ನವದೆಹಲಿ:ಈ ವರ್ಷದ ಮಾರ್ಚ್ ಆರಂಭದಲ್ಲಿ ಎಲ್ಐಸಿಯಿಂದ ಐಪಿಒ ಬಿಡುಗಡೆ ಆಗಲಿದೆ ಎಂದು ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಸರ್ಕಾರವು ನೀಲಾಚಲ ಇಸ್ಪತ್ ನಿಗಮ್ ಮಾರಾಟಕ್ಕೂ ಅಂತಿಮ ಸ್ಪರ್ಶ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.
ಮಾರ್ಚ್ನಲ್ಲಿ LIC IPO ತರಲು ನಾವು ಅಣಿಯಾಗಿದ್ದೇವೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (DIPAM) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಸ್ಪಷ್ಟಪಡಿಸಿದ್ದಾರೆ. ಈ ನಡುವೆ, 2021-22ನೇ ಸಾಲಿನಲ್ಲಿ ಭಾರತೀಯ ಜೀವ ವಿಮಾ ನಿಗಮವು 1,437 ನಲ್ಲಿ ನಿವ್ವಳ ಲಾಭಗಳಿಸಿದೆ.
ಇದು ಭಾರತದ ಅತಿದೊಡ್ಡ IPO ಆಗಲಿದೆ. ಸರ್ಕಾರವು ಷೇರುಗಳ ಮಾರಾಟದ ಮೂಲಕ 1 ಲಕ್ಷ ಕೋಟಿ ರೂಪಾಯಿಗಳವರೆಗೆ ಬಂಡವಾಳ ಸಂಗ್ರಹಿಸಲು ನಿರ್ಧರಿಸಿದೆ. ಕಳೆದ ನವೆಂಬರ್ನಲ್ಲಿ ಮಾರುಕಟ್ಟೆ ಪ್ರವೇಶಿಸಿರುವ ಪೇಟಿಎಂ ಒಟ್ಟಾರೆ ಬಂಡವಾಳ ಆಕರ್ಷಣೆಗಿಂತ ಸುಮಾರು 5 ಪಟ್ಟು ದೊಡ್ಡ ಬಂಡವಾಳ ಕ್ರೋಡೀಕರಣ ಇದಾಗಿದೆ. ಪೇಟಿಎಂ 18,300 ಕೋಟಿ ರೂ. ಬಂಡವಾಳ ಸಂಗ್ರಹ ಮಾಡಿತ್ತು.