ನವದೆಹಲಿ: ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಸಬ್ಸಿಡಿ ರಹಿತ ಅಡಿಗೆ ಅನಿಲ ದರದಲ್ಲಿ ಭಾರೀ ಪ್ರಮಾಣದ ಬೆಲೆ ಏರಿಕೆ ಮಾಡಿದೆ.
ಗ್ರಾಹಕರಿಗೆ ಬಿಗ್ ಶಾಕ್... ಒಂದಲ್ಲ, ಎರಡಲ್ಲ ಸಿಲಿಂಡರ್ ದರದಲ್ಲಿ 144 ರೂ. ಏರಿಕೆ..! - ಸಿಲಿಂಡರ್ ಬೆಲೆ ಏರಿಕೆ
ಪರುಷ್ಕೃತ ಸಿಲಿಂಡರ್ ದರ ಏರಿಕೆಯು ಇಂದಿನಿಂದಲೇ (ಬುಧವಾರ) ಅನ್ವಯವಾಗಲಿದ್ದು, ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ 14.2 ಕೆ.ಜಿ. ಸಿಲಿಂಡರ್ ಮೇಲೆ ಸರಾಸರಿ ₹ 144 ಹೆಚ್ಚಳವಾಗಿದೆ. 2020ರ ಜನವರಿ 1ರಿಂದ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ ಮಾಡಿರಲಿಲ್ಲ. ಇಂದು ಏರಿಕೆಯಾಗಿದೆ.
ಪರಿಷ್ಕೃತ ದರ ಏರಿಕೆಯು ಇಂದಿನಿಂದಲೇ (ಬುಧವಾರ) ಅನ್ವಯವಾಗಲಿದ್ದು, ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ 14.2 ಕೆ.ಜಿ. ಸಿಲಿಂಡರ್ ಮೇಲೆ ಸರಾಸರಿ ₹ 144 ಹೆಚ್ಚಳವಾಗಿದೆ. 2020ರ ಜನವರಿ 1ರಿಂದ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ ಮಾಡಿರಲಿಲ್ಲ. ಇಂದು ಏರಿಕೆಯಾಗಿದೆ.
ಇಂಡಿಯನ್ ಆಯಿಲ್ ಅನ್ವಯ, ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಬೆಲೆ ಏರಿಕೆಯಿಂದ ಪ್ರತಿ 14.2 ಕೆ.ಜಿ. ಸಿಲಿಂಡರ್ ₹ 858.50 (₹ 144.50 ಪರಿಷ್ಕೃತ ದರ ಏರಿಕೆ ಸೇರಿ) ಲಭ್ಯವಾಗಲಿದೆ. ಉಳಿದಂತೆ ಕೋಲ್ಕತ್ತಾ ₹ 896 (₹ 149), ಮುಂಬೈ ₹ 829.50 (₹ 145) ಹಾಗೂ ಚೆನ್ನೈನಲ್ಲಿ ₹ 881 (₹147) ಯಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.