ಕರ್ನಾಟಕ

karnataka

ETV Bharat / business

ಮಹೀಂದ್ರ ಥಾರ್ ಬಂತು ದಾರಿ ಬಿಡಿ: ಕಾರ್ ಪ್ರಿಯರ ಮನ ಕದಿಯುವ ಥಾರ್​​ನ ಬೆಲೆ, ವೈಶಿಷ್ಟ್ಯ ಹೀಗಿದೆ..

ಐಷರಾಮಿ ಸೌಲಭ್ಯಗಳನ್ನು ಹೊಂದಿರುವ ಹಾರ್ಡ್ ಟಾಪ್ ಕನ್​ವರ್ಟಿಬಲ್ ಥಾರ್​ಗೆ 12.49 ಲಕ್ಷ ರೂ. ಹಾಗೂ ಡೀಸೆಲ್ ಮಾದರಿಯ ಕಾರಿಗೆ 12.95 ಲಕ್ಷ ರೂ. ನಿಗದಿಯಾಗಿದೆ. ಥಾರ್ ಖರೀದಿಗೆ ಮುಂಗಡ ಬುಕ್ಕಿಂಗ್ ಶುರುವಾಗಿದ್ದು, ಈ ತಿಂಗಳಾಂತ್ಯಕ್ಕೆ ಗ್ರಾಹಕರ ಕೈಗೆಟುಕುವ ಸಾಧ್ಯತೆ ಇದೆ.

Mahindra Thar
ಮಹೀಂದ್ರ ಥಾರ್

By

Published : Oct 2, 2020, 4:26 PM IST

ನವದೆಹಲಿ:ಮಹೀಂದ್ರ ಕಂಪನಿಯು ಸಾಹಸ ಬಯಸುವ ಕಾರು ಪ್ರಿಯರಿಗೆ ಇಷ್ಟವಾಗುವಂತಹ ಹೊಸ ಎಸ್​​ಯುವಿ ಥಾರ್ 2020ಅನ್ನು ಅಧಿಕೃತ ಬಿಡುಗಡೆ ಜೊತೆಗೆ ಅದರ ದರವನ್ನು ಬಹಿರಂಗಪಡಿಸಿದೆ.

ಆಗಸ್ಟ್​ 15ರಂದು ಅನಾವರಣಗೊಂಡಿದ್ದ 2ನೇ ತಲೆಮಾರಿನ ಜನರೇಷನ್ ಥಾರ್​ನ ಬೆಲೆಯ ಜೊತೆಗೆ ವಾಹನ ಸಾಮರ್ಥ್ಯದ ಸಂಪೂರ್ಣ ಮಾಹಿತಿ ಹಂಚಿಕೊಂಡಿತ್ತು. ಥಾರ್ ಎಎಕ್ಸ್​ ಬೆಲೆ 9.8 ಲಕ್ಷದಿಂದ 12.2 ಲಕ್ಷ ರೂ.ವರೆಗೆ ನಿಗದಿಪಡಿಸಲಾಗಿದೆ.

ಐಷರಾಮಿ ಸೌಲಭ್ಯಗಳನ್ನು ಹೊಂದಿರುವ ಹಾರ್ಡ್ ಟಾಪ್ ಕನ್​ವರ್ಟಿಬಲ್ ಥಾರ್​ಗೆ 12.49 ಲಕ್ಷ ರೂ. ಹಾಗೂ ಡೀಸೆಲ್ ಮಾದರಿಯ ಕಾರಿಗೆ 12.95 ಲಕ್ಷ ರೂ. ನಿಗದಿಯಾಗಿದೆ. ಥಾರ್ ಖರೀದಿಗೆ ಮುಂಗಡ ಬುಕ್ಕಿಂಗ್ ಶುರುವಾಗಿದ್ದು, ಈ ತಿಂಗಳಾಂತ್ಯಕ್ಕೆ ಗ್ರಾಹಕರ ಕೈಗೆಟುಕುವ ಸಾಧ್ಯತೆಯಿದೆ.

ಥಾರ್​ನಲ್ಲಿ ಆರು ಸ್ಪೀಡ್ ಮ್ಯಾನುಯಲ್ ಹಾಗೂ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ಸ್​ನಂತಹ ಆಯ್ಕೆಗಳಿವೆ. ಬಿಎಸ್​ VI ಮಾದರಿ ಎಂಜಿನ್​, 2.0 ಲೀಟರ್ ಪೆಟ್ರೋಲ್ ಹಾಗೂ 2.2 ಲೀಟರ್ ಡೀಸೆಲ್​ ಇಂಜಿನ್​ ಸಾಮರ್ಥ್ಯವಿದೆ. ಡೀಸೆಲ್​ ಚಾಲಿತ ಎಂಜಿನ್​​ 120 ಹೆಚ್​ಪಿ ಶಕ್ತಿ ಹೊರಹೊಮ್ಮಿಸಿದ್ದರೇ, ಪೆಟ್ರೋಲ್ 150 ಹೆಚ್​ಪಿ ಪವರ್ ಸಾಮರ್ಥ್ಯವಿದೆ. ನಾಲ್ಕು ಫ್ರಂಟ್​ ಫೇಸಿಂಗ್ ಸೀಟ್​ ಮತ್ತು 2+4 ಸೈಡ್ ಫೇಸಿಂಗ್ ಸೀಟ್​ಗಳಿವೆ. ರೂಫ್ ಮೌಂಟೆಡ್‌ ಸ್ಪೀಕರ್‌ ಹಾಗೂ ಡ್ಯುಯಲ್‌ ಏರ್‌ಬ್ಯಾಗ್‌ ಹೊಂದಿದೆ.

ABOUT THE AUTHOR

...view details