ಬೆಂಗಳೂರು:ಭಾರತೀಯ ಮಾರುಕಟ್ಟೆ ಮೇಲೆ ತನ್ನ ಗಮನವನ್ನು ಮುಂದುವರಿಸಿರುವ ಮೊಟೊರೋಲಾ ತನ್ನ ಜನಪ್ರಿಯ ಜಿ ಫ್ರಾಂಚೈಸಿಯಲ್ಲಿ ಇದೀಗ ಮೊಟೊ ಜಿ9 ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ.
ಜಾಗತಿಕವಾಗಿ ಭಾರತದಲ್ಲಿ ಮೊದಲ ಬಾರಿಗೆ ಈ ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಮುಂದಿನ ಪೀಳಿಗೆಯ ನೆಚ್ಚಿನ ಸ್ಮಾರ್ಟ್ ಫೋನ್ ಆಗಿದೆ. ಭಾರತೀಯ ಗ್ರಾಹಕರ ಅಭಿರುಚಿ ಮತ್ತು ಅವರ ಬೇಡಿಕೆಗೆ ತಕ್ಕಂತೆ ಈ ಫೋನ್ ವಿನ್ಯಾಸಗೊಳಿಸಲಾಗಿದೆ. ಇದು ಮೇಡ್ ಫಾರ್ ಇಂಡಿಯಾವಲ್ಲದೇ, ಭಾರತದಲ್ಲೇ ತಯಾರಾಗಿರುವ ಉತ್ಪನ್ನವಾಗಿದೆ.
ಈ ಮೊಟೊ ಜಿ9 ಕ್ಯಾಮೆರಾ, ಬ್ಯಾಟರಿ ಮತ್ತು ಇತ್ಯಾದಿಯ ಕಾರ್ಯಕ್ಷಮತೆಯ ಮಟ್ಟ ಪ್ರಬಲವಾಗಿದೆ. ಒಂದೇ ಉತ್ಪನ್ನದಲ್ಲಿ ಎಲ್ಲವನ್ನೂ ಒಟ್ಟಾಗಿ ಪಡೆಯಬೇಕೆಂದು ಬಯಸುವ ಗ್ರಾಹಕರ ಅನುಭವವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಸೂಪರ್ - ರೆಸ್ಪಾನ್ಸಿವ್, ಕ್ವಾಲ್ಕಂ ಸ್ನ್ಯಾಪ್ ಡ್ರಾಗನ್ 662 ಪ್ರೊಸೆಸರ್ ಬಳಕೆದಾರರ ಅನುಭವದ ಮಟ್ಟವನ್ನು ಕಳೆಗುಂದಿಸುವುದಿಲ್ಲ. ಇದರಲ್ಲಿನ ಟ್ರಿಪಲ್ ಕ್ಯಾಮೆರಾ ಸಿಸ್ಟಂನಲ್ಲಿ 48 ಎಂಪಿ ಮೇನ್ ಸೆನ್ಸಾರ್ ಇರಲಿದೆ. ಈ ಸೆನ್ಸಾರ್ನಲ್ಲಿ ಅತ್ಯುತ್ತಮ ಗುಣಮಟ್ಟದ ಎಫ್/1.7 ಅಪೆರ್ಚರ್ ಮತ್ತು 5000ಎಂಎಎಚ್ ಬ್ಯಾಟರಿ ಹಾಗೂ 20W ಟರ್ಬೋಪವರ್ ಚಾರ್ಜಿಂಗ್ ವ್ಯವಸ್ಥೆಯೊಂದಿಗೆ ಎರಡು ದಿನಗಳ ಬ್ಯಾಟರಿ ಬಾಳಿಕೆ ಬರಲಿದೆ.
ಸೂಪರ್ ರೆಸ್ಪಾನ್ಸಿವ್ ಕ್ವಾಲ್ಕಂ ಸ್ನ್ಯಾಪ್ ಡ್ರಾಗನ್ 662 ಮೊಬೈಲ್ ಪ್ಲಾಟ್ ಫಾರ್ಮ್ ಅನ್ನು ಹೊಂದಿರುವ ವಿಶ್ವದ ಮೊಟ್ಟ ಮೊದಲ ಸ್ಮಾರ್ಟ್ ಫೋನ್ಗಳಲ್ಲಿ ಒಂದಾಗಿದೆ. ಎಐ ಕಾರ್ಯಕ್ಷಮತೆ ಮತ್ತು ಡೈನಾಮಿಕ್ ಕ್ಯಾಮೆರಾ ಸಾಮರ್ಥ್ಯಗಳನ್ನು ಒಳಗೊಂಡಿದೆ. ವಿವಿಧ ರೀತಿಯ ಗ್ರಾಫಿಕ್ಸ್ನೊಂದಿಗೆ ಅಗಾಧ ಪ್ರಮಾಣದ ಗೇಮ್ಸ್ ಮತ್ತು ವಿಡಿಯೋಗಳನ್ನು ಎಂಜಾಯ್ ಮಾಡಬಹುದಾಗಿದೆ. ಸ್ನ್ಯಾಪ್ ಡ್ರಾಗನ್ 662 ಹೆಚ್ಚಿಸಲ್ಪಟ್ಟಿರುವ ವೇಗಗಳು ಮತ್ತು ಆನ್ ಡಿವೈಸ್ ಕಾರ್ಯಕ್ಷಮತೆಯೊಂದಿಗೆ ನಿರ್ಮಾಣ ಮಾಡಲ್ಪಟ್ಟಿದೆ. ಕಡಿಮೆ ಲ್ಯಾಗ್ನೊಂದಿಗೆ ತಡೆರಹಿತವಾಗಿ ಹಲವು ಟಾಸ್ಟ್ಗಳನ್ನು ಮಾಡಿಕೊಳ್ಳಬಹುದಾಗಿದೆ. ಇದರ ಜತೆಗೆ ಪ್ರತಿಯೊಂದು ಸ್ಪರ್ಶ, ಟ್ಯಾಪ್ ಮತ್ತು ಸ್ವೈಪ್ನಲ್ಲಿಯೂ ಫೋನ್ನಿಂದ ನಯವಾದ ಅನುಭವವನ್ನು ಪಡೆಯಲಿದ್ದೀರಿ. 4ಜಿಬಿ ರ‍್ಯಾಮ್ ಹೊಂದಿದೆ.
ಇದರಲ್ಲಿನ ಸೆನ್ಸಾರ್ ಮತ್ತು ಮ್ಯಾಕ್ರೋ ವಿಶನ್ ಕ್ಯಾಮೆರಾ ಉತ್ತಮ ಫೋಟೋಗಳನ್ನು ತೆಗೆಯಲು ನೆರವಾಗುತ್ತವೆ. 48 ಎಂಪಿ ಮುಖ್ಯ ಕ್ಯಾಮೆರಾವು ಸಂಪೂರ್ಣವಾಗಿ ಕ್ವಾಡ್ ಪಿಕ್ಸೆಲ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಇದರಲ್ಲಿ 4X ಲೈಟ್ ಸೆನ್ಸಿಟಿವಿಟಿ, ನೈಟ್ ವಿಶನ್ ಮೋಡ್ ಮತ್ತು ಕ್ಲಾಸ್ ಲೀಡಿಂಗ್, ಲಾರ್ಜ್ ಎಫ್/1.7 ಅಪೆರ್ಚರ್ ವೈಶಿಷ್ಟ್ಯತೆಗಳಿವೆ. ಈ ವೈಶಿಷ್ಟ್ಯತೆಗಳಿಂದ ಮಂದ ಬೆಳಕಿನಲ್ಲಿಯೂ ಅತ್ಯಂತ ಬ್ರೈಟ್ ಆಗಿರುವ ಫೋಟೋ ಕ್ಲಿಕ್ಕಿಸಬಹುದಾಗಿದೆ. ಆಳವಾದ ಸೆನ್ಸಾರ್ನೊಂದಿಗೆ ಮುಖ್ಯ ಕ್ಯಾಮೆರಾವು ಹಿನ್ನೆಲೆಯನ್ನು ಸ್ವಯಂಚಾಲಿತವಾಗಿ ಬ್ಲರ್ ಅಂದರೆ ಮಸುಕು ಮಾಡುವ ಗುಣವನ್ನು ಹೊಂದಿದೆ. ಮ್ಯಾಕ್ರೋ ವಿಶನ್ ಕ್ಯಾಮೆರಾದೊಂದಿಗೆ 4X ಸೌಲಭ್ಯದಿಂದ ವಸ್ತುವಿನ ತೀರಾ ಸನಿಹಕ್ಕೆ ಕೊಂಡೊಯ್ಯುವ ಸ್ಟಾಂಡರ್ಡ್ ಲೆನ್ಸ್ಗಳಿವೆ. ಹೀಗಾಗಿ ಅತ್ಯಂತ ಚಿಕ್ಕದಾದ ವಸ್ತುವಿನ ಮೇಲೆಯೂ ಅತ್ಯುತ್ತಮವಾಗಿ ಫೋಕಸ್ ಮಾಡಬಹುದಾಗಿದೆ.