ನವದೆಹಲಿ:ಕಳೆದ ಐದು ವರ್ಷಗಳ ಅವಧಿಯಲ್ಲಿ ಮೊಬೈಲ್ ಡೇಟಾ ದರವು ಶೇ 95ರಷ್ಟು ಕುಸಿದು, ಪ್ರತಿ ಜಿಬಿ ಡೇಟಾ ₹ 11.78ಯಲ್ಲಿ ಲಭ್ಯವಾಗುತ್ತಿದೆ. ಇದೇ ಅವಧಿಯಲ್ಲಿ ಆದಾಯ ದರ 2.5 ಪಟ್ಟು ಹೆಚ್ಚಾಗಿ ₹ 54,671 ಕೋಟಿಗೆ ತಲುಪಿದೆ ಎಂದು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತಿಳಿಸಿದೆ.
ದೇಶದಲ್ಲಿ 2014ರ ವೇಳೆ 828 ದಶಲಕ್ಷ ಜಿಬಿಯ ಡೇಟಾ ಬಳಕೆ 2018ರಲ್ಲಿ 56 ಪಟ್ಟು ಹೆಚ್ಚಳವಾಗಿ 46,404 ದಶಲಕ್ಷ ಜಿಬಿಗೆ ಏರಿದೆ. ಸರಾಸರಿ ದತ್ತಾಂಶ ಬಳಕೆ ಪ್ರತಿ ಅವಧಿಯಲ್ಲಿ ಪ್ರತಿ ಚಂದಾದಾರರಿಗೆ 0.27 ಜಿಬಿಯಿಂದ 7.6 ಜಿಬಿಗೆ ಹೆಚ್ಚಳವಾಗಿದೆ ಎಂದು ಟ್ರಾಯ್ ತನ್ನ ವರದಿಯಲ್ಲಿ ತಿಳಿಸಿದೆ.