ಕರ್ನಾಟಕ

karnataka

ರಾಜ್ಯದಲ್ಲಿ ಟೆಸ್ಲಾ ಘಟಕ ಆರಂಭಿಸುವಂತೆ ಜಗತ್ತಿನ ನಂ.1 ಶ್ರೀಮಂತ ಉದ್ಯಮಿಗೆ ಆಹ್ವಾನ ; ಸಚಿವ ನಿರಾಣಿ ಟ್ವೀಟ್‌

By

Published : Jan 18, 2022, 6:04 PM IST

ಮೂಲಗಳ ಪ್ರಕಾರ ಟೆಸ್ಲಾ ಇಂಡಿಯಾ ಮೋಟಾರ್ಸ್ ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್ ಅನ್ನು ಆರ್‌ಒಸಿ (ಕಂಪನೀಸ್ ರಿಜಿಸ್ಟ್ರಾರ್) ಬೆಂಗಳೂರಿನಲ್ಲಿ ನೋಂದಾಯಿಸಿದೆ. ಕಂಪನಿಯು 1 ಲಕ್ಷ ರೂಪಾಯಿಗಳ ಪಾವತಿಸಿದ ಬಂಡವಾಳದೊಂದಿಗೆ ಪಟ್ಟಿಮಾಡದ ಖಾಸಗಿ ಘಟಕವಾಗಿ ನೋಂದಾಯಿಸಲ್ಪಟ್ಟಿದೆ..

Karnataka invites Elon Musk to set up Tesla plant
ರಾಜ್ಯದಲ್ಲಿ ಟೆಸ್ಲಾ ಘಟಕ ಆರಂಭಿಸುವಂತೆ ಸರ್ಕಾರ ಆಹ್ವಾನ; ಸಚಿವ ನಿರಾಣಿ ಟ್ವೀಟ್‌

ಬೆಂಗಳೂರು :ವಿಶ್ವದ ನಂಬರ್‌ ಶ್ರೀಮಂತ ಉದ್ಯಮಿ, ವಿದ್ಯುತ್‌ ವಾಹನಗಳ ಕಂಪನಿ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಅವರನ್ನು ರಾಜ್ಯಗಳಿಗೆ ಆಹ್ವಾನಿಸುವ ಪಟ್ಟಿ ದೇಶದಲ್ಲಿ ಬೆಳೆಯುತ್ತಿದೆ. ಇದೀಗ ಕರ್ನಾಟಕವೂ ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಎಲಾನ್‌ಗೆ ಆಹ್ವಾನ ನೀಡಿದೆ.

ವಿದ್ಯುತ್‌ ವಾಹನಗಳಿಗೆ(ಇವಿ) ಭಾರತದಲ್ಲಿ ಕರ್ನಾಟಕ ಹಬ್‌ ಆಗಿದೆ. ಟೆಸ್ಲಾ ಘಟಕವನ್ನು ಸ್ಥಾಪಿಸಲು ಸೂಕ್ತ ತಾಣವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ತೆಲಂಗಾಣ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಪಂಜಾಬ್ ಹಾಗೂ ತಮಿಳುನಾಡು ಈಗಾಗಲೇ ತಮ್ಮ ರಾಜ್ಯಗಳಲ್ಲಿ ಹೂಡಿಕೆ ಮಾಡುವಂತೆ ಎಲಾನ್‌ ಮಸ್ಕ್‌ ಅವರಿಗೆ ಆಹ್ವಾನ ನೀಡಿವೆ.

'ಟೆಸ್ಲಾ ಘಟಕ ಸ್ಥಾಪನೆಗೆ ಕರ್ನಾಟಕ ಸೂಕ್ತ ತಾಣ'

400ಕ್ಕೂ ಹೆಚ್ಚು ಆರ್‌&ಡಿ ಕೇಂದ್ರಗಳು, 45+ಎಲೆಕ್ಟ್ರಾನಿಕ್‌ ವೆಹಿಕಲ್‌ ಸ್ಟಾರ್ಟ್‌ಅಪ್‌ಗಳು, ಬೆಂಗಳೂರಿನ ಸಮೀಪವಿರುವ ಇವಿ ಕ್ಲಸ್ಟರ್‌ನೊಂದಿಗೆ ಕರ್ನಾಟಕವು ಭಾರತದ ಎಲೆಕ್ಟ್ರಾನಿಕ್‌ ವಾಹನಗಳ ಹಬ್ ಆಗಿ ಹೊರ ಹೊಮ್ಮಿದೆ.

ಎಲಾನ್‌ ಮಸ್ಕ್‌ ಅವರು ಟೆಸ್ಲಾ ಘಟಕ ಸ್ಥಾಪಿಸಲು ಕರ್ನಾಟಕ ಸೂಕ್ತ ತಾಣವಾಗಿದೆ. ಟೆಸ್ಲಾ ಈಗಾಗಲೇ ಭಾರತದಲ್ಲಿ ಬೆಂಗಳೂರು ಅನ್ನು ಗುರುತಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ಆರ್ ನಿರಾಣಿ ಟ್ವೀಟ್ ಮಾಡಿದ್ದಾರೆ.

ಅಮೆರಿಕ ಮೂಲದ ಟೆಸ್ಲಾ ಕಂಪನಿ ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸರ್ಕಾರದೊಂದಿಗೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ ಎಂದು ಮಸ್ಕ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು.

ಮೂಲಗಳ ಪ್ರಕಾರ ಟೆಸ್ಲಾ ಇಂಡಿಯಾ ಮೋಟಾರ್ಸ್ ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್ ಅನ್ನು ಆರ್‌ಒಸಿ (ಕಂಪನೀಸ್ ರಿಜಿಸ್ಟ್ರಾರ್) ಬೆಂಗಳೂರಿನಲ್ಲಿ ನೋಂದಾಯಿಸಿದೆ. ಕಂಪನಿಯು 1 ಲಕ್ಷ ರೂಪಾಯಿಗಳ ಪಾವತಿಸಿದ ಬಂಡವಾಳದೊಂದಿಗೆ ಪಟ್ಟಿಮಾಡದ ಖಾಸಗಿ ಘಟಕವಾಗಿ ನೋಂದಾಯಿಸಲ್ಪಟ್ಟಿದೆ.

2021ರ ಫೆಬ್ರವರಿಯಲ್ಲಿ ಅಂದಿನ ಸಿಎಂ ಬಿ.ಎಸ್ ಯಡಿಯೂರಪ್ಪ ಕೂಡ ಅಮೆರಿಕದ ಟೆಸ್ಲಾ ಸಂಸ್ಥೆ ಕರ್ನಾಟಕದಲ್ಲಿ ಕಾರು ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ ಎಂದು ಹೇಳಿದ್ದರು. ಕಳೆದ ವರ್ಷ, ಟೆಸ್ಲಾ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಮೇಲಿನ ಆಮದು ಸುಂಕವನ್ನು ಕಡಿತಗೊಳಿಸುವಂತೆ ಕೋರಿತ್ತು.

ಇದನ್ನೂ ಓದಿ:'ಭಾರತದಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯ': ವಿಶ್ವ ಆರ್ಥಿಕ ವೇದಿಕೆ ಉದ್ದೇಶಿಸಿ ಮೋದಿ ಭಾಷಣ

TAGGED:

ABOUT THE AUTHOR

...view details