ಕರ್ನಾಟಕ

karnataka

ಒಂದೇ ದಿನದಲ್ಲಿ ಭಾರಿ ಬದಲಾವಣೆ! ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಬೆಜೋಸ್ ಕುಸಿತ..!

By

Published : Oct 25, 2019, 1:08 PM IST

ಗುರುವಾರದ ಒಂದು ದಿನದ ಋಣಾತ್ಮಕ ವಹಿವಾಟು ವಿಶ್ವದ ಶ್ರೀಮಂತರ ಲಿಸ್ಟ್​ನಲ್ಲಿದ್ದ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್​ ಎರಡನೇ ಸ್ಥಾನಕ್ಕೆ ತಳ್ಳಲ್ಪಪಟ್ಟಿದ್ದಾರೆ. ಈ ಮೂಲಕ ಒಂದು ವರ್ಷದಿಂದ ಅಗ್ರಸ್ಥಾನ ಕಾಯ್ದುಕೊಂಡಿದ್ದ ಬೆಜೋಸ್ ಅನಿರೀಕ್ಷಿತವಾಗಿ ಪತನ ಕಂಡಿದ್ದಾರೆ.

ಬೆಜೋಸ್

ವಾಷಿಂಗ್ಟನ್: ಗುರುವಾರದ ವಹಿವಾಟಿನಲ್ಲಿ ಅಮೆಜಾನ್ ಕಂಪೆನಿಯ ಷೇರುಗಳು ಒಟ್ಟಾರೆ ಶೇ.9ರಷ್ಟು ಕುಸಿತ ಕಂಡ ಪರಿಣಾಮ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ದಿಢೀರ್ ಬದಲಾವಣೆಗಳಾಗಿವೆ.

ಗುರುವಾರದ ಒಂದು ದಿನದ ಋಣಾತ್ಮಕ ವಹಿವಾಟು ವಿಶ್ವದ ಶ್ರೀಮಂತರ ಲಿಸ್ಟ್​ನಲ್ಲಿದ್ದ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್​ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಈ ಮೂಲಕ ಒಂದು ವರ್ಷದಿಂದ ಅಗ್ರಸ್ಥಾನ ಕಾಯ್ದುಕೊಂಡಿದ್ದ ಬೆಜೋಸ್ ಅನಿರೀಕ್ಷಿತವಾಗಿ ಪತನ ಕಂಡಿದ್ದಾರೆ. ಕಳೆದ ಎರಡು ವರ್ಷದಲ್ಲಿ ಇದೇ ಮೊದಲ ಬಾರಿಗೆ ಅಮೆಜಾನ್ ಷೇರುಗಳು ಕುಸಿತವಾಗಿದೆ ಎನ್ನುವುದು ಉಲ್ಲೇಖಾರ್ಹ!

ಜೆಫ್ ಬೆಜೋಸ್

ಅಮೆಜಾನ್ ಕಂಪೆನಿ ಷೇರುಗಳ ಕುಸಿತದಿಂದ ಜೆಫ್ ಬೆಜೋಸ್ ಆಸ್ತಿ ಮೌಲ್ಯ 137 ಬಿಲಿಯನ್​ ಡಾಲರ್ (ಅಂದಾಜು ₹ 97,25,94,51,00,000 ಕೋಟಿ)​ನಿಂದ 103.9(₹73,76,09,99,70,000 ಕೋಟಿ) ಬಿಲಿಯನ್ ಡಾಲರ್​ಗೆ ಇಳಿಕೆಯಾಗಿದೆ. ವಿಚ್ಛೇಧನದ ಹಿನ್ನೆಲೆಯಲ್ಲಿ ಬೆಜೋಸ್ ತನ್ನ ಪತ್ನಿಗೆ ಅರ್ಧದಷ್ಟು ಹಣವನ್ನು ಹಸ್ತಾಂತರ ಮಾಡಿದ ಹಿನ್ನೆಲೆಯಲ್ಲಿ ಅಮೆಜಾನ್ ಷೇರುಗಳಲ್ಲಿ ತಲ್ಲಣ ಉಂಟಾಗಿದೆ.

ಜಗತ್ತಿನ ನಂ.1 ಕುಬೇರ ಜೆಫ್ ಬೆಜೋಸ್​ ನಿತ್ಯದ ಖರ್ಚು ಕೇಳಿದ್ರೆ ಬೆಚ್ಚಿಬೀಳ್ತಿರಾ..!

ಜೆಫ್​ ಬೆಜೋಸ್ ಸ್ಥಾನಕ್ಕೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ 105.7 ಬಿಲಿಯನ್ ಡಾಲರ್(₹1,05,70,00,00,000 ಕೋಟಿ) ಅಗ್ರಸ್ಥಾನ ಅಲಂಕರಿಸಿದ್ದಾರೆ. ಜೆಫ್​ ಬೆಜೋಸ್​ಗೆ ಮುನ್ನ ಬಿಲ್​ ಗೇಟ್ಸ್ ಅವರೇ ಮೊದಲ ಸ್ಥಾನದಲ್ಲಿದ್ದರು.

ಪತ್ನಿಗೆ ದುಬಾರಿ ವಿಚ್ಛೇಧನ:

ಕಳೆದ ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಪತಿ ಜೊತೆ ಹೆಜ್ಜೆ ಹಾಕಿದ ಪತ್ನಿ ಮೆಕೆಂಜಿ ಡಿವೋರ್ಸ್ ನೀಡಿದ್ದು, ಇದು ವಿಶ್ವದ ಅತ್ಯಂತ ದುಬಾರಿ ವಿಚ್ಛೇಧನ ಎನ್ನುವ ಕಾರಣಕ್ಕೆ ಸುದ್ದಿಯಾಗಿತ್ತು.

ಇದು ಜಗತ್ತಿನ ದುಬಾರಿ ಡಿವೋರ್ಸ್​..! ಪತ್ನಿ ಜೀವನಾಂಶ ಕರ್ನಾಟಕ ಬಜೆಟ್​ಗೆ ಸಮ.. !

ಅಚ್ಚರಿ ಅಂದ್ರೆ, ಜೀವನಾಂಶವಾಗಿ ಮೆಕೆಂಜಿ ಬೆಜೋಸ್ ತನ್ನ ಪತಿ ಜೆಫ್ ಬೆಜೋಸ್​​ ಅವರಿಂದ ಬರೋಬ್ಬರಿ 36 ಬಿಲಿಯನ್ ಅಮೆರಿಕನ್ ಡಾಲರ್ ಪಡೆಯಲಿದ್ದಾರೆ. ಭಾರತದ ರೂಪಾಯಿ ಮೌಲ್ಯಕ್ಕೆ ಸಮನಾಗಿ ಹೇಳೋದಾದರೆ, ಇದು ​₹ 2.4 ಲಕ್ಷ ಕೋಟಿ ರೂಪಾಯಿ ಆಗುತ್ತದೆ. ಅಂದರೆ, ಈ ಮೊತ್ತ ಕರ್ನಾಟಕದ ವಾರ್ಷಿಕ ಬಜೆಟ್‌ ಗೆ ಸಮ!

ಪತ್ನಿ ಮೆಕೆಂಜಿ ಬೆಜೋಸ್ ಜೊತೆ ಜೆಫ್ ಬೆಜೋಸ್

ABOUT THE AUTHOR

...view details