ನವದೆಹಲಿ: ದೇಶಿಯ ಷೇರುಪೇಟೆಯಲ್ಲಿ ಅನಿಶ್ಚಿತತೆ ಮುಂದುವರೆದಿದ್ದು, ಮಂಗಳವಾರಷ್ಟೆ ಹೂಡಿಕೆದಾರರು ₹ 2.72 ಕೋಟಿಯಷ್ಟು ಸಂಪತ್ತು ಕಳೆದುಕೊಂಡು ಕಹಿ ಮರೆಯುವ ಮುನ್ನವೇ ಇಂದು ಮತ್ತೆ ₹ 1.65 ಲಕ್ಷ ಕೋಟಿಯಷ್ಟು ಸಂಪತ್ತು ಕೈಜಾರಿದೆ.
ಆರ್ಥಿಕತೆ ಸರಿ ಹೋಗ್ತಿಲ್ಲ; ಮೊನ್ನೆ ₹ 2.72 ಲಕ್ಷ ಕೋಟಿ, ಇಂದು ₹ 1.65 ಲಕ್ಷ ಕೋಟಿ ನಷ್ಟ!
ಗುರುವಾರದ ಮುಂಬೈ ಪೇಟೆಯಲ್ಲಿ ಸೆನ್ಸೆಕ್ಸ್ 470.41 ಅಂಶಗಳು ಕುಸಿದು 36,093.47 ಅಂಶಗಳ ಮಟ್ಟಕ್ಕೆ ತಲುಪಿತು. ಬ್ಯಾಂಕಿಂಗ್, ಇಂಧನ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದವು. ಪ್ರತಿಯಾಗಿ ಬಿಎಸ್ಇನ ಮಾರುಕಟ್ಟೆ ಬಂಡವಾಳದ ಕಂಪನಿಗಳ ಸಂಪತ್ತು ₹ 1,65,437.91 ಯಿಂದ ₹ 1,38,54,439.41ಗೆ ತಲುಪಿತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್ಐಐ) ನಿರಂತರ ಮಾರಾಟ ಮತ್ತು ಅಮೆರಿಕದ ಫೆಡ್ (ಫೆಡರಲ್ ರಿಸರ್ವ್) ದರ ಕಡಿತವು ಭವಿಷ್ಯದಲ್ಲಿ ಉಂಟಾಗಬಹುದಾದದ ಅನಿಶ್ಚಿತತೆಯು ಹೂಡಿಕೆದಾರರ ಮನೋಭಾವವನ್ನು ಕುಗ್ಗಿಸಿದೆ. ನಿಧಾನಗತಿಯ ಪರೋಕ್ಷ ತೆರಿಗೆ ಸಂಗ್ರಹ ಮತ್ತು ತೈಲ ಬೆಲೆಗಳ ಏರಿಕೆಯ ಉತ್ತೇಜಕದತ್ತ ಸರ್ಕಾರದ ಗಮನ ನೆಟ್ಟಿರುವುದು ಹೂಡಿಕೆ ಮಾರುಕಟ್ಟೆಯಿಂದ ಅದರ ದೃಷ್ಟಿ ದೂರಗೊಳಿಸಿದೆ. ಈ ಬೆಳವಣಿಗೆ ಹೀಗೆಯೇ ಸಾಗಿದರೆ ಮಾರುಕಟ್ಟೆಯ ತೊಡಕುಗಳು ಮುಂದುವರಿಯಲಿವೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ವಿಶ್ಲೇಷಿಸಿದ್ದಾರೆ.