ನವದೆಹಲಿ: ಭಾರತದಲ್ಲಿ ಧರಿಸುವ ಎಲೆಕ್ಟ್ರಾನಿಕ್ ಸಾಧನಗಳ (ವೇರೆಬಲ್ಸ್) ಮಾರುಕಟ್ಟೆಯು 2020ರಲ್ಲಿ 36.4 ದಶಲಕ್ಷ ಯುನಿಟ್ ಸಾಗಣೆಯೊಂದಿಗೆ ವರ್ಷಕ್ಕೆ ಶೇ 144.3 ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಸಂಶೋಧನಾ ಸಂಸ್ಥೆ ಐಡಿಸಿ ತಿಳಿಸಿದೆ.
2020ರಲ್ಲಿ ಧರಿಸಬಹುದಾದ ವಸ್ತುಗಳ ಮೂರು-ಅಂಕಿಯ ಬೆಳವಣಿಗೆ ದಾಖಲಿಸಿದ ಅಗ್ರ 20ರಲ್ಲಿ ಭಾರತವು ಏಕೈಕ ರಾಷ್ಟ್ರವಾಗಿದೆ. ಜಾಗತಿಕವಾಗಿ ಮೂರನೇ ಅತಿದೊಡ್ಡ ವೇರೆಬಲ್ಸ್ ಮಾರುಕಟ್ಟೆಯಾಗಿ ಮುಂದುವರೆದಿದೆ ಎಂದು ಐಡಿಸಿ ಪ್ರಕಟಣೆಯಲ್ಲಿ ಹೇಳಿದೆ.
ಇಯರ್‌ವೇರ್ ಸಾಧನಗಳು ಮತ್ತು ಮಣಿಕಟ್ಟಿನ ಬ್ಯಾಂಡ್‌ಗಳು ಸೇರಿ ಕೈಗಡಿಯಾರಗಳಿಗೆ ಅಪ್‌ಗ್ರೇಡ್ ತನಕ, ಈ ಎರಡೂ ವಿಭಾಗವು 2020ರಲ್ಲಿ ಅತ್ಯಧಿಕ ವಾರ್ಷಿಕ ಸಾಗಣೆ ದಾಖಲಿಸಿವೆ. 2020ರ ಅಕ್ಟೋಬರ್-ಡಿಸೆಂಬರ್ ಅವಧಿಯು ದೇಶದ ವೇರೆಬಲ್ಸ್ ವಿಭಾಗಕ್ಕೆ ಅತಿದೊಡ್ಡ ತ್ರೈಮಾಸಿಕವಾಗಿದ್ದು, ಮೂರು-ಅಂಕಿಯ ಬೆಳವಣಿಗೆ ಕಾಯ್ದುಕೊಂಡಿದೆ. ಮಾರಾಟಗಾರರು ಈ ಅವಧಿಯಲ್ಲಿ 15.2 ಮಿಲಿಯನ್ ಯುನಿಟ್ಗಳನ್ನು ರವಾನಿಸಿದ್ದಾರೆ. ಇದು ವರ್ಷದಿಂದ ವರ್ಷಕ್ಕೆ ಶೇ 198.2 ರಷ್ಟು ಹೆಚ್ಚಾಗಿದೆ.
2020 ರಲ್ಲಿ ಆಡಿಯೋ ವಿಭಾಗದಲ್ಲಿ ವೈರ್ನಿಂದ ವೈರ್‌ಲೆಸ್ ಗ್ಯಾಜೆಟ್ಗಳಿಗೆ ಪರಿವರ್ತನೆಯ ವರ್ಷವಾಗಿತ್ತು. 2021ರಲ್ಲಿ ಈ ವರ್ಗವು ಹೆಚ್ಚು ಅತ್ಯಾಧುನಿಕ ಸಾಧನಗಳತ್ತ ಸಾಗಲಿದೆ. ವರ್ಧಿತ ಆಡಿಯೋ ಅನುಭವವು ಎಲ್ಲಾ ಮಾರಾಟಗಾರರಿಗೆ ಪ್ರಧಾನ ಮಾರುಕಟ್ಟೆ ವಿಷಯವಾಗಿದೆ ಎಂದು ಐಡಿಸಿ ಇಂಡಿಯಾ ಅಸೋಸಿಯೇಟ್ ರಿಸರ್ಚ್ ಮ್ಯಾನೇಜರ್ (ಕ್ಲೈಂಟ್ ಸಾಧನ) ಜೈಪಾಲ್ ಸಿಂಗ್ ಹೇಳಿದರು.