ಕರ್ನಾಟಕ

karnataka

ಷೇರು ಹೂಡಿಕೆದಾರರ ಸಂಪತ್ತು 32.49 ಲಕ್ಷ ಕೋಟಿ ರೂ. ಹೆಚ್ಚಳ

By

Published : Jan 8, 2021, 2:07 PM IST

ಈಕ್ವಿಟಿ ಮಾರುಕಟ್ಟೆಯಲ್ಲಿನ ಏರಿಕೆಯ ಸಹಾಯದಿಂದಾಗಿ ಬಿಎಸ್ಇ ಪಟ್ಟಿಮಾಡಿದ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣವು ಆರಂಭಿಕ ವಹಿವಾಟಿನಲ್ಲಿ 1,95,21,653.40 ಲಕ್ಷ ಕೋಟಿ ರೂ.ಗೆ (2.6 ಟ್ರಿಲಿಯನ್ ಡಾಲರ್​) ಏರಿಕೆಯಾಯಿತು. ಬಿಎಸ್‌ಇ ಸೆನ್ಸೆಕ್ಸ್ ಶುಕ್ರವಾರ 471.31 ಅಂಕ ಏರಿಕೆ ಕಂಡು 48,564.63 ಮಟ್ಟದಲ್ಲಿ ವಹಿವಾಟು ನಡೆಸಿತು.

M-cap
ಮಾರುಕಟ್ಟೆ

ನವದೆಹಲಿ:ಎರಡು ದಿನಗಳ ಕುಸಿತದ ನಂತರ ಮಾರುಕಟ್ಟೆ ಗೆಲುವಿನ ಹಾದಿಗೆ ಮರಳಿದ್ದು, ಬಿಎಸ್‌ಇ ಪಟ್ಟಿಮಾಡಿದ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು ಶುಕ್ರವಾರ ಬೆಳಗಿನ ವಹಿವಾಟಿನಲ್ಲಿ ಜೀವಿತಾವಧಿಯ ಗರಿಷ್ಠ 195.21 ಲಕ್ಷ ಕೋಟಿ ರೂ.ಗೆ ಏರಿದೆ.

ಈಕ್ವಿಟಿ ಮಾರುಕಟ್ಟೆಯಲ್ಲಿನ ಏರಿಕೆಯ ಸಹಾಯದಿಂದಾಗಿ ಬಿಎಸ್ಇ ಪಟ್ಟಿಮಾಡಿದ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣವು ಆರಂಭಿಕ ವಹಿವಾಟಿನಲ್ಲಿ 1,95,21,653.40 ಕೋಟಿ ರೂ.ಗೆ (2.6 ಟ್ರಿಲಿಯನ್ ಡಾಲರ್​) ಏರಿಕೆಯಾಯಿತು. ಬಿಎಸ್‌ಇ ಸೆನ್ಸೆಕ್ಸ್ ಶುಕ್ರವಾರ 471.31 ಅಂಕ ಏರಿಕೆ ಕಂಡು 48,564.63 ಮಟ್ಟದಲ್ಲಿ ವಹಿವಾಟು ನಡೆಸಿತು.

ಇದನ್ನೂ ಓದಿ: ಇಂದಿನಿಂದ 40 ಸಾವಿರ ತನಕ ಮಹೀಂದ್ರಾ ವಾಹನಗಳ ದರ ಏರಿಕೆ: ಯಾವೆಲ್ಲ ವೆಹಿಕಲ್​ಗೆ ಅನ್ವಯ..?

ಈಕ್ವಿಟಿ ಸೂಚ್ಯಂಕಗಳು ಗುರುವಾರ ತನಕ ಎರಡನೇ ವಹಿವಾಟಿನ ದಿನದಂದು ಇಳಿಕೆಕಂಡವು. ಈಕ್ವಿಟಿ ಹೂಡಿಕೆದಾರರು 2020ರಲ್ಲಿ 32.49 ಲಕ್ಷ ಕೋಟಿ ರೂ.ಯಷ್ಟು ಸಂಪತ್ತು ಜೇಬಿಗಿಳಿಸಿಕೊಂಡು ಶ್ರೀಮಂತರಾದರು. ಕೊರೊನಾ ವೈರಸ್​ ಸಾಂಕ್ರಾಮಿಕ ವರ್ಷದ ನಡುವೆಯೂ ಹೂಡಿಕೆದಾರರು ಈಕ್ವಿಟಿ ಮಾರುಕಟ್ಟೆಯಿಂದ ಭಾರಿ ಆದಾಯ ಗಳಿಸಿಕೊಂಡರು.

ABOUT THE AUTHOR

...view details