ಕರ್ನಾಟಕ

karnataka

ETV Bharat / business

ಭಾರತದಲ್ಲಿ ಇನ್ನೂ 5ಜಿನೇ ಬಂದಿಲ್ಲ, ಜಪಾನ್​ನಲ್ಲಿ ಆಗ್ಲೆ 6ಜಿ ಪರೀಕ್ಷೆ ಶುರು​... 6G ಸ್ಪೀಡ್​ ಕೇಳಿದ್ರೆ ಬೆಚ್ಚಿಬೀಳ್ತಿರಾ..! - 5ಜಿ ತಂತ್ರಜ್ಞಾನ

ಜಪಾನ್ 2030ರ ವೇಳೆಗೆ 'ಪೋಸ್ಟ್- 5ಜಿ' (6ಜಿ) ತಂತ್ರಜ್ಞಾನಕ್ಕಾಗಿ ಸಮಗ್ರವಾದ ಕಾರ್ಯತಂತ್ರದ ಯೋಜನೆ ರೂಪಿಸುತ್ತಿದೆ. ಈ ನೂತನ ತಂತ್ರಜ್ಞಾನವು ಪ್ರಸ್ತುತದಲ್ಲಿರುವ 5ಜಿಗಿಂತ 10 ಪಟ್ಟು ವೇಗವಾಗಿರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

6G
6ಜಿ

By

Published : Jan 21, 2020, 6:01 PM IST

ಟೋಕಿಯೊ: ಅಲ್ಪಾಯುಷ್ಯದ 4ಜಿ ಜಮಾನ ಮುಗಿಯುವ ಹತ್ತಿರಕ್ಕೆ ಬಂದಿದೆ. ಭಾರತದಲ್ಲಿ 5ಜಿ ಪರೀಕ್ಷಾರ್ಥ ಯಶಸ್ವಿ ಆಗಿದ್ದು, ಕೆಲವೇ ತಿಂಗಳಲ್ಲಿ ಸೇವೆಗೆ ಬರಲಿದೆ. ಆದರೆ, ಜಪಾನ್​ ಈಗಾಗಲೇ 6ನೇ ತಲೆಮಾರಿನ ತರಂಗಾಂತರ ಸೇವೆಯ ಪರೀಕ್ಷೆಯನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಜಪಾನ್ 2030ರ ವೇಳೆಗೆ 'ಪೋಸ್ಟ್- 5ಜಿ' (6ಜಿ) ತಂತ್ರಜ್ಞಾನಕ್ಕಾಗಿ ಸಮಗ್ರವಾದ ಕಾರ್ಯತಂತ್ರದ ಯೋಜನೆ ರೂಪಿಸುತ್ತಿದೆ. ಈ ನೂತನ ತಂತ್ರಜ್ಞಾನವು ಪ್ರಸ್ತುತ ಕಾರ್ಯಾಚರಣೆಯಲ್ಲಿರುವ 5ಜಿಗಿಂತ 10 ಪಟ್ಟು ವೇಗವಾಗಿರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಟೋಕಿಯೊ ಗೋಶಿನ್ಜಿನ್ ವಿಶ್ವವಿದ್ಯಾಲಯದ ಅಧ್ಯಕ್ಷತೆಯಲ್ಲಿ ಜಪಾನ್‌ನ ಆಂತರಿಕ ವ್ಯವಹಾರ ಮತ್ತು ಸಂವಹನ ಸಚಿವಾಲಯವು ಜನವರಿಯಲ್ಲಿ ಸರ್ಕಾರಿ ನಾಗರಿಕ ಸಂಶೋಧನಾ ಸಂಘವನ್ನು ಸ್ಥಾಪಿಸಲಿದೆ. ಸಾಮಾನ್ಯ ವ್ಯವಹಾರಗಳ ಸಚಿವ ತಕಾವೊ ಸನೆ ಅವರ ನೇರ ಮೇಲ್ವಿಚಾರಣೆ ಇರಲಿದೆ ಎಂದು ವರದಿಯಾಗಿದೆ.

ಜೂನ್ ವೇಳೆಗೆ 6ಜಿ ಕಾರ್ಯಕ್ಷಮತೆಯ ಗುರಿ ಈಡೇರಿಕೆ ಮತ್ತು ನೀತಿಗಳ ಬಗ್ಗೆ ಚರ್ಚಿಸಲು ಎನ್‌ಟಿಟಿ ಮತ್ತು ತೋಷಿಬಾ ಜನತೆಯನ್ನು ಆಹ್ವಾನಿಸಲಾಗುತ್ತದೆ. 6ಜಿ ತಂತ್ರಜ್ಞಾನದ ಅಭಿವೃದ್ಧಿಯನ್ನು ಸರ್ಕಾರ ಕೂಡ ಉತ್ತೇಜನ ನೀಡುತ್ತಿದೆ.

ಅಮೆರಿಕ ಮೂಲದ ಇನ್ವೆಸ್ಟ್​ಮೆಂಟ್​ ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾ ಕಂಪನಿ ಗೋಲ್ಡ್​​ಮನ್ ಸ್ಯಾಚ್ಸ್, 2020ರಲ್ಲಿ ಜಾಗತಿಕವಾಗಿ 200 ಮಿಲಿಯನ್ 5ಜಿ ಸ್ಮಾರ್ಟ್​​ಫೋನ್​ಗಳು ರಫ್ತಾಗಲಿವೆ. ಹೊಸದಾಗಿ ಊಹಿಸಲಾದ ಮೌಲ್ಯವು 2019ರ ಮಾರಾಟದ ಅಂಕಿ- ಅಂಶಕ್ಕಿಂತ ಸುಮಾರು 20ಪಟ್ಟು ಹೆಚ್ಚಾಗಿದೆ.

ಒಂದು ಅಂದಾಜಿನ ಪ್ರಕಾರ, 2020ರ ವೇಳೆಗೆ ಚೀನಾದಲ್ಲಿ ಸುಮಾರು 1 ಮಿಲಿಯನ್ ಹೊಸ 5ಜಿ ಬೇಸ್ ಸ್ಟೇಷನ್‌ಗಳು ಇರಲಿವೆ. ಇದು ಗೋಲ್ಡ್​ಮನ್ ಸ್ಯಾಚ್ಸ್ ಅವರ ಅಂದಾಜಿಗಿಂತ 6,00,000 ಹೆಚ್ಚಳವಿದೆ. ಚೀನಾದ ಸ್ಮಾರ್ಟ್‌ಫೋನ್ ತಯಾರಕ ಶಿಯೋಮಿ ಸಹ-ಸಂಸ್ಥಾಪಕ ಲೀ ಜುನ್ ಅವರು, 'ಮುಂದಿನ ಐದು ವರ್ಷಗಳಲ್ಲಿ 5ಜಿ, ಎಐ ಮತ್ತು ಐಒಟಿ ಶ್ರೇಣಿಯಲ್ಲಿ 7 ಬಿಲಿಯನ್​ ಡಾಲರ್​ ವಹಿವಾಟು ನಡೆಸುವುದಾಗಿ ಘೋಷಿಸಿದ್ದಾರೆ'.

ABOUT THE AUTHOR

...view details