ಕರ್ನಾಟಕ

karnataka

ETV Bharat / business

ಪ್ರವಾಸ ವೇಳೆ ಬೀಚ್‌ನಲ್ಲಿ​ ಮದ್ಯ ಹೀರುವ ಪಾನಪ್ರಿಯರಿಗೆ ಗೋವಾ ಸರ್ಕಾರ ಕಹಿ ಸುದ್ದಿ - Business News

ಗೋವಾ ವಿಧಾನಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿ ಮುಖ್ಯಮಂತ್ರಿ ಸಾವಂತ್​, ಅಬಕಾರಿ ಸುಂಕ, ಮದ್ಯ ಮಾರಾಟಗಾರರು ಸಲ್ಲಿಸುವ ಶುಲ್ಕದಲ್ಲಿ ಹೆಚ್ಚಳ ಮಾಡಲಾಗಿದೆ. ಬೆಲೆ ಏರಿಕೆಯಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 100 ಕೋಟಿ ರೂ. ಹೆಚ್ಚುವರಿ ಆದಾಯ ಹರಿದು ಬರಲಿದೆ ಎಂದು ದರ ಏರಿಕೆಗೆ ಸ್ಪಷ್ಟನೆ ನೀಡಿದ್ದಾರೆ.

Goa
ಗೋವಾ

By

Published : Feb 8, 2020, 11:25 PM IST

ಪಣಜಿ: ಗೋವಾದಲ್ಲಿ ಏಪ್ರಿಲ್ 1ರಿಂದ ಮದ್ಯದ ಬೆಲೆ ಶೇ 20ರಿಂದ 50ರವರೆಗೆ ಏರಿಕೆಯಾಗಲಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿ ಮುಖ್ಯಮಂತ್ರಿ ಸಾವಂತ್​, ಅಬಕಾರಿ ಸುಂಕ, ಮದ್ಯ ಮಾರಾಟಗಾರರು ಸಲ್ಲಿಸುವ ಶುಲ್ಕದಲ್ಲಿ ಹೆಚ್ಚಳ ಮಾಡಲಾಗಿದೆ. ಬೆಲೆ ಏರಿಕೆಯಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 100 ಕೋಟಿ ರೂ. ಹೆಚ್ಚುವರಿ ಆದಾಯ ಹರಿದು ಬರಲಿದೆ ಎಂದು ದರ ಏರಿಕೆಗೆ ಸ್ಪಷ್ಟನೆ ನೀಡಿದ್ದಾರೆ.

2018-19ರ ಹಣಕಾಸು ವರ್ಷದಲ್ಲಿ ಅಬಕಾರಿಯಿಂದ 477.67 ಕೋಟಿ ರೂ.ಯಷ್ಟು ಆದಾಯ ಬಂದಿತ್ತು. ಕಳೆದ ವರ್ಷ ಗಳಿಸಿದ ಆದಾಯಕ್ಕಿಂತ ಶೇ 25ರಷ್ಟು ಹೆಚ್ಚಾಗಿರಲಿದೆ. ಏಪ್ರಿಲ್​ 1ರಿಂದ ಪರಿಷ್ಕೃತ ಬೆಲೆ ಏರಿಕೆ ಅನುಷ್ಠಾನಕ್ಕೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details