ಕರ್ನಾಟಕ

karnataka

ಒಂದೇ ದಿನ 5.3 ಲಕ್ಷ ಕೋಟಿ ರೂ. ಸಂಪತ್ತು ಕಳೆದುಕೊಂಡ ಹೂಡಿಕೆದಾರರು

By

Published : Feb 26, 2021, 9:55 PM IST

ಶುಕ್ರವಾರದ ವಹಿವಾಟು ಮುಕ್ತಾಯದ ವೇಳೆಗೆ ಬಿಎಸ್‌ಇ-ಪಟ್ಟಿಮಾಡಿದ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ 5,37,375.94 ಕೋಟಿ ರೂ.ಗಳಿಂದ 2,00,81,095.73 ಕೋಟಿ ರೂ.ಗೆ ಇಳಿದಿದೆ. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 1,939.32 ಅಂಕ ಅಥವಾ ಶೇ. 3.80ರಷ್ಟು ತಗ್ಗಿ 49,099.99 ಅಂಕಗಳಿಗೆ ತಲುಪಿದೆ. ಇದು ಕಳೆದ ವರ್ಷದ ಮೇ 4ರ ನಂತರದ ಒಂದು ದಿನದ ಅತ್ಯಧಿಕ ಕುಸಿತವಾಗಿದೆ.

Cash
Cash

ನವದೆಹಲಿ: ವಾರಂತ್ಯದ ಶುಕ್ರವಾರದ ವಹಿವಾಟಿನಂದು ಬಿಎಸ್‌ಇ ಸೆನ್ಸೆಕ್ಸ್ 1,900 ಅಂಕಗಳಿಗೂ ಅಧಿಕ ಕುಸಿತ ಕಂಡಿದ್ದರಿಂದ ಹೂಡಿಕೆದಾರರ ಸಂಪತ್ತು 5.3 ಲಕ್ಷ ಕೋಟಿ ರೂ.ನಷ್ಟು ಕರಗಿದೆ.

ದಿನದ ವಹಿವಾಟು ಮುಕ್ತಾಯದ ವೇಳೆಗೆ ಬಿಎಸ್‌ಇ-ಪಟ್ಟಿಮಾಡಿದ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ 5,37,375.94 ಕೋಟಿ ರೂ.ಗಳಿಂದ 2,00,81,095.73 ಕೋಟಿ ರೂ.ಗೆ ಇಳಿದಿದೆ. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 1,939.32 ಅಂಕ ಅಥವಾ ಶೇ. 3.80ರಷ್ಟು ತಗ್ಗಿ 49,099.99 ಅಂಕಗಳಿಗೆ ತಲುಪಿದೆ. ಇದು ಕಳೆದ ವರ್ಷದ ಮೇ 4ರ ನಂತರದ ಒಂದು ದಿನದ ಅತ್ಯಧಿಕ ಕುಸಿತವಾಗಿದೆ.

ಇದನ್ನೂ ಓದಿ: ಜನವರಿಯಲ್ಲಿ ಭಾರತದ ಎಂಟು ಪ್ರಮುಖ ಕೈಗಾರಿಕೆಗಳ ಉತ್ಪಾದನೆ ನಿಲ್​​​​

ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 568.20 ಅಂಕ ಇಳಿಕೆಯಾಗಿ 14,529.15 ಅಂಕಗಳ ಮಟ್ಟದಲ್ಲಿ ಮುಕ್ತಾಯವಾಯಿತು. ಇದು ಕಳೆದ ವರ್ಷ ಮಾರ್ಚ್ 23ರ ನಂತರದ ಅತಿದೊಡ್ಡ ಏಕದಿನ ಕುಸಿತವಾಗಿದೆ.

ಬಾಂಡ್ ಮೌಲ್ಯ ಇಳಿಕೆ, ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಹಣದುಬ್ಬರ ದತ್ತಾಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದ ಹೂಡಿಕೆದಾರರು, ಅಮೆರಿಕದ ಹೊಸ ಉತ್ತೇಜಕ ಪ್ರಕಟಣೆಯ ಸುತ್ತಲಿನ ಬೆಳವಣಿಗೆಗಳತ್ತ ಕೂಡ ದೃಷ್ಟಿ ಇರಿಸಿಕೊಂಡಿದ್ದಾರೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ನ ಚಿಲ್ಲರೆ ಸಂಶೋಧನಾ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ.

ABOUT THE AUTHOR

...view details