ಮುಂಬೈ: ಸತತ ಮೂರು ದಿನಗಳ ಕಾಲ ಕುಸಿತದ ಹಾದಿಯಲ್ಲಿದ್ದ ಸೆನ್ಸೆಕ್ಸ್ 2019ರ ಕ್ಯಾಲೆಂಡರ್ ವರ್ಷದ ಕೊನೆಯ ಶುಕ್ರವಾರದಂದು ಭರ್ಜರಿ ವಹಿವಾಟು ನಡೆಸಿದೆ.
ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಶೇ 1ರಷ್ಟು ಏರಿಕೆ ದಾಖಲಿಸಿದ್ದು, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ನಿಫ್ಟಿಯ ದಿನದ ಏರಿಕೆಯಲ್ಲಿ ಶೇ 50ರಷ್ಟು ಕಾಣಿಕೆ ನೀಡಿವೆ.
10,000 ಕೋಟಿ ರೂ.ಗಳ ಮೌಲ್ಯದ 10 ವರ್ಷದ ಬಾಂಡ್‌ಗಳನ್ನು ಖರೀದಿಸುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗುರುವಾರ ಪ್ರಕಟಿಸಿದ ನಂತರ ಸಾರ್ವಜನಿಕ ವಲಯದ ಬ್ಯಾಂಕ್ಗಳ (ಪಿಎಸ್‌ಬಿ) ಶೇ 3ರಷ್ಟು ಪ್ರಗತಿ ಸಾಧಿಸಿವೆ.
ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 411.38 ಅಂಶಗಳ ಏರಿಕೆಯೊಂದಿಗೆ 41,575 ಅಂಶಗಳ ಮಟ್ಟದಲ್ಲೂ ನಿಫ್ಟ್ 119.25 ಅಂಶಗಳ ಜಿಗತದೊಂದಿಗೆ 12,245 ಅಂಶಗಳ ಏರಿಕೆಯೊಂದಿಗೆ ಆಶಾದಾಯಕವಾಗಿ ಅಂತ್ಯವಾಯಿತು. ಚೀನಾ- ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಅಮೆರಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದು, ಗುರುವಾರದ ವಹಿವಾಟಿನಂದು ದಾಖಲೆ ವಹಿವಾಟು ನಡೆಸಿತು. ಡೌ ಜೋನ್ಸ್ ಇಂಡಸ್ಟ್ರೀಯಲ್ ಸರಾಸರಿ, ಎಸ್ ಆ್ಯಂಡ್ ಪಿ 500 ಮತ್ತ ನಾಸ್ಡಕ್ ಹೊಸ ದಾಖಲೆ ಸೃಷ್ಟಿಸಿದವು.