ಮುಂಬೈ:ದೇಶಾದ್ಯಂತ ಬೆಳಕಿನ ಹಬ್ಬವಾದ ದೀಪಾವಳಿ ಆಚರಿಸಲಾಗುತ್ತಿದ್ದು, ಇದೇ ದಿನ ಮುಂಬೈ ಷೇರುಪೇಟೆಯಲ್ಲಿ ವಿಶೇಷ ವಹಿವಾಟು 'ಮುಹೂರ್ತ ಟ್ರೇಡಿಂಗ್' ಸಕಾರಾತ್ಮಕವಾಗಿ ಆರಂಭಗೊಂಡಿದೆ.
ಆರ್ಥಿಕತೆಯಲ್ಲಿನ ದುರ್ಬಲವಾದ ಉಪಭೋಗದ ಬೇಡಿಕೆ, ಅಮೆರಿಕ- ಚೀನಾ ನಡುವಿನ ವ್ಯಾಪಾರ ವಾಣಿಜ್ಯ ಸಮರ, ಕೊಲ್ಲಿ ರಾಷ್ಟ್ರಗಳಲ್ಲಿನ ಉದ್ವಿಗ್ನತೆ, 2019ರ ಬಜೆಟ್ಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರ (ಎಫ್‌ಪಿಐ) ಮೇಲೆ ತೆರಿಗೆ ವಿಧಿಸುವ ಪ್ರಸ್ತಾಪ, ನೀರಸವಾದ ಸಾಂಸ್ಥಿಕ ಗಳಿಕೆ ಮತ್ತು ಭಾರತ ಹಾಗೂ ಪಾಕಿಸ್ತಾನ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿ ರದ್ದತಿಯಂತಹ ಅಂಶಗಳು 2075ರ ಸಂವತ್ಸರದ ಪ್ರಮುಖ ಅಂಶಗಳಾಗಿದ್ದವು. ಈ ಭಾವನೆಗಳು ಹೂಡಿಕೆದಾರರ ಮೇಲೆ ಪರಿಣಾಮ ಬೀರಿದ್ದವು. ಈ ಎಲ್ಲ ಬೆಳವಣಿಗೆಗಳ ನಡುವೆಯೂ 2076ರ ಸಂವತ್ಸರವು ಇಂದಿನಿಂದ ಸಕಾರಾತ್ಮಕವಾಗಿ ಆರಂಭಗೊಂಡಿದೆ.