ನವದೆಹಲಿ:2021ರ ಹೊಸ ವರ್ಷದಿಂದ ಡಿಜಿಟಲ್ ಸೇವೆಗಳ ಶುಲ್ಕ, ವಾಹನ ದರ ಏರಿಕೆಯ ಬೆನ್ನಲ್ಲೇ ಗೃಹ ಬಳಕೆಯ ಕೆಲವು ವಸ್ತುಗಳ ದರ ಏರಿಕೆ ಆಗಲಿದೆ.
ಎಲ್ಇಡಿ ಟಿವಿ, ರೆಫ್ರಿಜರೇಟರ್, ವಾಷಿಂಗ್ ಮಷಿನ್ ಬೆಲೆಯು ಜನವರಿಯಿಂದ ಸರಿಸುಮಾರು ಶೇ. 10ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಇವುಗಳ ತಯಾರಿಕೆಯಲ್ಲಿ ಬಳಕೆಯಾಗುವ ಕಚ್ಚಾ ಸರಕುಗಳ ಬೆಲೆ ಹಾಗೂ ಸಾಗಣೆ ವೆಚ್ಚದಲ್ಲಿ ಆಗಿರುವ ಏರಿಕೆಯ ಪರಿಣಾಮ ಅದರ ನೇರ ಹೊರೆ ಗ್ರಾಹಕರ ಮೇಲೆ ಬೀಳುತ್ತಿದೆ.
ತಾಮ್ರ, ಅಲ್ಯೂಮಿನಿಯಂ ಮತ್ತು ಉಕ್ಕಿನಂತಹ ಇನ್‌ಪುಟ್ ವಸ್ತುಗಳ ಬೆಲೆ ಮತ್ತು ಸಾಗಾಟ ಸರಕುಗಳ ಬೆಲೆ ಹೆಚ್ಚಳವಾಗಲಿದೆ. ಇದರ ಜೊತೆಗೆ ಜಾಗತಿಕ ಮಾರಾಟಗಾರರ ಕೊರತೆಯಿಂದಾಗಿ ಟಿವಿ ಪ್ಯಾನೆಲ್‌ಗಳ (ಒಪೆನ್ಸೆಲ್) ಬೆಲೆಗಳು ದ್ವಿಗುಣಗೊಂಡಿದೆ. ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಪ್ಲಾಸ್ಟಿಕ್ ಬೆಲೆಯೂ ಆಕಾಶ ಮುಖವಾಗಿದೆ. ಹೀಗಾಗಿ ಮುಂದಿನ ವರ್ಷದಿಂದ ಶೇ. 10ರಷ್ಟು ದರ ಏರಿಕೆ ಆಗಲಿದೆ ಎಂದು ತಯಾರಕರು ತಿಳಿಸಿದ್ದಾರೆ.