ನವದೆಹಲಿ:ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಮಧ್ಯೆ ಹೂಡಿಕೆದಾರರ ಭಾವನೆಗಳೂ ಕರಗಿದೆ. ಈಕ್ವಿಟಿ ಮಾರುಕಟ್ಟೆಯ ಭಾರಿ ನಷ್ಟದಿಂದಾಗಿ ಹೂಡಿಕೆದಾರರ ಸಂಪತ್ತು ಸೋಮವಾರ ಬೆಳಗ್ಗೆ 6,86,708.74 ಕೋಟಿ ರೂ.ಯಷ್ಟು ಮಾಯವಾಗಿದೆ.
30 ಷೇರುಗಳ ಬಿಎಸ್‌ಇ ಮಾನದಂಡ ಸೂಚ್ಯಂಕ ಬೆಳಗ್ಗಿನ ವಹಿವಾಟಿನಲ್ಲಿ 1,479.15 ಅಂಕ ಕುಸಿತ ಕಂಡು 48,112.17 ಅಂಕಗಳಿಗೆ ತಲುಪಿದೆ. ಬಿಎಸ್‌ಇ ಪಟ್ಟಿಮಾಡಿದ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು 6,86,708.74 ಕೋಟಿ ರೂ.ಯಿಂದ 2,02,76,533.13 ಕೋಟಿ ರೂ.ಗೆ ಇಳಿದಿದೆ.
ಇದನ್ನೂ ಓದಿ: ದೇಶಾದ್ಯಂತ ಕೊರೊನಾರ್ಭಟಕ್ಕೆ ಷೇರು ಮಾರುಕಟ್ಟೆ ತಲ್ಲಣ; ಸೆನ್ಸೆಕ್ಸ್ 1,166.95 ಅಂಕ ಕುಸಿತ