ಮುಂಬೈ:ಭಾರತೀಯ ಸಂವೇದಿ ಸೂಚ್ಯಂಕದಲ್ಲಿ ಇಂದು ಭಾರಿ ಮಟ್ಟದ ಏರಿಕೆ ಕಂಡು ಬಂದಿದೆ. ಕೊರೊನಾ ವೈರಸ್ಗೆ ಔಷಧ ಕಂಡು ಹಿಡಿದಿರುವ ಸುದ್ದಿ ಹೊರಬೀಳುತ್ತಿದ್ದಂತೆ ಮುಂಬೈ ಷೇರು ಪೇಟೆಯಲ್ಲಿ ಈ ಏರಿಕೆ ಕಂಡು ಬಂದಿದೆ.
600 ಅಂಕಗಳ ಏರಿಕೆ ಕಂಡು ಬರುತ್ತಿದ್ದಂತೆ ಸೆನ್ಸೆಕ್ಸ್ 43 ಸಾವಿರ ಅಂಕ ದಾಟಿದ್ದು, ನಿಫ್ಟಿ ಕೂಡ 137 ಅಂಕಗಳ ಏರಿಕೆಯೊಂದಿಗೆ 12,598 ಅಂಕ ದಾಖಲು ಮಾಡಿದೆ. ಕೊರೊನಾ ವೈರಸ್ಗೆ ಔಷಧ ಅಭಿವೃದ್ಧಿ ಮಾಡಿರುವ ಆಶಾಭಾವನೆ ಮೂಡಿರುವುದು ಈ ಬೆಳವಣಿಗೆಗೆ ಕಾರಣ ಎಂದು ಹೇಳಲಾಗುತ್ತಿದೆ. ಇದರ ಜತೆಗೆ ಬರುವ ದಿನಗಳಲ್ಲಿ ಷೇರು ಮಾರುಕಟ್ಟೆ ಹಾಗೂ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಂಡು ಬರಲಿದೆ ಎನ್ನಲಾಗಿದೆ.