ನವದೆಹಲಿ: ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್ಐ) ಮತ್ತೆ ಬೆಲೆ ಏರಿಕೆಯ ಮೊರೆ ಹೋಗಿದೆ. ಕಾರು ಉತ್ಪಾದನಾ ಕಂಪನಿಯು ತನ್ನೆಲ್ಲಾ ಮಾದರಿಗಳ ಮೇಲಿನ ಬೆಲೆಯನ್ನು ಶೇ. 4.3ರವರೆಗೆ ಹೆಚ್ಚಿಸಿದೆ.
ಇನ್ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಜನಪ್ರಿಯ ಎಂಎಸ್ಐ ಈ ನಿರ್ಧಾರ ಕೈಗೊಂಡಿದೆ. ವಿವಿಧ ಇನ್ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಈಗಾಗಲೇ ಕಂಪನಿಯ ವಾಹನಗಳ ವೆಚ್ಚವು ಪ್ರತಿಕೂಲ ಪರಿಣಾಮ ಬೀರಿದೆ ಎಂದು ಕಂಪನಿ ಹೇಳಿತ್ತು.
ಆ ಮೂಲಕ ಬೆಲೆ ಏರಿಕೆ ಮಾಡಿ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿ, ಈಗಾಗಲೇ ತನ್ನೆಲ್ಲಾ ಮಾದರಿಗಳ ಮೇಲಿನ ಬೆಲೆಯನ್ನು ಹೆಚ್ಚಿಸಿತ್ತು. ಇದೀಗ ಮತ್ತೆ ಬೆಲೆಯನ್ನು ಶೇ. 4.3ರವರೆಗೆ ಹೆಚ್ಚಿಸಿದೆ.
ಇದನ್ನೂ ಓದಿ:ತಾಜಾ ಮಾಂಸ: ಪ್ರತಿ ಸೆಕೆಂಡ್ಗೆ ಒಂದು ಆರ್ಡರ್..! ಚಿಕನ್ ಪ್ರಿಯರೇ ಜಾಸ್ತಿಯಂತೆ!!
ಕಳೆದ ವರ್ಷ ಮೂರು ಬಾರಿ ವಾಹನ ಬೆಲೆಗಳನ್ನು ಹೆಚ್ಚಿಸಿತ್ತು. ಜನವರಿಯಲ್ಲಿ ಶೇ.1.4, ಏಪ್ರಿಲ್‌ನಲ್ಲಿ ಶೇ.1.6 ಮತ್ತು ಸೆಪ್ಟೆಂಬರ್‌ನಲ್ಲಿ ಶೇ.1.9ರಷ್ಟು ಬೆಲೆ ಹೆಚ್ಚಿಸಿದೆ. ಹೊಸ ಬೆಲೆಗಳು ಇಂದಿನಿಂದ ಜಾರಿಗೆ ಬರಲಿವೆ.