ನವದೆಹಲಿ: ಕೇಂದ್ರ ಬಜೆಟ್ ಮಂಡನೆಯ ಒಂದು ದಿನದ ನಂತರ ಮಾರುಕಟ್ಟೆ ಉತ್ಸಾಹಭರಿತವಾಗಿ ಮುಂದುವರಿದಿದ್ದು, ಹೂಡಿಕೆದಾರರ ಸಂಪತ್ತು ಮಂಗಳವಾರ ಬೆಳಗ್ಗೆ 3 ಲಕ್ಷ ಕೋಟಿ ರೂ.ನಷ್ಟು ಹೆಚ್ಚಳವಾಗಿದೆ.
ಬೆಳಗಿನ ವಹಿವಾಟಿನಲ್ಲಿ ಬಿಎಸ್‌ಇ ಮಾನದಂಡ ಸೆನ್ಸೆಕ್ಸ್ 1,553.87 ಅಂಕಗಳಷ್ಟು ಹೆಚ್ಚುವರಿ ಏರಿಕೆಯಾಗಿ 50,154.48 ಅಂಕಗಳಿಗೆ ತಲುಪಿದೆ. ಹೂಡಿಕೆದಾರರ ಸಕರಾತ್ಮಕ ಮನೋಭಾವವನ್ನು ಗಮನದಲ್ಲಿಟ್ಟುಕೊಂಡು, ಬಿಎಸ್‌ಇ - ಪಟ್ಟಿಮಾಡಿದ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು ಬೆಳಗಿನ ವಹಿವಾಟಿನಲ್ಲಿ 3,04,169.3 ಕೋಟಿ ರೂ.ಗೆ ಏರಿ 1,95,50,883 ಕೋಟಿ ರೂ.ಗಳಷ್ಟಾಗಿದೆ.
ಕಳೆದ ಎರಡು ಅಧಿವೇಶನಗಳಲ್ಲಿ ದಾಖಲೆಯ ಏರಿಕೆಯು ಬಜೆಟ್ ದಿನದ ಲಾಭಾಂಶದಿಂದ ಕಂಡು ಬಂದಿದೆ. ಆ ಮನೋಭಾವ ಇಂದು ಕೂಡ ವಿಸ್ತರಣೆಗೊಂಡಿದೆ. ಕೆಲವು ಲಾಭದ ಬುಕಿಂಗ್ ನಿರೀಕ್ಷಿಸಬಹುದು. ಆದರೆ, ಸ್ಟಾಕ್- ನಿರ್ದಿಷ್ಟ ಕ್ರಮದಲ್ಲಿ ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಜೆಎಂ ಫೈನಾನ್ಸ್ ಸರ್ವೀಸಸ್ನ ರಾಹುಲ್ ಶರ್ಮಾ ಹೇಳಿದರು.