ಕರ್ನಾಟಕ

karnataka

ETV Bharat / business

ತೆಂಗು ಬೆಳೆಗಾರರಿಗೆ ಗುಡ್​ ನ್ಯೂಸ್​: ಕೊಬ್ಬರಿ ಬೆಂಬಲ ಬೆಲೆ ₹ 129 ಹೆಚ್ಚಳ - ತೆಂಗಿನಕಾಯಿ ಎಂಎಸ್​ಪಿ

ಸಣ್ಣ ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ 2020ರ ಋತುವಿನಲ್ಲಿ ತೆಂಗಿನಕಾಯಿಯ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಶೇ 5.02 ರಷ್ಟು ಅಥವಾ 129 ರೂ. ಹೆಚ್ಚಳ ಮಾಡಿ ಪ್ರತಿ ಕ್ವಿಂಟಾಲ್‌ಗೆ 2,700 ರೂ.ಗೆ ಹೆಚ್ಚಿಸಿದೆ. ಎಂಎಸ್​​ಪಿಯ ಲಾಭವು ಲಕ್ಷಾಂತರ ಸಣ್ಣ ಹಿಡುವಳಿದಾರರಾದ ತೆಂಗಿನಕಾಯಿ ಬೆಳೆಗಾರರಿಗೆ ತಲುಪುತ್ತದೆ ಎಂದು ಕೃಷಿ ಸಚಿವಾಲಯ ಹೇಳಿದೆ.

coconut
ತೆಂಗು

By

Published : Jun 23, 2020, 4:06 PM IST

ನವದೆಹಲಿ: ತೆಂಗಿನಕಾಯಿ ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೊಬ್ಬರಿಗೆ ಬೆಂಬಲ ಬೆಲೆಯನ್ನು ಶೇ. 5.02ರಷ್ಟು ಏರಿಕೆ ಮಾಡಿದೆ.

ಸಣ್ಣ ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ 2020ರ ಋತುವಿನಲ್ಲಿ ತೆಂಗಿನಕಾಯಿಯ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಶೇ. 5.02 ರಷ್ಟು ಅಥವಾ 129 ರೂ. ಹೆಚ್ಚಳ ಮಾಡಿ ಪ್ರತಿ ಕ್ವಿಂಟಾಲ್‌ಗೆ 2,700 ರೂ.ಗೆ ಹೆಚ್ಚಿಸಿದೆ. ಇದಕ್ಕೂ ಮೊದಲು ಪ್ರತಿ ಕ್ವಿಂಟಾಲ್‌ಗೆ ಎಂಎಸ್​ಪಿ 2,571 ರೂ. ನಿಗದಿಪಡಿಸಲಾಗಿತ್ತು.

ತೆಂಗಿನಕಾಯಿಗಾಗಿ ಎಂಎಸ್​​ಪಿ ಹೆಚ್ಚಳವು ತಾಜಾ ಉತ್ಪನ್ನ ಸಂಗ್ರಹಣೆಗೆ ಅನುಕೂಲ ಮಾಡಿಕೊಡಲಿದೆ. ಎಂಎಸ್​​ಪಿಯ ಲಾಭವು ಲಕ್ಷಾಂತರ ಸಣ್ಣ ಹಿಡುವಳಿದಾರರಾದ ತೆಂಗಿನಕಾಯಿ ಬೆಳೆಗಾರರಿಗೆ ತಲುಪುತ್ತದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಬ್ಬರಿಯನ್ನು (ಮಿಲ್ಲಿಂಗ್ ಕೊಪ್ರಾ) ತೆಂಗಿನೆಣ್ಣೆ ಉತ್ಪಾದಿಸಲು ಬಳಸುತ್ತಾರೆ. ಗಿಟುಕ ಕೊಬ್ಬರಿ (ಬಾಲ್ ಕೊಪ್ರಾ) ಅತ್ಯುತ್ತಮ ದರ್ಜೆಯದ್ದಾಗಿದ್ದು ಡ್ರೈ ಫ್ರುಟ್ (ಒಣಗಿಸಿದ ಹಣ್ಣು) ಹಾಗೂ ಧಾರ್ಮಿಕ ಉದ್ದೇಶಗಳಿಗೆ ಇದು ಬಳಕೆಯಾಗುತ್ತದೆ.

ಕೊಬ್ಬರಿಯನ್ನು ತೆಂಗಿನೆಣ್ಣೆ ಉತ್ಪಾದಿಸಲು ಎಂಎಸ್​​ಪಿಯ 2020ರ ಬೆಳೆ ಋತುವಿನಲ್ಲಿ ಪ್ರತಿ ಕ್ವಿಂಟಾಲ್​ಗೆ 9,960 ರೂ. ಆಗಿದೆ. ಬೆಂಬಲ ಬೆಲೆ ಹೆಚ್ಚಿಸಿದ್ದರಿಂದ ಸಣ್ಣ ರೈತರಿಗೆ ತಕ್ಷಣದ ಹಣ ಪಾವತಿ ಖಚಿತಪಡಿಲಾಗುವುದು ಎಂದರು.

ತೆಂಗಿನಕಾಯಿ ಸಣ್ಣ ಹಿಡುವಳಿದಾರನ ಬೆಳೆ, ದಾಸ್ತಾನು ಮತ್ತು ಬೆಳಗಾರರ ಮಟ್ಟದಲ್ಲಿ ಕೊಪ್ರಾ ತಯಾರಿಕೆ ಸೌಲಭ್ಯದ ವ್ಯವಸ್ಥೆ ಮಾಡುವುದು ಸಾಮಾನ್ಯವಲ್ಲ. ದೇಶಾದ್ಯಂತ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆಯುವ ರೈತರ ಹಿತಾಸಕ್ತಿಗೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ ಎಂದು ಸಚಿವರು ಹೇಳಿದರು.

ABOUT THE AUTHOR

...view details