ಕರ್ನಾಟಕ

karnataka

ಚಿನ್ನ ಮುಟ್ಟಂಗಿಲ್ಲ, ಬೆಳ್ಳಿ ಕೊಳ್ಳಂಗಿಲ್ಲ..! ಅರ್ಧ ಲಕ್ಷಕ್ಕೇರಿದ ಬೆಳ್ಳಿ, ಬಂಗಾರ ಬೆಲೆ ಕೇಳುವಂತಿಯೇ ಇಲ್ಲ

By

Published : Feb 24, 2020, 5:00 PM IST

ಚೀನಿವಾರ ಪೇಟೆಯಲ್ಲಿ ಆಭರಣ ಬೆಲೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಏಪ್ರಿಲ್ ವಿತರಣೆಯ ಚಿನ್ನದ ಫ್ಯೂಚರ್​ ಬೆಲೆ ಮೊದಲ ಬಾರಿಗೆ 10 ಗ್ರಾಂ.ಗೆ 43,000 ರೂ. ದಾಟಿದ್ದು, ಈ ಮೂಲಕ ಸಾರ್ವಕಾಲಿಕ ಗರಿಷ್ಠ ಏರಿಕೆ ದಾಖಲಿಸಿದೆ.

Gold
ಚಿನ್ನ

ನವದೆಹಲಿ: ಕೊರೊನಾ ವೈರಾಣು ಸಂಬಂಧಿತ ಮೃತರ ಸಂಖ್ಯೆ ಏರಿಕೆಯು ಹೂಡಿಕೆಯ ಸುರಕ್ಷತೆಯ ದೃಷ್ಟಿಯಿಂದ ಚಿನ್ನವು ಮತ್ತಷ್ಟು ನಂಬಿಕೆ ಗಳಿಸಿಕೊಂಡಿದೆ ಮತ್ತು ಜಾಗತಿಕ ಕಚ್ಚಾ ತೈಲದ ದರ ಮತ್ತೆ ಇಳಿಕೆಯಾಗಿದ್ದು, ಭಾರತೀಯ ಬೆಂಚ್ ಮಾರ್ಕ್​ ಸೂಚ್ಯಂಕ ಸೆನ್ಸೆಕ್ಸ್ 800 ಅಂಶಗಳಷ್ಟು ಕುಸಿತ ಕಂಡಿದೆ.

ಚೀನಾದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಹೆಚ್ಚಳದ ಕಳವಳ ಹೂಡಿಕೆಯ ಸುರಕ್ಷಿತೆಯಾದ ಚಿನ್ನದ ಬೇಡಿಕೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಆರ್ಥಿಕತೆ ಹೆಚ್ಚಿಸಲು ಚೀನಾ ಕೈಗೊಂಡ ಆಕ್ರಮಣಕಾರಿ ನೀತಿಗಳ ಸರಳೀಕರಣದ ಕ್ರಮಗಳು ಮತ್ತು ಮಧ್ಯಮ ಭೌತಿಕ ಮಾರುಕಟ್ಟೆ ಚಟುವಟಿಕೆಗಳು ತಲೆಕೆಳಗಾಗುವ ಸಾಧ್ಯತೆಯಿದೆ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಮುಖ್ಯಸ್ಥ ವಿ ಹರೀಶ್ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರದಂದು ದೇಶದ 10 ಗ್ರಾಂ. ಚಿನ್ನದ ಮೇಲೆ 953 ರೂ. ಏರಿಕೆಯಾಗಿ 44,472 ರೂ.ಯಲ್ಲಿ ಮಾರಾಟ ಆಗುತ್ತಿದೆ. ಇದೇ ರೀತಿ ಕೆ.ಜಿ. ಬೆಳ್ಳಿ ದರ ಸಹ 50 ಸಾವಿರ ಗಡಿ ದಾಟಿದ್ದು, 51,000 ರೂ. ದಾಖಲಾಗಿದೆ.

ಸೆನ್ಸೆಕ್ಸ್​ ಮಹಾಕುಸಿತ

ಮುಂಬೈ ಪೇಟೆಯು ಸಹ ಜಾಗತಿಕ ಏರಿಳಿತದ ಪ್ರಭಾವದಿಂದ ಸೆನ್ಸೆಕ್ಸ್ 806 ಅಂಶಗಳಷ್ಟು ಇಳಿಕೆ ದಾಖಲಿಸಿದ್ದು, 40,363.23 ಅಂಶಗಳಷ್ಟು ಕುಸಿತವಾಗಿದೆ. ಏತನ್ಮಧ್ಯೆ, ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 251.45 ಅಂಶಗಳಷ್ಟು ಇಳಿಕೆಯಾಗಿ 11,829.40 ಅಂಶಗಳಿಗೆ ತಲುಪಿದೆ.

ABOUT THE AUTHOR

...view details