ಕರ್ನಾಟಕ

karnataka

ETV Bharat / business

ಮತ್ತೆ ಮಾರುಕಟ್ಟೆಯಲ್ಲಿ Jio ಸುನಾಮಿ! 'ಜಿಯೋ ಫೈಬರ್' ಸಂಪರ್ಕ ಇಂದಿನಿಂದ ಲಭ್ಯ - ಮುಖೇಶ್ ಅಂಬಾನಿ

ಜಿಯೋ ಸಿಮ್ ಮೂಲಕ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಮುಖೇಶ್ ಅಂಬಾನಿ ಇದೀಗ ಜಿಯೋ ಫೈಬರ್ ಮೂಲಕ ಮತ್ತೊಮ್ಮೆ ಅಂತಹುದೇ ಮ್ಯಾಜಿಕ್ ಮಾಡಲು ಹೊರಟಿದ್ದಾರೆ.

ಜಿಯೋ

By

Published : Sep 5, 2019, 11:54 AM IST

ನವದೆಹಲಿ: ಜಿಯೋ ಗ್ರಾಹಕರು ಕಾತರದಿಂದ ಕಾಯುತ್ತಿದ್ದ ಕ್ಷಣ ಬಂದಿದ್ದು, ಇಂದಿನಿಂದ್ಲೇ ಜಿಯೋ ಫೈಬರ್​​ ಸಂಪರ್ಕ ಪಡೆದುಕೊಳ್ಳಬಹುದು.

ಜಿಯೋ ಸಿಮ್ ಮೂಲಕ ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಿದ್ದ ಮುಖೇಶ್ ಅಂಬಾನಿ ಇದೀಗ ಜಿಯೋ ಫೈಬರ್ ಮೂಲಕ ಮತ್ತೊಮ್ಮೆ ಅಂಥದ್ದೇ ಮ್ಯಾಜಿಕ್ ಮಾಡಲು ಸಿದ್ದರಾಗಿದ್ದಾರೆ.

ಜಿಯೋ ಫೈಬರ್ ಸಂಪರ್ಕ ಹೇಗೆ:

ಜಿಯೋ ವೆಬ್​​ಸೈಟ್​ನಲ್ಲಿ ಜಿಯೋ ಫೈಬರ್​ ಸಂಪರ್ಕಕ್ಕೆ ರಿಜಿಸ್ಟರ್ ಮಾಡಿಸಿಕೊಳ್ಳಬೇಕು. ರಿಜಿಸ್ಟರ್ ಯಶಸ್ವಿಯಾದ ಬಳಿಕ ಜಿಯೋ ಕಂಪೆನಿ ಅರ್ಜಿಯನ್ನು ಪರಿಶೀಲಿಸುತ್ತದೆ. ಆ ಬಳಿಕ ರೂಟರ್​​ ನೀಡುತ್ತದೆ. ಇನ್​ಸ್ಟಾಲ್ ಮಾಡಿದ ಎರಡು ಗಂಟೆಯಲ್ಲಿ ಜಿಯೋ ಫೈಬರ್ ಆ್ಯಕ್ಟಿವೇಟ್ ಆಗುತ್ತದೆ.

ಇನ್​ಸ್ಟಾಲ್​ ಚಾರ್ಜ್ ಎಷ್ಟು?

ಜಿಯೋ ಫೈಬರ್ ಇನ್​ಸ್ಟಾಲೇಶನ್​ ಸಂಪೂರ್ಣ ಉಚಿತ! ಆದರೆ ಜಿಯೋ ಫೈಬರ್ ರೂಟರ್​ಗೆ ಸಂಸ್ಥೆ ₹2,500 ರೂ. ವಿಧಿಸುತ್ತದೆ. ಈ ಹಣವನ್ನು ಗ್ರಾಹಕರು ಯಾವುದೇ ಸಮಯದಲ್ಲಾದರೂ ಹಿಂಪಡೆಯಬಹುದು.

ಜಿಯೋ ಫೈಬರ್ ಪ್ಲಾನ್​:

ಜಿಯೋ ಫೈಬರ್ ಸೇವೆಯ ಪ್ಲಾನ್ ಕಂಪೆನಿ ಇನ್ನೂ ಸಹ ಸಂಪೂರ್ಣ ಮಾಹಿತಿ ನೀಡಿಲ್ಲ. ಇಂದು ಎಲ್ಲ ವಿವರನ್ನು ತಮ್ಮ ವೆಬ್​ಸೈಟ್​ನಲ್ಲಿ ನೀಡುವ ಸಾಧ್ಯತೆ ಇದೆ. ಈಗಾಗಲೇ ಪ್ಲಾನ್​ ₹700ರಿಂದ ಆರಂಭವಾಗಿ ₹1000ದವರೆಗೆ ಇರಲಿದೆ ಎಂದು ಜಿಯೋ ಹೇಳಿತ್ತು.

ಜಿಯೋ ಫೈಬರ್ ವೇಗ:
ಈಗಾಗಲೇ ಜಿಯೋ ಹೇಳಿಕೊಂಡಂತೆ 100Mbps ನಿಂದ 1Gbpsವರೆಗೆ ವೇಗವಿರಲಿದೆ. ಜೊತೆಗೆ ಈ ವೇಗ ಆಯಾ ಪ್ಲಾನ್ ಮೇಲೆ ಅವಲಂಬಿತವಾಗಿರಲಿದೆ ಎನ್ನುವುದನ್ನು ಜಿಯೋ ಉಲ್ಲೇಖಿಸಿತ್ತು.

ಜಿಯೋ ಫೈಬರ್ ಸೆಟಪ್​ ಬಾಕ್ಸ್:
ಜಿಯೋ ವೆಲ್​ಕಮ್​ ಆಫರ್​​ನ ಅಡಿಯಲ್ಲಿ ಜಿಯೋ ಫಾರೆವರ್ ವಾರ್ಷಿಕ ಪ್ಲಾನ್ ಹೊಂದಿದವರು ಜಿಯೋ ಕಂಪೆನಿ ಉಚಿತವಾಗಿ HD/4K TV ಹಾಗೂ 4K STB ನೀಡಲಿದೆ.

ಆರಂಭದಲ್ಲೇ ಭಾರಿ ಡಿಮ್ಯಾಂಡ್!

ಜಿಯೋ ಫೈಬರ್ ಸೇವೆ ಇಂದಿನಿಂದ ಆರಂಭವಾಲಿದ್ದು ಈಗಾಗಲೇ ಈ ಸರ್ವೀಸ್​ಗೆ ಉತ್ತಮ ಬೇಡಿಕೆ ಕಂಡುಬಂದಿದೆ. ತನ್ನ ಸೇವೆ ಆರಂಭಿಸುವ ದಿನದಂದು ದೇಶಾದ್ಯಂತ 2 ಕೋಟಿ ಮನೆಗಳನ್ನು ತಲುಪುವ ಗುರಿ ಹೊಂದಿತ್ತು. ಈ ಪ್ರಯತ್ನದಲ್ಲಿ ಜಿಯೋ ಭಾಗಶಃ ಯಶಸ್ವಿಯಾಗಿದ್ದು, ಈಗಾಗಲೇ ಒಂದೂವರೆ ಕೋಟಿ ಮಂದಿ ಜಿಯೋ ಫೈಬರ್ ಸಂಪರ್ಕ ಹೊಂದಲು ಆಸಕ್ತಿ ತೋರಿದ್ದಾರೆ.

ABOUT THE AUTHOR

...view details