ನವದೆಹಲಿ: ಗ್ರಾಹಕರ ಹಕ್ಕುಗಳ ರಕ್ಷಣೆಗೆ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರದ (ಸಿಸಿಪಿಎ) ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ.
ಗ್ರಾಹಕರ ಬೆನ್ನಿಗೆ ನಿಂತ ಕೇಂದ್ರ; ವಂಚಕ ಕಂಪನಿಗಳಿಗೆ ಕಾದಿದೆ ತಕ್ಕ ಶಾಸ್ತಿ - ಗ್ರಾಹಕರ
ಪರಿಷ್ಕೃತ ಮಸೂದೆ ಅನ್ವಯ, ಯಾವುದೇ ಗ್ರಾಹಕರು ದೂರು ನೀಡಿದ ತಕ್ಷಣ ಸಿಸಿಪಿಎ ತುರ್ತಾಗಿ ಕ್ರಮ ಕೈಗೊಳ್ಳುತ್ತದೆ. ಜೊತೆಗೆ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದರು.

ಈ ಕಾಯ್ದೆಯನ್ನು ಜುಲೈ 8ರಂದು ಪರಿಚಯಿಸಲಾಯಿತು. ಸಿಸಿಪಿಎ ಮಸೂದೆಯು ಗ್ರಾಹಕ ಸಂರಕ್ಷಣಾ ಕಾಯ್ದೆ- 1986 ಅನ್ನು ಬದಲಿಸಿ ಜಾರಿಗೆ ತರಲಾಗುತ್ತಿದೆ. ಗ್ರಾಹಕರ ದೂರುಗಳ ತೀರ್ಪು, ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮತ್ತು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕ ವೇದಿಕಗಳನ್ನು ಸ್ಥಾಪಿಸುವ ಪ್ರಸ್ತಾವನೆ ಇದರಲ್ಲಿದೆ.