ನವದೆಹಲಿ:ಪ್ರಪಂಚದಾದ್ಯಂತ ಗೇಮರ್ಗಳು ಪ್ರತಿ ವಾರ ಸರಾಸರಿ ಎಂಟು ಗಂಟೆ 27 ನಿಮಿಷ ವಿಡಿಯೋ ಗೇಮ್‌ಗಳಲ್ಲಿ ಮುಳುಗುತ್ತಿದ್ದಾರೆ ಎಂದು ವಿಡಿಯೋ ವಿತರಣೆ ಮತ್ತು ಎಡ್ಜ್ ಕ್ಲೌಡ್ ಸೇವಾ ಪೂರೈಕೆದಾರ ತಿಳಿಸಿದೆ.
ವಿಡಿಯೋ ಗೇಮ್ ಪ್ಲೇಯಿಂಗ್ ಪ್ರಪಂಚದಾದ್ಯಂತ ಹೊಸ ಎತ್ತರಕ್ಕೆ ಏರಿದೆ. ಕಳೆದ ವರ್ಷಕ್ಕಿಂತ ಗ್ರಾಹಕರ ಗೇಮಿಂಗ್ ಸಮಯವು ಶೇ 14ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಡೇಟಾ ತಿಳಿಸಿದೆ.
ಸಾಂಕ್ರಾಮಿಕ ಸಮಯದಲ್ಲಿ ಲಾಕ್ಡೌನ್ ಪ್ರಭಾವದಿಂದ ಬಹುತೇಕ ಜನರು ಮನೆಯಲ್ಲಿ ಸಿಲುಕಿದ್ದರ ಪರಿಣಾಮವಾಗಿ ಮನರಂಜನೆಗಾಗಿ ವಿಡಿಯೋ ಗೇಮಿಂಗ್ ಮೊರೆ ಹೋಗಿದ್ದರಿಂದ ಆನ್‌ಲೈನ್ ಗೇಮಿಂಗ್ ಮತ್ತಷ್ಟು ಜನಪ್ರಿಯತೆಯಾಗಿದೆ ಎಂದು ಹೇಳಿದೆ.
ಸಾಮಾಜಿಕ ಸಂವಹನ, ಸುಧಾರಿತ ಗೇಮಿಂಗ್ ಕಾರ್ಯಕ್ಷಮತೆ ಮತ್ತು ಮುಕ್ತ ವಾತಾವರಣವನ್ನು ಭಾರತೀಯ ಗೇಮರ್ಗಳು ನಿರೀಕ್ಷಿಸುತ್ತಿದ್ದಾರೆ. ವಿಶ್ವದಾದ್ಯಂತದ ಗೇಮರುಗಳಿಗೆ ಸಂಪರ್ಕ ಸಾಧಿಸಲು ಮತ್ತು ಹೆಚ್ಚಿನ ಅವಧಿಗೆ ತೊಡಗಿಸಿಕೊಳ್ಳಲು ಅವಕಾಶವನ್ನು ನೀಡುತ್ತದೆ ಎಂದು ಲೈಮ್‌ಲೈಟ್ ನೆಟ್‌ವರ್ಕ್ಸ್ ಇಂಡಿಯಾದ ಡೈರೆಕ್ಟರ್ ಅಶ್ವಿನ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.