ನವದೆಹಲಿ:ಕೋವಿಡ್ ಸಾಂಕ್ರಾಮಿಕ ಪ್ರಭಾವದಿಂದಾಗಿ ಭಾರತದ ಜಿಡಿಪಿ ಸಂಕೋಚನವು 2021ರ ಹಣಕಾಸು ವರ್ಷದಲ್ಲಿ ಈ ಹಿಂದಿನ ಅಂದಾಜಿತ ಮೈನಸ್ ಶೇ 10.9ರಿಂದ ಮೈನಸ್ ಶೇ 4.4ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಎಸ್‌ಬಿಐ ಇಕೋವ್ರಾಪ್ ವರದಿ ತಿಳಿಸಿದೆ.
ನಮ್ಮ ಪರಿಷ್ಕೃತ ಜಿಡಿಪಿ ಅಂದಾಜುಗಳನ್ನು ಉದ್ಯಮದ ಚಟುವಟಿಕೆ, ಸೇವಾ ಕಾರ್ಯಗಳು ಮತ್ತು ಜಾಗತಿಕ ಆರ್ಥಿಕತೆಗೆ ಸಂಬಂಧಿಸಿದ 41ಕ್ಕೂ ಅಧಿಕ ಆವರ್ತನ ಸೂಚಕಗಳ ಜತೆಗೆ ಎಸ್‌ಬಿಐ 'ನೌಕಾಸ್ಟಿಂಗ್ ಮಾಡೆಲ್' ಆಧರಿಸಿವೆ ಎಂದು ವರದಿ ಹೇಳಿದೆ.
2012ರ 4ನೇ ತ್ರೈಮಾಸಿಕದಿಂದ 2020ರ 4ನೇ ತ್ರೈಮಾಸಿಕದವರೆಗಿನ 41ಕ್ಕೂ ಅಧಿಕ ಆವರ್ತನ ಸೂಚಕಗಳ ಸಾಮಾನ್ಯ/ ಪ್ರತಿನಿಧಿ/ ಸುಪ್ತ ಅಂಶಗಳನ್ನು ಅಂದಾಜು ಮಾಡಲು ಡೈನಾಮಿಕ್ ಫ್ಯಾಕ್ಟರ್ ಮಾದರಿ ಬಳಸಿದ್ದೇವೆ. ಈ ಮಾದರಿಯ ಆಧಾರದ ಮೇಲೆ ಮೂರನೇ ತ್ರೈಮಾಸಿಕದ ಮುನ್ಸೂಚನೆಯ ಜಿಡಿಪಿ ಬೆಳವಣಿಗೆಯು ಶೇ 0.1ರಷ್ಟಿದೆ (ಕೆಳಮುಖ) ಎಂದು ವರದಿ ಸೂಚಿಸಿದೆ.