ನವದೆಹಲಿ:ಕಳೆದ ಕೆಲವು ದಿನಗಳಿಂದ ಚಿಲ್ಲರೆ ಇಂಧನದ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಬೆನ್ನಲ್ಲೇ ದ್ರವೀಕೃತ ಪೆಟ್ರೋಲಿಯಂ ಅನಿಲದ (ಎಲ್‌ಪಿಜಿ) ಬೆಲೆ ಹೆಚ್ಚಳವಾಗಿದ್ದು, ದೇಶಿ ಬಳಕೆಯ 14.2 ಕೆ.ಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 50 ರೂ.ಯಷ್ಟು ಏರಿಕೆಯಾಗಿದೆ.
5 ಕೆ.ಜಿ. ಚಿಕ್ಕ ಸಿಲಿಂಡರ್‌ನ ಬೆಲೆ18 ರೂ. ಹೆಚ್ಚಳವಾಗಿದ್ದರೇ 19 ಕೆ.ಜಿ. ಸಿಲಿಂಡರ್‌ನ ಬೆಲೆ 36.50 ರೂ.ಯಷ್ಟು ಏರಿಕೆ ಕಂಡಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಾರ, ದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಗ್ಯಾಸ್ ಸಿಲಿಂಡರ್ ಈಗ 644 ರೂ.ಗೆ ಲಭ್ಯವಾಗುತ್ತಿದೆ. ಕೋಲ್ಕತ್ತಾದಲ್ಲಿ 670.50 ರೂ, ಮುಂಬೈನಲ್ಲಿ 644 ಮತ್ತು ಚೆನ್ನೈನಲ್ಲಿ 660 ರೂ. ಹೆಚ್ಚಳವಾಗಿದೆ. ಇದಕ್ಕೂ ಮುನ್ನ ದೆಹಲಿಯಲ್ಲಿ 594 ರೂ., ಕೋಲ್ಕತ್ತಾದಲ್ಲಿ 620.50 ರೂ., ಮುಂಬೈನಲ್ಲಿ 594 ಮತ್ತು ಚೆನ್ನೈನಲ್ಲಿ 610 ರೂ.ಗೆ ಮಾರಾಟ ಆಗುತ್ತಿತ್ತು.