ಹೈದರಾಬಾದ್:ಹೊಸ ವರ್ಷದ ಮೊದಲ ದಿನದಂದು ವಾಣಿಜ್ಯ ಸಿಲಿಂಡರ್ ಗ್ರಾಹಕರಿಗೆ ಉಡುಗೊರೆ ನೀಡಲಾಗಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಇಂಡಿಯನ್ ಆಯಿಲ್ ಕಡಿತಗೊಳಿಸಿದೆ. 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಇಂಡಿಯನ್ ಆಯಿಲ್ (IOCL) ಪ್ರಕಾರ, ಜನವರಿ 1, 2022 ರಂದು, ದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 102 ರೂ. ಕಡಿತಗೊಳಿಸಲಾಗಿದೆ. ದೆಹಲಿಯಲ್ಲಿ 19 ಕೆಜಿಯ ಸಿಲಿಂಡರ್ 1998 ರೂ. ದೊರೆಯಲಿದೆ. ಚೆನ್ನೈನಲ್ಲಿ ಗ್ರಾಹಕರು 2,131 ರೂ. ಹಾಗೂ ಮುಂಬೈನಲ್ಲಿ 1948.50 ರೂ ಪಾವತಿಸಬೇಕಾಗುತ್ತದೆ. ಇದೇ ಕೋಲ್ಕತ್ತಾ ಗ್ರಾಹಕರಿಗೆ 2076 ರೂ.ಗೆ ಲಭ್ಯವಾಗಲಿದೆ.