ನವದೆಹಲಿ : ಜೆಟ್ ಇಂಧನ ಬೆಲೆಯನ್ನು ಶನಿವಾರದಂದು ಶೇ 6.7ರಷ್ಟು ಏರಿಕೆ ಮಾಡಲಾಗಿದ್ದು, ಕಳೆದ ತಿಂಗಳಿನ ಬೆಲೆ ಕಡಿತ ಹಿಮ್ಮೆಟ್ಟಿಸಿದಂತಾಗಿದೆ. ಮುಂದಿನ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಅಂತಾರಾಷ್ಟ್ರೀಯ ಬೆಲೆಗಳು ಆಧರಿಸಿ ವ್ಯತ್ಯಾಸ ಆಗಬಹುದು.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ಬೆಲೆ ಕಿಲೋಲಿಟರ್ಗೆ (ಕೆಎಲ್) 3,885 ರೂ. ಶೇ 6.7ರಷ್ಟು ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಕಿಲೋಗೆ 61,690.28 ರೂ.ಯಲ್ಲಿ ಲಭ್ಯವಾಗುತ್ತಿದೆ.
ಸ್ಥಳೀಯ ತೆರಿಗೆಗಳ ಪ್ರಮಾಣ ಅವಲಂಬಿಸಿ ದರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಕಳೆದ ತಿಂಗಳು ಎರಡು ಸುತ್ತಿನ ಕಡಿತದ ನಂತರ ಬೆಲೆ ಹೆಚ್ಚಳವಾಗಿದೆ. ಏಪ್ರಿಲ್ 1ರಂದು ಶೇ. 3ರಷ್ಟು ಮತ್ತು ಏಪ್ರಿಲ್ 16ರಂದು ಪ್ರತಿ ಕಿಲೋಗೆ 568.88 ರೂ.ಯಷ್ಟು ಇಳಿಕೆ ಮಾಡಲಾಗಿತ್ತು.
ಇದನ್ನೂ ಓದಿ:SBI ಸಾಲಗಾರರಿಗೆ ಗುಡ್ ನ್ಯೂಸ್: ಇಂದಿನಿಂದ ಗೃಹ ಸಾಲ ಬಡ್ಡಿ ರೇಟ್ ಇಳಿಕೆ!
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶನಿವಾರ 16ನೇ ದಿನದಲ್ಲಿ ಬದಲಾಗದೆ ಉಳಿದಿವೆ. ಆದರೆ, ತೈಲ ಕಂಪನಿ ಅಧಿಕಾರಿಗಳು ದರದಲ್ಲಿ ಹೆಚ್ಚಳ ಸೂಚಿಸಿದ್ದಾರೆ.