ಕರ್ನಾಟಕ

karnataka

ETV Bharat / business

ಭಾರತವು 400 ಬಿಲಿಯನ್ ಡಾಲರ್​​ ಸರಕು ರಫ್ತುಗಳ ಗುರಿಯತ್ತ ಸಾಗಿರೋದು ಮೈಲಿಗಲ್ಲು - ಪ್ರಧಾನಿ ಬಣ್ಣನೆ - India achieving USD-400 bn goods export target

ಭಾರತವು $400 ಬಿಲಿಯನ್ ಸರಕು ರಫ್ತುಗಳ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ಮೊದಲ ಬಾರಿಗೆ ಈ ಗುರಿಯನ್ನು ಸಾಧಿಸಲಿದ್ದು, ಇದಕ್ಕಾಗಿ ರೈತರು, ನೇಕಾರರು, ಸಣ್ಣ ಉದ್ಯಮಿಗಳು ಹಾಗೂ ರಫ್ತುದಾರರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿ ಟ್ವೀಟ್‌ ಮಾಡಿದ್ದಾರೆ.

India achieving USD-400 bn goods export target key 'Aatmanirbhar Bharat' milestone: PM
ಭಾರತವು $400 ಬಿಲಿಯನ್ ಸರಕು ರಫ್ತುಗಳ ಗುರಿಯತ್ತ ಸಾಗಿರೋದು ಆತ್ಮನಿರ್ಭರ ಭಾರತದ ಪ್ರಮುಖ ಮೈಲಿಗಲ್ಲು - ಪ್ರಧಾನಿ

By

Published : Mar 23, 2022, 12:22 PM IST

ನವದೆಹಲಿ: 400 ಶತಕೋಟಿ ಡಾಲರ್‌ ಮೌಲ್ಯದ ಸರಕು ರಫ್ತು ಗುರಿಯನ್ನು ಸಾಧಿಸುವತ್ತ ದಾಪುಗಾಲು ಇಟ್ಟಿರುವ ದೇಶದ ಯಶಸ್ಸನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ಇದು ಭಾರತದ 'ಆತ್ಮನಿರ್ಭರ ಭಾರತ' ಪ್ರಯಾಣದಲ್ಲಿನ ಪ್ರಮುಖ ಮೈಲಿಗಲ್ಲು ಎಂದು ಪ್ರತಿಪಾದಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ನಮೋ, ಭಾರತವು $400 ಬಿಲಿಯನ್ ಸರಕು ರಫ್ತುಗಳ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ಮೊದಲ ಬಾರಿಗೆ ಈ ಗುರಿಯನ್ನು ಸಾಧಿಸಲಿದೆ. ಈ ಯಶಸ್ಸಿಗಾಗಿ ನಮ್ಮ ರೈತರು, ನೇಕಾರರು, ಎಂಎಸ್‌ಎಂಇಗಳು, ಉತ್ಪಾದಕರು, ರಫ್ತುದಾರರನ್ನು ಅಭಿನಂದಿಸುತ್ತೇನೆ. ಇದು ನಮ್ಮ ಆತ್ಮನಿರ್ಭರ ಭಾರತ್ ಪಯಣದಲ್ಲಿನ ಪ್ರಮುಖ ಮೈಲಿಗಲ್ಲು ಎಂದಿದ್ದಾರೆ.

#LocalGoesGlobal ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಭಾರತದ ಅತ್ಯಧಿಕ ರಫ್ತು ಗುರಿಯನ್ನು ಉದ್ದೇಶಿತ ಗಡುವಿನ ಒಂಬತ್ತು ದಿನಗಳ ಮುಂಚಿತವಾಗಿ ಸಾಧಿಸುವ ಗ್ರಾಫಿಕ್ಸ್ ಅನ್ನು ಪೋಸ್ಟ್ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶ್ರೀನಗರದಲ್ಲಿ ಗಲ್ಫ್ ರಾಷ್ಟ್ರಗಳ ಹೂಡಿಕೆ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ನಂತರ, ಕೇಂದ್ರಾಡಳಿತ ಪ್ರದೇಶಕ್ಕೆ ಹೆಚ್ಚಿನ ಹೂಡಿಕೆಯನ್ನು ಸೆಳೆಯಲು ಹಾಗೂ ಜನರಿಗೆ ಹೆಚ್ಚಿನ ಅವಕಾಶಗಳನ್ನು ಖಾತ್ರಿಪಡಿಸುವ ಪ್ರಯತ್ನಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಕಚೇರಿಯ ಟ್ವೀಟ್‌ಗೆ ಪ್ರಧಾನಿ ಪ್ರತಿಕ್ರಿಯಿಸಿ, ಇದು ಶ್ರೀನಗರದಲ್ಲಿ ಗಲ್ಫ್ ದೇಶಗಳ ಹೂಡಿಕೆ ಶೃಂಗಸಭೆಯನ್ನು ಉದ್ದೇಶಿಸಿ ಎಲ್‌ಜಿ ಮತ್ತು ಜೆಕೆ ಕೇಂದ್ರಾಡಳಿತ ಪ್ರದೇಶ ಮತ್ತು ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ಕಂಪನಿಗಳ ಆರ್ಥಿಕ ಸಹಕಾರದ ವ್ಯಾಪ್ತಿಯನ್ನು ಎತ್ತಿ ತೋರಿಸಿದೆ ಎಂದು ಹೇಳಿದ್ದಾರೆ. ಭೂಮಿಯ ಮೇಲಿನ ಸ್ವರ್ಗ ವಿಶ್ವದ ಅತ್ಯಂತ ಸುಂದರವಾದ ಹೂಡಿಕೆ ತಾಣವಾಗಿದೆ ಎಂದು ಟ್ವೀಟ್‌ ಮಾಡಿ ಅದನ್ನು ಟ್ಯಾಗ್‌ ಮಾಡಿದ್ದಾರೆ.

ಇದನ್ನೂ ಓದಿ:ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ 29 ಪುರಾತನ ವಸ್ತುಗಳು: ಪರಿಶೀಲಿಸಿದ ಪಿಎಂ ಮೋದಿ

ABOUT THE AUTHOR

...view details