ನವದೆಹಲಿ:ಭಾರತಕ್ಕೆ ಸ್ಮಾರ್ಟ್ ಮತ್ತು ಸಂವೇದನಾಶೀಲ ಕ್ರಿಪ್ಟೋ ಕರೆನ್ಸಿ ನಿಯಂತ್ರಣದ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಅದಕ್ಕಾಗಿ ಮಸೂದೆ ರೂಪಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂಟರ್ನೆಟ್ ಮತ್ತು ಮೊಬೈಬ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಎಂಐಐ) ಮತ್ತು ಅದರ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋ ಅಸೆಟ್ಸ್ ಕೌನ್ಸಿಲ್ (ಬಿಎಸಿಸಿ) ಸದಸ್ಯರು ಆಯೋಜಿಸಿರುವ ವೆಬ್ನಾರ್ನಲ್ಲಿ, ಈ ಅಭಿಪ್ರಾಯ ಹೊರ ಬಿದ್ದಿದೆ. ಕ್ರಿಪ್ಟೋ ನಿಯಂತ್ರಣ ಅಗತ್ಯವಾಗಿದ್ದು, ಈಗಾಗಲೇ ಭಾರತದಲ್ಲಿ 1.5 ಕೋಟಿ ರೂ. ಗಿಂತಲೂ ಹೆಚ್ಚು ಭಾರತೀಯರು 1,5000 ಕೋಟಿ ರೂ ಮೌಲ್ಯದ ಕ್ರಿಪ್ಟೋ ಸ್ವತ್ತು ಹೊಂದಿದ್ದಾರೆ. ಕ್ರಿಪ್ಟೋ ಕರೆನ್ಸಿ ನಿಯಂತ್ರಣಕ್ಕೆ ಈ ಹಿಂದೆ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಆದರೆ, ಇಲ್ಲಿಯವರೆಗೆ ಯಾವುದೇ ರೀತಿಯ ಯೋಜನೆ ರೂಪಿಸಿಲ್ಲ.