ಕರ್ನಾಟಕ

karnataka

ETV Bharat / business

ಮಾರ್ಚ್‌ನಲ್ಲಿ ಭಾರತದ ಸಗಟು ಹಣದುಬ್ಬರ ಶೇ 7.39ಕ್ಕೆ ಏರಿಕೆ - ಸಗಟು ಬೆಲೆ ಸೂಚ್ಯಂಕ ಹಣದುಬ್ಬರ

ಕಳೆದ ತಿಂಗಳು ಹಣದುಬ್ಬರ ದರವು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ. 2020ದ ಮಾರ್ಚ್ ತಿಂಗಳಿಂದ 2021ರ ಮಾರ್ಚ್ ತಿಂಗಳವರೆಗಿನ ವಾರ್ಷಿಕ ಹಣದುಬ್ಬರ ದರವು ಶೇ 7.39ರಷ್ಟಿದೆ (ತಾತ್ಕಾಲಿಕ). ತಿಂಗಳಿಗೊಮ್ಮೆ (2021ರ ಫೆಬ್ರವರಿಯಿಂದ ಮಾರ್ಚ್​ವರೆಗೆ) ಹಣದುಬ್ಬರ ದರವು ಶೇ 1.57ರಷ್ಟು ಏರಿಕೆಯಾಗಿದೆ.

WPI inflation
WPI inflation

By

Published : Apr 15, 2021, 2:32 PM IST

ನವದೆಹಲಿ:ಸಗಟು ಬೆಲೆಗಳ ಆಧಾರದ ಮೇಲೆ ಭಾರತದ ವಾರ್ಷಿಕ ಹಣದುಬ್ಬರ ದರವು ಮಾರ್ಚ್‌ನಲ್ಲಿ ಶೇ 7.39ರಷ್ಟು ಹಾಗೂ ಫೆಬ್ರವರಿಯಲ್ಲಿ ಶೇ 4.17ರಷ್ಟು ಹೆಚ್ಚಳವಾಗಿದೆ.

ಕಳೆದ ತಿಂಗಳು ಹಣದುಬ್ಬರ ದರವು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ. 2020ರ ಮಾರ್ಚ್ ತಿಂಗಳಿಂದ 2021ರ ಮಾರ್ಚ್ ತಿಂಗಳವರೆಗಿನ ವಾರ್ಷಿಕ ಹಣದುಬ್ಬರ ದರವು ಶೇ 7.39ರಷ್ಟಿದೆ (ತಾತ್ಕಾಲಿಕ). ತಿಂಗಳಿಗೊಮ್ಮೆ (2021ರ ಫೆಬ್ರವರಿಯಿಂದ ಮಾರ್ಚ್​ವರೆಗೆ) ಹಣದುಬ್ಬರ ದರವು ಶೇ 1.57ರಷ್ಟು ಏರಿಕೆಯಾಗಿದೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಮೂಲ ಲೋಹದ ಬೆಲೆಗಳು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ 2021ರ ಮಾರ್ಚ್​ನಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಇದಲ್ಲದೇ, ರಾಷ್ಟ್ರವ್ಯಾಪಿ ಲಾಕ್‌ಡೌನ್ ಕಾರಣ, 2020ರ ಮಾರ್ಚ್ (120.4) ಡಬ್ಲ್ಯುಪಿಐ ಸೂಚ್ಯಂಕ ಕಡಿಮೆ ದರದಲ್ಲಿ ಲೆಕ್ಕಹಾಕಲಾಗಿದೆ ಎಂದಿದೆ.

ABOUT THE AUTHOR

...view details