ಕರ್ನಾಟಕ

karnataka

ETV Bharat / business

ನೀರು ದುಬಾರಿ!  ಸ್ಟಾಕ್​ ಮಾರ್ಕೆಟ್​​​​ನಲ್ಲಿ ನೀರು ಮಾರುವ ಚರ್ಚೆ: ಕಾಸು ಕೊಟ್ಟು ಜೀವಜಲ ಬೇಡುವ ದುಃಸ್ಥಿತಿ! - ಷೇರುಪೇಟೆಯಲ್ಲಿ ನೀರು ಮಾರಾಟ

ಭಾರತದ ನೀರು ನಿರ್ವಹಣಾ ತಜ್ಞರ ಪ್ರಕಾರ, ವ್ಯಾಪಾರ ವಿನಿಮಯ ಕೇಂದ್ರಗಳಲ್ಲಿ ನೀರಿನ ವ್ಯಾಪಾರ ಮತ್ತು ಸರಕುಗಳ ಮೇಲೆ ಬೆಲೆ ನಿಗದಿಪಡಿಸುವುದು ಕೈಗಾರಿಕೆ ಮತ್ತು ರೈತರಂತಹ ಅಂತಿಮ ಗ್ರಾಹಕರ ಮೇಲೆ ದುಷ್ಪರಿಣಾಮಕ್ಕೆ ಕಾರಣ ಆಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

stock exchanges
ಸ್ಟಾಕ್

By

Published : Dec 25, 2020, 4:58 PM IST

Updated : Dec 25, 2020, 5:04 PM IST

ಹೈದರಾಬಾದ್​:ಸೆಪ್ಟೆಂಬರ್​​ ಮಾಸಿಕದಲ್ಲಿ ಅಮೆರಿಕದ ಸ್ಟಾಕ್​ ಎಕ್ಸ್​ಚೇಂಜ್​ನಲ್ಲಿ ನೀರಿನ ವಹಿವಾಟು ಪ್ರಾರಂಭವಾಗಿ ಸಾಕಷ್ಟು ಜನರ ಹುಬ್ಬೇರಿಸುವಂತೆ ಮಾಡಿತು. ಈಗಾಗಲೇ ಬಹು ವಿರಳವಾಗಿರುವ ದ್ರವದ ಸರಕು ಸರಕು ಜಾಗತಿಕವಾಗಿ ಮತಷ್ಟು ದುಬಾರಿ ಆಗುತ್ತದೆ ಎಂದು ಅನೇಕರು ಆತಂಕಪಡುತ್ತಿದ್ದಾರೆ.

ಭಾರತದ ನೀರು ನಿರ್ವಹಣಾ ತಜ್ಞರ ಪ್ರಕಾರ, ವ್ಯಾಪಾರ ವಿನಿಮಯ ಕೇಂದ್ರಗಳಲ್ಲಿ ನೀರಿನ ವ್ಯಾಪಾರ ಮತ್ತು ಸರಕುಗಳ ಮೇಲೆ ಬೆಲೆಯನ್ನು ನಿಗದಿಪಡಿಸುವುದು ಕೈಗಾರಿಕೆ ಮತ್ತು ರೈತರಂತಹ ಅಂತಿಮ ಗ್ರಾಹಕರ ಮೇಲೆ ದುಷ್ಪರಿಣಾಮಕ್ಕೆ ಕಾರಣ ಆಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸುಮಾರು ಎರಡು ದಶಕಗಳಿಂದ ವಿಶ್ವ ವನ್ಯಜೀವಿ ನಿಧಿಯೊಂದಿಗೆ ಕೆಲಸ ಮಾಡಿದ ಜಲ ನಿರ್ವಹಣಾ ತಜ್ಞ ಡಾ. ಬಿಕ್ಷಮ್ ಗುಜ್ಜಾ ಅವರು ಈಟಿವಿ ಭಾರತ ಜತೆ ಮಾತನಾಡಿದರು. ನಿಸರ್ಗದಲ್ಲಿ ನೀರು ಮುಕ್ತವಾಗಿ ಲಭ್ಯವಾಗುತ್ತದೆ ಎಂದು ಪರಿಗಣಿಸಲಾಗುತ್ತಿದೆ. ಈ ಜೀವಜಲ ಭಾರತದ ತೆರಿಗೆದಾರರಿಗೆ ಅತ್ಯಂತ ದುಬಾರಿಯಾಗಿದೆ (ಸಂಪನ್ಮೂಲ). ಬಹುಶಃ ನೀರಿಗೆ ಬೆಲೆ ನಿಗದಿ ಪಡಿಸಿದರೇ ನಾವು ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ನೀರಿನ ವ್ಯಾಪಾರ ನಡೆಯತ್ತಿದೆ ಎಂಬುದರ ಬಗ್ಗೆ ಎಚ್ಚರಿಕೆ ನೀಡುವ ಬದಲು, ನಾವು ಮುಕ್ತವಾಗಿ ಪಡೆಯುತ್ತಿದ್ದೇವೆ ಎಂಬುದನ್ನು ಅರ್ಥೈಸಿಕೊಂಡು ಅದರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು.

ಅಮೆರಿಕದಲ್ಲಿ ಕ್ಯಾಲಿಫೋರ್ನಿಯಾದ ವಾಟರ್ ಫ್ಯೂಚರ್ಸ್ ಷೇರು ಮಾರಾಟ ಆರಂಭಿಸಿದೆ. ಸೆಪ್ಟೆಂಬರ್​ನಲ್ಲಿ ಚಿಕಾಗೊ ಮೂಲದ ಸಿಎಂಇ ಗ್ರೂಪ್ ಪ್ರಾರಂಭಿಸಿದ ಬಳಿಕ ವಾಟರ್ ಫ್ಯೂಚರ್ಸ್​ ಶುರುವಾಯಿತು.

ಭವಿಷ್ಯದಲ್ಲಿ ನೀರಿನ ಬಳಕೆದಾರರಿಗೆ ಅಪಾಯದ ಮಟ್ಟ ನಿರ್ವಹಿಸಲು ನೆರವಾಗುತ್ತದೆ ಮತ್ತು ಪೂರೈಕೆ ಹಾಗೂ ಬೇಡಿಕೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಬಹುದು ಎಂದು ಸಿಎಂಇ ಗ್ರೂಪ್​ ಹೇಳಿತ್ತು. ಕೃಷಿಯ ಉದಾಹರಣೆಯನ್ನು ತೆಗೆದುಕೊಂಡ ಗುಜ್ಜಾ, ಭಾರತದಲ್ಲಿ ಕಡಿಮೆ ಆದಾಯ ಪಡೆಯಲು ರೈತರು ನೀರನ್ನು ಹೇಗೆ ದೊಡ್ಡ ವೆಚ್ಚದಲ್ಲಿ ಸರಬರಾಜು ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ರೈತರಿಗೆ ಎಲ್ಲಿ ಒಳ್ಳೆ ಬೆಲೆ ಸಿಗುತ್ತೋ ಅಲ್ಲಿಯೇ ಬೆಳೆ ಮಾರಿದ್ರೆ ತಪ್ಪೇನಿದೆ? ವಿಪಕ್ಷಗಳಿಗೆ ನಮೋ ಪ್ರಶ್ನೆ

ನೀರು ಮುಕ್ತವಾಗಿ ಇರುವುದರಿಂದ ಈ ಬಗ್ಗೆ ನಮ್ಮಲ್ಲಿ ಕನಿಷ್ಠ ಗ್ರಹಿಕೆ ಮೂಡಿದೆ. ಆ ನೀರನ್ನು ಸೂಕ್ತ ಅಥವಾ ಉತ್ಪಾದಕ ರೀತಿಯಲ್ಲಿ ಬಳಸಲು ಯಾವುದೇ ಪ್ರೋತ್ಸಾಹವಾಗಲಿ ಅಥವಾ ಕಾರ್ಯವಿಧಾನವಾಗಲಿ ಇಲ್ಲ. ಆಗಾಗ್ಗೆ ನೀರಿನ ವಿತರಣೆಯ ವೆಚ್ಚ, ಬಂಡವಾಳ ವೆಚ್ಚಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದರಿಂದ ವರ್ಷದಿಂದ ವರ್ಷಕ್ಕೆ ಉಂಟಾಗುವ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳು ಧಾನ್ಯಗಳ ಉತ್ಪಾದನೆ ಮೀರುತ್ತದೆ ಎಂದು ಹೇಳಿದರು.

ನೀರಿನ ವ್ಯಾಪಾರ ಮಾಡಬಹುದಾದ ಪರವಾನಗಿಗಳನ್ನು ಅನೇಕ ದೇಶಗಳಲ್ಲಿ ಪರಿಚಯಿಸಲಾಗಿದೆ ಮತ್ತು ಅದು ಸಾಮಾನ್ಯವಾಗಿದೆ. ಭಾರತೀಯ ರೈತರು ಧಾನ್ಯಗಳನ್ನು ಬೆಳೆಯುವುದಕ್ಕಿಂತ ನೀರಿನ ಪರವಾನಗಿಗಳನ್ನು ವ್ಯಾಪಾರ ಮಾಡುವುದೇ ಉತ್ತಮವಾಗಬಹುದು ಎಂದು ಗುಜ್ಜಾ ಹೇಳಿದರು.

ಕನಿಷ್ಠ ಅದಾದರೂ ನಾವು ಉತ್ಪಾದಿಸುತ್ತಿರುವ ಬೆಳೆಗಳ ನಿಜವಾದ ಮೌಲ್ಯ ನೀಡುತ್ತದೆ. ಮೊದಲ ಬಾರಿಗೆ ಇದು ನಮಗೆ ಸ್ಪಷ್ಟವಾಗಿ ಕಾಣಿಸದಿದ್ದರೂ ಕುಡಿಯುವ ನೀರಿನ ಬಾಟಲಿಗಳ ರೂಪದಲ್ಲಿ ಅಥವಾ ಕಾಲುವೆ ಮತ್ತು ಕೊಳವೆಗಳ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂದರು.

ರೈತ ಮಟ್ಟದಲ್ಲಿ, ನಗರ ಮಟ್ಟದಲ್ಲಿ, ಗ್ರಾಮೀಣ ಮಟ್ಟದಲ್ಲಿ ನೀರಿನ ವ್ಯಾಪಾರವಿದೆ. ಭಾರತೀಯ ಬಳಕೆದಾರರು ಈಗ ಪಾವತಿಸುತ್ತಿರುವ ವೆಚ್ಚವು ನೀರಿನ ವೆಚ್ಚವನ್ನು ಒಳಗೊಂಡಿರುವುದಿಲ್ಲ. ಬದಲಿಗೆ ಅವು ಕಾರ್ಯಾಚರಣೆಯ ಮತ್ತು ನಿರ್ವಹಣಾ ವೆಚ್ಚಗಳಾಗಿವೆ ಎಂದು ಹೇಳಿದರು.

Last Updated : Dec 25, 2020, 5:04 PM IST

ABOUT THE AUTHOR

...view details