ನವದೆಹಲಿ:ಭಾರತದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ಇಂದು ಬಲೇನೊ ಕಾರಿನ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದೆ.
ಎರಡು ದಿನಗಳ ಹಿಂದೆ ಮಾರುತಿ ಸುಜುಕಿ ಕೆಲ ಕಾರುಗಳ ಬೆಲೆಯನ್ನು ₹5000 ಇಳಿಕೆ ಮಾಡಿತ್ತು. ಈ ನಿರ್ಧಾರದ ತೆಗೆದುಕೊಂಡ ಎರಡೇ ದಿನಗಳಲ್ಲಿ ಮಾರುತಿ ಕಂಪನಿ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಬಲೇನೊ ಕಾರಿನ ಬೆಲೆಯನ್ನು ಒಂದು ಲಕ್ಷ ದರ ಕಡಿತಗೊಳಿಸಿದೆ.