ಕರ್ನಾಟಕ

karnataka

ETV Bharat / business

ಮತ್ತೆ 22,550 ರೂ. ಏರಿಕೆ ಮಾಡಿದ ಮಾರುತಿ: ಯಾವೆಲ್ಲಾ ಕಾರುಗಳಿಗೆ ಅನ್ವಯ? - ಮಾರುತಿ ಸುಜುಕಿ ಲೆಟೆಸ್ಟ್ ಸುದ್ದಿ

ಸೆಲೆರಿಯೊ ಮತ್ತು ಸ್ವಿಫ್ಟ್ ಹೊರತುಪಡಿಸಿ ಕಂಪನಿಯ ಎಲ್ಲ ಮಾದರಿಗಳು ಬೆಲೆ ಹೆಚ್ಚಳ ಆಯಾಮದ ವ್ಯಾಪ್ತಿಗೆ ಬರುತ್ತವೆ. ನಾನಾ ಭಗೆಯ ಇನ್ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಕಂಪನಿಯು ಆಯ್ದ ಮಾದರಿಗಳಿಗೆ ಬೆಲೆ ಏರಿಕೆ ಮಾಡುತ್ತಿದೆ ಎಂದು ಆಟೋ ಮೇಜರ್ ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

Maruti Suzuki
Maruti Suzuki

By

Published : Apr 16, 2021, 2:31 PM IST

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ತನ್ನ ಹೆಚ್ಚಿನ ಮಾದರಿಗಳ ಬೆಲೆಯನ್ನು 22,500 ರೂ.ವರೆಗೆ ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ.

ಸೆಲೆರಿಯೊ ಮತ್ತು ಸ್ವಿಫ್ಟ್ ಹೊರತುಪಡಿಸಿ ಕಂಪನಿಯ ಎಲ್ಲ ಮಾದರಿಗಳು ಬೆಲೆ ಹೆಚ್ಚಳ ಆಯಾಮದ ವ್ಯಾಪ್ತಿಗೆ ಬರುತ್ತವೆ. ನಾನಾ ಭಗೆಯ ಇನ್ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಕಂಪನಿಯು ಆಯ್ದ ಮಾದರಿಗಳಿಗೆ ಬೆಲೆ ಏರಿಕಡ ಮಾಡುತ್ತಿದೆ ಎಂದು ಆಟೋ ಮೇಜರ್ ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

ಇದನ್ನೂ ಓದಿ: ಭಾರತದಲ್ಲಿ ಬಾಗಿಲು ಮುಚ್ಚಲಿರುವ ಅಮೆರಿಕದ ಸಿಟಿ ಬ್ಯಾಂಕ್

ಮಾಡಲ್​ಗಳಾದ್ಯಂತ ಎಕ್ಸ್‌ ಶೋರೂಂ ಬೆಲೆಯಲ್ಲಿ (ದೆಹಲಿ) ಸರಾಸರಿ ಸರಾಸರಿ ಬೆಲೆ ಹೆಚ್ಚಳವು ಶೇ 1.6 ರಷ್ಟು ಆಗಿದೆ. ಹೊಸ ಬೆಲೆಗಳು ಶುಕ್ರವಾರದಿಂದ ಜಾರಿಯಲ್ಲಿವೆ ಎಂದು ಎಂಎಸ್‌ಐ ತಿಳಿಸಿದೆ.

ಕಂಪನಿಯು ಆಲ್ಟೊದಿಂದ ಎಸ್-ಕ್ರಾಸ್ ವರೆಗಿನ ವಿವಿಧ ಮಾಡಲ್​ಗಳನ್ನು ಮಾರಾಟ ಮಾಡುತ್ತದೆ. ಇದರ ಬೆಲೆ 2.99 ಲಕ್ಷದಿಂದ 12.39 ಲಕ್ಷ ರೂ. (ಎಕ್ಸ್ ಶೋರೂಂ ದೆಹಲಿ) ಇವೆ.

ಕಳೆದ ವರ್ಷದಲ್ಲಿ ವಿವಿಧ ವಾಹನಗಳ ಇನ್ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಕಂಪನಿಯ ವಾಹನಗಳ ವೆಚ್ಚವು ಪ್ರತಿಕೂಲ ಪರಿಣಾಮ ಬೀರಿದೆ ಎಂದು ಮಾರ್ಚ್​ನಲ್ಲಿ ಕಾರು ಮಾರುಕಟ್ಟೆ ಮುಖಂಡರು ಹೇಳಿದ್ದರು.

ಇನ್ಪುಟ್ ವೆಚ್ಚದ ಹೆಚ್ಚಳದಿಂದಾಗಿ ಈ ವರ್ಷದ ಜನವರಿ 18ರಂದು ವಾಹನ ತಯಾರಕರು ಆಯ್ದ ಮಾದರಿಗಳ ಬೆಲೆಯನ್ನು 34,000 ರೂ. ಹೆಚ್ಚಿಸುವುದಾಗಿ ಘೋಷಿಸಿತ್ತು.

ABOUT THE AUTHOR

...view details