ಕರ್ನಾಟಕ

karnataka

ETV Bharat / business

2021ರಲ್ಲಿ ಜಿಯೋ 5ಜಿ ಸೇವೆ ಪ್ರಾರಂಭಿಸುವ ಯೋಜನೆ: ಮುಖೇಶ್ ಅಂಬಾನಿ

2021ರ ಮಧ್ಯದಲ್ಲಿ ರಿಲಯನ್ಸ್ ಜಿಯೋ 5ಜಿ ಸೇವೆಗಳನ್ನು ಪ್ರಾರಂಭಿಸುವ ಯೋಜನೆ ಹೊಂದಿದೆ ಎಂದು ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಇಂಡಿಯಾ ಮೊಬೈಲ್ ಕಾಂಗ್ರೆಸ್ ಉದ್ಘಾಟನಾ ಅಧಿವೇಶನದಲ್ಲಿ ತಿಳಿಸಿದ್ದಾರೆ.

ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ
ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ

By

Published : Dec 8, 2020, 1:18 PM IST

ನವದೆಹಲಿ: ರಿಲಯನ್ಸ್ ಜಿಯೋ 2021ರ ಮಧ್ಯದಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸುವ ಯೋಜನೆ ಹೊಂದಿದೆ ಎಂದು ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ತಿಳಿಸಿದ್ದಾರೆ.

ಇಂಡಿಯಾ ಮೊಬೈಲ್ ಕಾಂಗ್ರೆಸ್ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಅವರು, "5ಜಿ ಸೇವೆಯು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದು ಕೈಗೆಟಕುವ ರೀತಿಯಲ್ಲಿ ಗ್ರಾಹಕರಿಗೆ ತಲುಪುವಂತೆ ಮಾಡಲಾಗುವುದು. 2021ರ ಮಧ್ಯದಲ್ಲಿ ಜಿಯೋ ಭಾರತದಲ್ಲಿ 5ಜಿ ಕ್ರಾಂತಿಯನ್ನು ಉಂಟು ಮಾಡುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇದು ಸ್ಥಳೀಯ-ಅಭಿವೃದ್ಧಿ ಹೊಂದಿದ ನೆಟ್‌ವರ್ಕ್, ಹಾರ್ಡ್‌ವೇರ್ ಮತ್ತು ತಂತ್ರಜ್ಞಾನ ಘಟಕಗಳಿಂದ ನಿಯಂತ್ರಿಸಲ್ಪಡುತ್ತದೆ. ಜಿಯೋ 5ಜಿ ಸೇವೆಯು ಆತ್ಮನಿರ್ಭರ ಭಾರತ್​ನಿಂದ ಸ್ಪೂರ್ತಿ ಪಡೆದಿದೆ" ಎಂದರು.

ಭಾರತವು ಇಂದು ಡಿಜಿಟಲ್ ಸಂಪರ್ಕ ಹೊಂದಿರುವ ಅತ್ಯುತ್ತಮ ರಾಷ್ಟ್ರಗಳಲ್ಲಿ ಒಂದಾಗಿದೆ. ಆದರೆ ಇನ್ನು ಕೂಡ 2ಜಿ ಸೇವೆ ಬಳಕೆ ಮಾಡುತ್ತಿರುವ 300 ಮಿಲಿಯನ್ ಫೋನ್ ಬಳಕೆದಾರರಿದ್ದಾರೆ. ಅವರಿಗೂ ಈ ಸೇವೆ ತಲುಪುವಂತೆ ಮಾಡಲು ನೀತಿಗಳನ್ನು ತರುವುದಾಗಿ ಹೇಳಿದರು.

ABOUT THE AUTHOR

...view details