ಕರ್ನಾಟಕ

karnataka

ETV Bharat / business

LPG ಗ್ರಾಹಕರಿಗೆ ಬಿಗ್​​​ ಶಾಕ್​​​​... ಸತತ 4ನೇ ಬಾರಿಯೂ ಸಿಲಿಂಡರ್​​​ ದರದಲ್ಲಿ ಭಾರಿ ಏರಿಕೆ - ಎಲ್​ಪಿಜಿ ಸಿಲಿಂಡರ್ ಬೆಲೆ

14.2 ಕೆಜಿ ಸಬ್ಸಿಡಿ ರಹಿತ ಸಿಲಿಂಡರ್ ಈಗ ದೆಹಲಿಯಲ್ಲಿ 695 ರೂ.ಗೆ ಲಭ್ಯವಾಗುತ್ತಿದೆ. ಮುಂಬೈಯಲ್ಲಿ ₹ 665, ಚೆನ್ನೈನಲ್ಲಿ ₹ 714 ಮತ್ತು ಕೋಲ್ಕತ್ತಾದಲ್ಲಿ ₹ 725ಗೆ ಮಾರಾಟ ಆಗುತ್ತಿದೆ. ಇಂಧನ ಚಿಲ್ಲರೆ ವ್ಯಾಪಾರಿಗಳು ಪ್ರತಿ ತಿಂಗಳ ಮೊದಲ ದಿನದಿಂದ ಬೆಲೆಗಳನ್ನು ಬದಲಾವಣೆ ಮಾಡುತ್ತಾರೆ. ನವೆಂಬರ್​ನಲ್ಲಿ ಸುಮಾರು ₹ 76 ಹೆಚ್ಚಳ ಆಗಿದ್ದರೆ ಅಕ್ಟೋಬರ್ ಮತ್ತು ಸೆಪ್ಟೆಂಬರ್​ನಲ್ಲಿ ತಲಾ ₹ 15ರಷ್ಟು ಏರಿಕೆಯಾಗಿದೆ. ಈ ತಿಂಗಳು 13.50 ರೂ. ಹೆಚ್ಚಳವಾಗಿದೆ.

cylinder
ಸಿಲಿಂಡರ್

By

Published : Dec 2, 2019, 7:23 PM IST

ನವದೆಹಲಿ: ಸತತ ನಾಲ್ಕನೇ ಬಾರಿಯೂ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಹೆಚ್ಚಳ ಕಂಡುಬಂದಿದ್ದು, 14.2 ಕೆಜಿ ಸಿಲಿಂಡರ್​ ಮೇಲೆ ₹ 13.50 ಏರಿಕೆಯಾಗಿದೆ.

ಇಂಡಿಯನ್ ಆಯಿಲ್​ ಕಂಪನಿಯ ಪ್ರಕಾರ, ಭಾರತದಾದ್ಯಂತ ನಿತ್ಯ 30 ಲಕ್ಷ ಸಿಲಿಂಡರ್ ವಿತರಣೆ ಆಗುತ್ತಿದೆ. 14.2 ಕೆಜಿ ಸಬ್ಸಿಡಿ ರಹಿತ ಸಿಲಿಂಡರ್ ಈಗ ದೆಹಲಿಯಲ್ಲಿ 695 ರೂ.ಗೆ ಲಭ್ಯವಾಗುತ್ತಿದೆ. ಮುಂಬೈಯಲ್ಲಿ ₹ 665, ಚೆನ್ನೈನಲ್ಲಿ ₹ 714 ಮತ್ತು ಕೋಲ್ಕತ್ತಾದಲ್ಲಿ ₹ 725ಗೆ ಮಾರಾಟ ಆಗುತ್ತಿದೆ. ಇಂಧನ ಚಿಲ್ಲರೆ ವ್ಯಾಪಾರಿಗಳು ಪ್ರತಿ ತಿಂಗಳ ಮೊದಲ ದಿನದಿಂದ ಬೆಲೆಗಳನ್ನು ಬದಲಾವಣೆ ಮಾಡುತ್ತಾರೆ.

ನವೆಂಬರ್​ನಲ್ಲಿ ಸುಮಾರು ₹ 76 ಹೆಚ್ಚಳ ಆಗಿದ್ದರೆ ಅಕ್ಟೋಬರ್ ಮತ್ತು ಸೆಪ್ಟೆಂಬರ್​ನಲ್ಲಿ ತಲಾ ₹ 15ರಷ್ಟು ಏರಿಕೆಯಾಗಿದೆ. ಈ ತಿಂಗಳು 13.50 ರೂ. ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ಮಾನದಂಡದ ಎಲ್​​​​ಪಿಜಿ ಮತ್ತು ಡಾಲರ್​ ಹಾಗೂ ರೂಪಾಯಿ ವಿನಿಮಯ ದರದ ಮೇಲೆ ಬೆಲೆ ನಿರ್ಧಾರವಾಗುತ್ತದೆ.

ಭಾರತದ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿ ಇಂಡಿಯನ್ ಆಯಿಲ್ ಇತ್ತೀಚೆಗೆ ಪ್ರತಿ ಬಾರಿ ಪುನರ್​​ರ್ಭರ್ತಿ ಮಾಡುವಾಗ ಎಲ್‌ಪಿಜಿ ಸಿಲಿಂಡರ್‌ಗೆ ಪೂರ್ವ ವಿತರಣಾ ತಪಾಸಣೆ ನಡೆಸುವಂತೆ ಗ್ರಾಹಕರನ್ನು ಕೇಳಿಕೊಂಡಿತ್ತು. ಈ ತಪಾಸಣೆಯಲ್ಲಿ ಸಿಲಿಂಡರ್ ತೂಕ, ಒ-ರಿಂಗ್ ಸೋರಿಕೆಯ ಪರಿಶೀಲನೆ, ವಾಲ್​​​ ಸೋರಿಕೆಯಂತಹ ಪರಿಶೀಲನೆಗಳು ಇದರಲ್ಲಿ ಸೇರಿವೆ.

ABOUT THE AUTHOR

...view details