ಕರ್ನಾಟಕ

karnataka

ETV Bharat / business

ಸತತ 11ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಯಥಾಸ್ಥಿತಿ: ಇಂದಿನ ಬೆಲೆ ವಿವರ ಇಲ್ಲಿದೆ - ಡೀಸೆಲ್ ದರಗಳು

ಹಿಂದಿನ ವಾರಗಳಲ್ಲಿನ ಹೆಚ್ಚಳವು ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ 100 ರೂ.ಗೆ ತಲುಪಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 2021ರಲ್ಲಿ 26 ಬಾರಿ ಹೆಚ್ಚಾಗಿದ್ದು, ಈ ಎರಡೂ ಆಟೋ ಇಂಧನಗಳು ಈ ವರ್ಷ ಇಲ್ಲಿಯವರೆಗೆ ಕ್ರಮವಾಗಿ 7.46 ರೂ. ಮತ್ತು 7.60 ರೂ. ಏರಿಕೆ ಕಂಡಿವೆ.

diesel prices
diesel prices

By

Published : Mar 10, 2021, 1:22 PM IST

ನವದೆಹಲಿ: ನಾಲ್ಕು ರಾಜ್ಯಗಳು ಚುನಾವಣೆ ಮತ್ತು ಸ್ಥಿರ ಜಾಗತಿಕ ತೈಲ ಮಾರುಕಟ್ಟೆಯಿಂದಾಗಿ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್‌ನ ಪಂಪ್ ಬೆಲೆಯಲ್ಲಿ ಹೆಚ್ಚಳ ಮಾಡದಂತೆ ಯಥಾವತ್ತಾಗಿ ಉಳಿಸಿಕೊಂಡಿವೆ.

ರಾಜಧಾನಿಯಲ್ಲಿ ಬುಧವಾರ ಪೆಟ್ರೋಲ್ ಬೆಲೆ ಲೀಟರ್​ಗೆ 91.17 ಮತ್ತು ಡೀಸೆಲ್ ದರ 81.47 ರೂ.ಯಲ್ಲಿ ಮಾರಾಟ ಆಗುತ್ತಿದೆ. ಜಾಗತಿಕ ಉತ್ಪನ್ನದ ಬೆಲೆಗಳು ಏರಿಕೆಯಾಗಿದ್ದರೂ 11 ದಿನಗಳವರೆಗೆ ಇಂಧನ ಬೆಲೆಗಳನ್ನು ಪರಿಷ್ಕರಣೆ ಮಾಡಿಲ್ಲ.

ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾಗದೆ ಉಳಿದಿದೆ. ಆದರೆ ಈ ವಿರಾಮವು ದೇಶದ ಹಲವು ಭಾಗಗಳಲ್ಲಿ ಲೀಟರ್‌ಗೆ 100 ರೂ. (ಪೆಟ್ರೋಲ್) ದಾಟಿದ ಇಂಧನ ಬೆಲೆಯನ್ನು ತಗ್ಗಿಸಲು ನೆರವಾಗಿಲ್ಲ.

ಫೆಬ್ರವರಿ ಆರಂಭದಿಂದಲೂ ಕಚ್ಚಾ ಬ್ಯಾರೆಲ್‌ಗೆ 7 ಡಾಲರ್​ಗಿಂತ ಹೆಚ್ಚು ಏರಿಕೆಯಾಗಿದೆ. ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ 4.22 ರೂ. ಮತ್ತು ಡೀಸೆಲ್‌ಗೆ 4.34 ರೂ.ಯಷ್ಟು ಹೆಚ್ಚಳವಾಗಿದೆ. ಕಚ್ಚಾ ತೈಲ ಈಗ ಬ್ಯಾರೆಲ್‌ಗೆ 67 ಡಾಲರ್​ಗಿಂತ ಕಡಿಮೆಯಾಗಿದೆ.

ಇದನ್ನೂ ಓದಿ: ಗಂಟೆಗೆ 75,000 ಕೋಟಿ ರೂ. ಗಳಿಸಿದ್ರೂ ಮಸ್ಕ್​ಗೆ ಧಕ್ಕಲಿಲ್ಲ ವಿಶ್ವದ ನಂ.1 ಶ್ರೀಮಂತ ಪಟ್ಟ: ಏಕೆ ಗೊತ್ತೇ?

ಹಿಂದಿನ ವಾರಗಳಲ್ಲಿನ ಹೆಚ್ಚಳದಿಂದಾಗಿ ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ 100 ರೂ.ಗೆ ತಲುಪಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 2021ರಲ್ಲಿ 26 ಬಾರಿ ಹೆಚ್ಚಾಗಿದ್ದು, ಈ ಎರಡೂ ಆಟೋ ಇಂಧನಗಳು ಈ ವರ್ಷ ಇಲ್ಲಿಯವರೆಗೆ ಕ್ರಮವಾಗಿ 7.46 ರೂ. ಮತ್ತು 7.60 ರೂ. ಏರಿಕೆ ಕಂಡಿವೆ.

ABOUT THE AUTHOR

...view details