ಮುಂಬೈ: ಶೇ.10 ರಷ್ಟು ಷೇರು ಮಾರುಕಟ್ಟೆ ಕುಸಿತವಾದ ಹಿನ್ನೆಲೆಯಲ್ಲಿ ಮುಂಬೈನ ಷೇರು ಮಾರುಕಟ್ಟೆಯನ್ನ ಕ್ಲೋಸ್ ಮಾಡಲಾಗಿದೆ. ಬಿಎಸ್, ನಿಫ್ಟಿ ಎರಡೂ ಮಾರುಕಟ್ಟೆಯನ್ನು ಮುಚ್ಚಲಾಗಿದೆ.
ಕೊರೊನಾ ಎಫೆಕ್ಟ್: ಷೇರುಪೇಟೆಯಲ್ಲಿ ಭಾರೀ ಕುಸಿತ.. 45 ನಿಮಿಷ ಷೇರು ಮಾರುಕಟ್ಟೆ ಬಂದ್ - ಷೇರುಪೇಟೆ ಸೂಚ್ಯಂಕದಲ್ಲಿ ಭಾರೀ ಕುಸಿತ
ಜಗತ್ತಿನಾದ್ಯಂತ ಜನರಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ಷೇರುಪೇಟೆ ಮೇಲೂ ಪರಿಣಾಮ ಬೀರಿದ್ದು, ಮುಂಬೈ ಷೇರುಪೇಟೆ ಸೂಚ್ಯಂಕದಲ್ಲಿ ಭಾರೀ ಕುಸಿತವಾಗಿದೆ.
ಷೇರುಪೇಟೆ ಸೂಚ್ಯಂಕದಲ್ಲಿ ಭಾರೀ ಕುಸಿತ
ಶೇಕಡ 10 ರಷ್ಟು ಮಾರುಕಟ್ಟೆ ಕುಸಿತವಾಗಿದ್ದಕ್ಕೆ ಮುಂದಿನ 45 ನಿಮಿಷಗಳ ವರೆಗೆ ಮುಂಬೈನ ಷೇರು ಮಾರುಕಟ್ಟೆ ಮತ್ತು ರಾಷ್ಟ್ರೀಯ ಮಾರುಕಟ್ಟೆಯನ್ನು ಮುಚ್ಚಲಾಗಿದೆ. ನಿಫ್ಟಿ ಕೂಡ 842.45 ಅಂಕ ಇಳಿಕೆ ಕಂಡು 7,903.00ಕ್ಕೆ ತಲುಪಿದೆ.
ಜಗತ್ತಿನಾದ್ಯಂತ ಜನರಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್, ಜಾಗತಿಕ ವಹಿವಾಟಿನ ಮೇಲೂ ದುಷ್ಪರಿಣಾಮ ಬೀರಿದ್ದು, ದಿನದಿಂದ ದಿನಕ್ಕೆ ಷೇರುಪೇಟೆ ಭಾರೀ ಕುಸಿತದತ್ತ ಸಾಗುತ್ತಿದೆ. ಶುಕ್ರವಾರ ದಿನದಂತ್ಯಕ್ಕೆ ಡಾಲರ್ ಎದುರು 75.19 ರೂ. ಇದ್ದ ರೂಪಾಯಿ ಮೌಲ್ಯ ಇಂದು 75.69ಕ್ಕೆ ತಲುಪಿದೆ.
Last Updated : Mar 23, 2020, 10:18 AM IST