ಕರಡಿ ಕುಣಿತಕ್ಕೆ ಅಂಗಾತ ಬಿದ್ದ ಹೂಡಿಕೆದಾರ.. ಕೊರೊನಾ ಕಂಟಕಕ್ಕೆ 11.42 ಲಕ್ಷ ಕೋಟಿ ಸಂಪತ್ತು ಕಲ್ಲಾಸ್!
ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ತೀವ್ರಗೊಳ್ಳುವ ಮಾರ್ಗಗಳ ನಡುವೆಯೂ ಬಿಎಸ್ಇ 30 ಷೇರು ಸೂಚ್ಯಂಕ 2,919.26 ಅಂಶಗಳು ಕುಸಿದು 32778.14 ಅಂಶಗಳ ಮಟ್ಟದಲ್ಲೂ ನಿಫ್ಟಿ 868.25 ಅಂಶಗಳಷ್ಟು ಇಳಿದು 9,590.15 ಅಂಶಗಳ ಮಟ್ಟದಲ್ಲಿ ಶೋಚನೀಯವಾಗಿ ಅಂತ್ಯವಾಯಿತು.
ಮಾರುಕಟ್ಟೆ
By
Published : Mar 12, 2020, 4:40 PM IST
ಮುಂಬೈ:ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ ಜಾಗತಿಕ ಸಾಂಕ್ರಮಿಕ ರೋಗವೆಂದು ಘೋಷಿಸಿದ ತರುವಾಯ ವಿಶ್ವದಾದ್ಯಂತ ಇರುವ ಷೇರುಪೇಟೆಗಳಲ್ಲಿ ತಲ್ಲಣ ಸೃಷ್ಟಿಯಾಗಿದೆ.
ಮುಂಬೈ ಷೇರುಪೇಟೆ ಹೂಡಿಕೆದಾರರು ಗುರುವಾರದ ವಹಿವಾಟಿನಲ್ಲಿ 8 ಟ್ರಿಲಿಯನ್ ರೂ.ನಷ್ಟು ಸಂಪತ್ತು ಕಳೆದುಕೊಂಡಿದ್ದಾರೆ.
ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ತೀವ್ರಗೊಳ್ಳುವ ಮಾರ್ಗಗಳ ನಡುವೆಯೂ ಬಿಎಸ್ಇ 30 ಷೇರು ಸೂಚ್ಯಂಕ 2,919.26 ಅಂಶಗಳು ಕುಸಿದು 32778.14 ಅಂಶಗಳ ಮಟ್ಟದಲ್ಲೂ ನಿಫ್ಟಿ 868.25 ಅಂಶಗಳಷ್ಟು ಇಳಿದು 9,590.15 ಅಂಶಗಳ ಮಟ್ಟದಲ್ಲಿ ಶೋಚನೀಯವಾಗಿ ಅಂತ್ಯವಾಯಿತು.
ದೇಶದಿಂದ ದೇಶಕ್ಕೆ ಕೊರೊನಾ ಜಿಗಿಯುತ್ತಿದ್ದು ದಲಾಲ್ ಸ್ಟ್ರೀಟ್ನಲ್ಲಿ ಹೂಡಿಕೆದಾರರ ಸಂಪತ್ತು 11.42 ಲಕ್ಷ ಕೋಟಿ ರೂ.ನಷ್ಟ ಕರಗಿ 126 ಲಕ್ಷ ಕೋಟಿ ರೂ.ಗೆ ತಲುಪಿದೆ.
2008ರ ಮಾರ್ಚ್ 21ರ ಬಳಿಕ ಇಂದಿನ ಪೇಟೆಯು ದಾಖಲೆಯ ಪ್ರಮಾಣದಲ್ಲಿ ಕುಸಿತವಾಗಿದೆ. ಅಂದು 1,408.35 ರಷ್ಟು ಕುಸಿತವಾಗಿದ್ದರೆ 2020ರ ಮಾರ್ಚ್ 12ರಂದು 2,919.26 ಅಂಶಗಳು ಇಳಿಕೆಯಾಗಿದೆ.