ರಮವಾಗಿ ₹ 574.50, ₹ 601, ₹ 546 ಹಾಗೂ ₹ 590.50 ದರದಲ್ಲಿ ಮಾರಾಟ ಆಗುತ್ತಿವೆ.
ಬೆಂಗಳೂರಿನಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಸಿಲಿಂಡರ್ ₹ 634ಕ್ಕೆ ಲಭ್ಯವಾಗುತ್ತಿದ್ದು, ಪ್ರತಿ ಸಿಲಿಂಡರ್ ಮೇಲೆ ₹ 105 ಕಡಿತವಾಗಿದೆ. ರಾಜ್ಯದ ಆಯಾ ಜಿಲ್ಲೆಗಳ ವಿತರಣೆಗೆ ಅನುಗುಣವಾಗಿ ದರದಲ್ಲಿ ಅಲ್ಪ ವ್ಯತ್ಯಾಸ ಇರಲಿದೆ.
ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ದರ ಜೂನ್ 1 ರಂದು 100.50 ರೂ.ನಷ್ಟು ಕಡಿತಗೊಂಡಿತ್ತು. 31 ದಿನಗಳ ಅಂತರದಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ ದರದಲ್ಲಿ ₹ 163ನಷ್ಟು ಕಡಿತಗೊಂಡಂತಾಗಿದೆ.
ಗೃಹ ಬಳಕೆಗೆ ಒಂದು ಕುಟುಂಬಕ್ಕೆ ವಾರ್ಷಿಕ 12 ಸಿಲಿಂಡರ್ಗಳನ್ನು ಸಬ್ಸಿಡಿಸಹಿತ ಸರ್ಕಾರ ವಿತರಿಸುತ್ತದೆ. ಸಬ್ಸಿಡಿ ಮೊತ್ತವನ್ನು ನೇರವಾಗಿ ಖಾತೆದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.