ಕರ್ನಾಟಕ

karnataka

ETV Bharat / business

ಮೇಕ್​ ಇನ್​ ಇಂಡಿಯಾದಡಿ 4.99 ಲಕ್ಷ ರೂ.ಗೆ ನಿಸ್ಸಾನ್ ಕಾರು ಬಿಡುಗಡೆ: ಕಾರುಗಳು ಫೀಚರ್ ಹೀಗಿದೆ! - ನಿಸ್ಸಾನ್ ನ್ಯೂ ಎಸ್​ಯುವಿ 2020

ಕಂಪನಿಯು ಪ್ಯಾನ್ ಇಂಡಿಯಾ ಬುಕ್ಕಿಂಗ್​ ಪ್ರಾರಂಭಿಸಿದೆ. ನೂತನ ನಿಸ್ಸಾನ್ ಮ್ಯಾಗ್ನೈಟ್' ಎಲ್ಲ ಮಾಡಲ್​ಗಳು ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆ ಹೊಸ ಅಧ್ಯಾಯದ ಆರಂಭಿಸುವ ಸೂಚಕವಾಗಿವೆ ಎಂದು ನಿಸ್ಸಾನ್ ಮೋಟಾರ್ ಇಂಡಿಯಾದ ಅಧ್ಯಕ್ಷ ಸಿನಾನ್ ಓಜ್ಕಾಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Magnite SUV
ನಿಸ್ಸಾನ್

By

Published : Dec 2, 2020, 6:10 PM IST

ನವದೆಹಲಿ: ಆಟೋಮೊಬೈಲ್ ತಯಾರಕ ನಿಸ್ಸಾನ್ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಗೆ ನೂತನ ನಿಸ್ಸಾನ್ ಮ್ಯಾಗ್ನೈಟ್‌ ಕಾರುಗಳನ್ನು ಬಿಡುಗಡೆ ಮಾಡಿದ್ದು, 2020ರ ಡಿಸೆಂಬರ್ 31ರವರೆಗೆ 4,99,000 ರೂ. ದರದಲ್ಲಿ ಲಭ್ಯವಾಗಲಿದೆ.

ಕಂಪನಿಯು ಪ್ಯಾನ್ ಇಂಡಿಯಾ ಬುಕ್ಕಿಂಗ್​ ಪ್ರಾರಂಭಿಸಿದೆ. ನೂತನ ನಿಸ್ಸಾನ್ ಮ್ಯಾಗ್ನೈಟ್' ಎಲ್ಲ ಮಾಡಲ್​ಗಳು ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆ ಹೊಸ ಅಧ್ಯಾಯದ ಆರಂಭಿಸುವ ಸೂಚಕವಾಗಿವೆ ಎಂದು ನಿಸ್ಸಾನ್ ಮೋಟಾರ್ ಇಂಡಿಯಾದ ಅಧ್ಯಕ್ಷ ಸಿನಾನ್ ಓಜ್ಕಾಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರುಕಟ್ಟೆ ರೌಂಡಪ್​: ಸಾರ್ವಕಾಲಿಕ ಗರಿಷ್ಠ ಏರಿಕೆಯ ಮರುದಿನವೇ ಅಲ್ಪ ಕುಸಿದ ಸೆನ್ಸೆಕ್ಸ್​!

20ಕ್ಕೂ ಅಧಿಕ ಫಸ್ಟ್​ ಇನ್ ಕ್ಲಾಸ್​ ಹಾಗೂ ಬೆಸ್ಟ್​ ಇನ್ ಸೆಗ್ಮೆಂಟ್​ಗಳೊಂದಿಗೆ ಹೊಸ ನಿಸ್ಸಾನ್ ಮ್ಯಾಗ್ನೈಟ್ ಉತ್ಪನ್ನಗಳು ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ಅಭಿಯಾನದಡಿ ತಯಾರಿಸಲಾಗಿದೆ. ಇದು ಗ್ರಾಹಕರಿಗೆ ವಿಭಿನ್ನ, ನವೀನ ಮಾಲೀಕತ್ವದ ಅನುಭವ ನೀಡಲಿದೆ ಎಂದರು.

ಕಂಪನಿಯು ಉದ್ಯಮದಲ್ಲಿ ಪ್ರಥಮ ಎಂಬುವಂತೆ ವರ್ಚ್ಯುವಲ್ ಟೆಸ್ಟ್ ಡ್ರೈವ್ ವೈಶಿಷ್ಟ್ಯವನ್ನು ಸಹ ಬಿಡುಗಡೆ ಮಾಡಿತು. ಗ್ರಾಹಕರು ಎಲ್ಲಿದ್ದರೂ ತಮ್ಮ ವೈಯಕ್ತಿಕ ಸಾಧನದಲ್ಲಿ ಎಲ್ಲ ನಿಸ್ಸಾನ್ ಮ್ಯಾಗ್ನೈಟ್ ಮಾಡಲ್​ಗಳ ಡ್ರೈವ್ ಅನುಭವ ಪಡೆಯಬಹುದಾಗಿದೆ.

ಮ್ಯಾಗ್ನೈಟ್​ ಕಾರು ಎಕ್ಸ್​ಇ, ಎಕ್ಸ್​ಎಲ್​, ಎಕ್ಸ್​ವಿ, ಎಕ್ಸ್​ವಿ ಪ್ರೀಮಿಯಂ, ಎಕ್ಸ್​ವಿ ಪ್ರೀಮಿಯಂ (ಒ) ಅವತರಣಿಕೆಗಳಲ್ಲಿ ಲಭ್ಯವಾಗಲಿದೆ.

ಎಕ್ಸ್​ವಿ ಪ್ರೀಮಿಯಂ (ಒ) ಮಾಡಲ್​ಗಳಲ್ಲಿ ಎಲ್​ಇಡಿ ಬೈ ಪ್ರೊಜೆಕ್ಟ್​ ಹೆಡ್​ಲ್ಯಾಂಪ್​, 156 ಇಂಚಿನ ಡೈಮಂಡ್ ಕಟ್ ಅಲಾಯ್ ಚಕ್ರ, ಸಬ್ ಕಾಂಪ್ಯಾಕ್ಟ್​ ಎಸ್​ಯುವಿ ವಿಭಾಗದಲ್ಲಿ ವೈರ್​ಲೆಸ್​ ಆ್ಯಪಲ್ ಕಾರ್​ಪ್ಲೇ ಹಾಗೂ ಆ್ಯಂಡ್ರಾಯ್ಡ್​ ಆಟೋ ಕನೆಕ್ಟಿವಿಟಿ ಜತೆಗೆ 8.0 ಇಂಚಿನ ಟಚ್​ಸ್ಕ್ರೀನ್ ಇನ್ಫೋಟೈನ್ಮೆಂಟ್​ ವ್ಯವಸ್ಥೆ​ ಹೊಂದಿದೆ. 7.0 ಇಂಚಿನ ಟಿಎಫ್​ಟಿ ಡಿಸ್​​ಪ್ಲೇ ಇನ್​ಸ್ಟ್ರುಮೆಂಟ್​ ಕ್ಲಸ್ಟರ್​, ಧ್ವನಿ ಗುರುತಿಸುವಿಕೆ ತಂತ್ರಜ್ಞಾನ, ಪುಶ್ ಬಟನ್, ಕ್ರೂಸ್​ ಕಂಟ್ರೋಲ್​, ಆಲ್​ ಬ್ಲ್ಯಾಕ್​ ಇಂಟೀರಿಯರ್​, 360 ಡಿಗ್ರಿ ಅರೌಂಡ್ ವ್ಯೂ ಕ್ಯಾಮರಾ, ಟೈರ್ ಪ್ರೆಶರ್​ ಮಾನಿಟರ್ ವ್ಯವಸ್ಥೆ ಸಹ ಇದೆ.

ಮ್ಯಾಗ್ನೈಟ್​ ಕಾರು ಎಕ್ಸ್​ವಿ, ಎಕ್ಸ್​ವಿ ಪ್ರೀಮಿಯಂ ಮತ್ತು ಎಕ್ಸ್​ವಿ ಪ್ರೀಮಿಯಂ (ಒ) ಸರಣಿಯಲ್ಲಿ ಐಚ್ಛಿಕ ತಂತ್ರಜ್ಞಾನ ಒಳಗೊಂಡಿದೆ. ವೈರ್​ಲೆಸ್​ ಚಾರ್ಜಿಂಗ್​, ಏರ್​ ಪ್ಯೂರಿಫೈಯರ್, ಆಂಬಿಯಟ್​ ಮೂಡ್ ಲೈಟಿಂಗ್, ಪಡಲ್ ಲ್ಯಾಂಪ್ಸ್​ ಮತ್ತು ಜೆಬಿಎಲ್​ ಸ್ಪೀಕರ್​ಗಳನ್ನು ಹೊಂದಿದೆ.

ABOUT THE AUTHOR

...view details