ಕರ್ನಾಟಕ

karnataka

ETV Bharat / business

ಕೊರೊನಾ ಕಹಿ ನಡುವೆ ಸಿಹಿ ಸುದ್ದಿ: ಸಿಲಿಂಡರ್ ದರದಲ್ಲಿ 122 ರೂ. ಇಳಿಕೆ - ಎಲ್​ಪಿಜಿ ಸಿಲಿಂಡರ್ ದರ ಕಡಿತ

ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ಇಂದು 100 ರೂ.ಗಳಷ್ಟು ಇಳಿಸಿವೆ. 19 ಕೆ.ಜಿ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗೆ ಕಡಿತಗೊಳಿಸಲಾಗಿದೆ. ಪ್ರತಿ ಸಿಲಿಂಡರ್​ ದರದಲ್ಲಿ 122 ರೂ. ಇಳಿಕೆ ಮಾಡಲಾಗಿದೆ. ಆದರೆ, 14.2 ಕೆ.ಜಿ ಸಿಲಿಂಡರ್ ದರಗಳಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ.

LPG Gas
LPG Gas

By

Published : Jun 1, 2021, 3:11 PM IST

ನವದೆಹಲಿ:ಕೊರೊನಾ ವೈರಸ್​​ನ ಸಾಂಕ್ರಾಮಿಕದ ನಡುವೆ ಜನರಿಗೆ ಖುಷಿ ಕೊಡುವಂತಹ ಸಿಹಿ ಸುದ್ದಿ ಹೊರಬಿದ್ದಿದೆ.

ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ಇಂದು 100 ರೂ.ಗಳಷ್ಟು ಇಳಿಸಿವೆ. 19 ಕೆ.ಜಿ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗೆ ಕಡಿತಗೊಳಿಸಲಾಗಿದೆ. ಪ್ರತಿ ಸಿಲಿಂಡರ್​ ದರದಲ್ಲಿ 122 ರೂ. ಇಳಿಕೆ ಮಾಡಲಾಗಿದೆ. ಆದರೆ, 14.2 ಕೆ.ಜಿ ಸಿಲಿಂಡರ್ ದರಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.

ಇದನ್ನು ಓದಿ: ತೆರಿಗೆ ಪಾವತಿದಾರರ ಗಮನಕ್ಕೆ!: ಇಂದಿನಿಂದ 6 ದಿನ ಐಟಿ ಫೈಲಿಂಗ್ ಇ- ಪೋರ್ಟಲ್ ಬದಲು

ಈ ಎಲ್‌ಪಿಜಿ ಬೆಲೆ ಕಡಿತದ ನಂತರ, ಜೂನ್ 1ರಿಂದ ಪರಿಷ್ಕೃತ ಬೆಲೆ ಪ್ರತಿ ಸಿಲಿಂಡರ್‌ಗೆ 1473.50 ರೂ. ಆಗಲಿದೆ. ಈ ಹಿಂದೆ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್‌ಗೆ 1595.50 ರೂ.ಯಷ್ಟು ಇತ್ತು. ಮೇ ತಿಂಗಳಲ್ಲಿ ತೈಲ ಕಂಪನಿಗಳು ಎಲ್‌ಪಿಜಿ ಅನಿಲ ಬೆಲೆಯನ್ನು ಸಿಲಿಂಡರ್‌ಗೆ 45 ರೂ.ಗೆ ಇಳಿಸಿವೆ ಎಂದು ವರದಿಯಾಗಿದೆ.

ಎಲ್​ಪಿಜಿ ಅನಿಲ ಬೆಲೆ ನಗರದಿಂದ ನಗರಕ್ಕೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಸ್ಥಳೀಯ ತೆರಿಗೆ ಹಾಗೂ ವ್ಯಾಟ್​ಗೆ ಅನುಗುಣವಾಗಿ ಬದಲಾಗುತ್ತದೆ.

ABOUT THE AUTHOR

...view details