ಕರ್ನಾಟಕ

karnataka

ETV Bharat / business

ರಷ್ಯಾ, ಬೆಲಾರಸ್‌ನಲ್ಲಿ ಮಳಿಗೆ, ಉತ್ಪಾದನಾ ಘಟಕ ಸ್ಥಗಿತಗೊಳಿಸಿದ ಸ್ವೀಡನ್‌ನ ಐಕಿಯಾ - Russia Ukraine War

ಸ್ವೀಡನ್‌ ದೇಶದ ಪೀಠೋಪಕರಣ ತಯಾರಕ ದೈತ್ಯ ಕಂಪನಿ ಐಕಿಯಾ ರಷ್ಯಾ, ಬೆಲಾರಸ್‌ನಲ್ಲಿ ತಮ್ಮ ವ್ಯಾಪಾರ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದರಿಂದ ಈ ಎರಡೂ ದೇಶಗಳಲ್ಲಿನ ಸುಮಾರು 15,000 ಉದ್ಯೋಗಿಗಳು, 17 ಮಳಿಗೆಗಳು ಹಾಗೂ ಮೂರು ಉತ್ಪಾದನಾ ಘಟಕಗಳ ಮೇಲೆ ಪರಿಣಾಮ ಉಂಟಾಗಲಿದೆ.

IKEA Suspends Russia, Belarus Operations Amid Ukraine Crisis
ರಷ್ಯಾ, ಬೆಲಾರಸ್‌ನಲ್ಲಿ 17 ಮಳಿಗೆಗಳು, ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಿದ ಐಕಿಯಾ

By

Published : Mar 3, 2022, 5:53 PM IST

ಸ್ಟಾಕ್‌ಹೋಮ್: ಉಕ್ರೇನ್‌ ಮೇಲೆ ಕಳೆದ 8 ದಿನಗಳಿಂದ ಯುದ್ಧ ಮಾಡುತ್ತಿರುವ ಬಲಾಢ್ಯ ರಷ್ಯಾಗೆ ಈಗಾಗಲೇ ಯುರೋಪ್‌ ಒಕ್ಕೂಟ ಸೇರಿದಂತೆ ಹಲವು ರಾಷ್ಟ್ರಗಳು ಆರ್ಥಿಕ, ರಾಜತಾಂತ್ರಿಕ ಹಾಗು ಸಾಂಸ್ಕೃತಿಕ ನಿರ್ಬಂಧಗಳನ್ನು ಹೇರಿವೆ. ಇದರ ಜೊತೆಗೆ ರಷ್ಯಾ ಮತ್ತು ಬೆಲಾರಸ್‌ ಅನ್ನು ಕ್ರೀಡೆಯಿಂದಲೂ ದೂರ ಇಟ್ಟಿವೆ. ಇದೀಗ ಈ ಪಟ್ಟಿಗೆ ಸ್ವೀಡನ್‌ ಕೂಡ ಸೇರಿಕೊಂಡಿದೆ.

ಸ್ವೀಡನ್‌ನ ಪೀಠೋಪಕರಣ ತಯಾರಕ ದೈತ್ಯ ಸಂಸ್ಥೆ ಐಕಿಯಾ ರಷ್ಯಾ ಮೇಲೆ ವ್ಯಾಪಾರ ನಿರ್ಬಂಧ ವಿಧಿಸಿದೆ. ರಷ್ಯಾ, ಬೆಲಾರಸ್‌ನಲ್ಲಿ ತನ್ನೆಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಇದರಿಂದ ಈ ಎರಡೂ ದೇಶಗಳಲ್ಲಿನ ಸುಮಾರು 15,000 ಉದ್ಯೋಗಿಗಳು, 17 ಮಳಿಗೆಗಳು ಹಾಗೂ ಮೂರು ಉತ್ಪಾದನಾ ಘಟಕಗಳ ಮೇಲೆ ನೇರ ಪರಿಣಾಮ ಉಂಟಾಗಲಿದೆ.

ಉಕ್ರೇನ್‌ನಲ್ಲಿ ನಡೆಯುತ್ತಿರುವ ವಿನಾಶಕಾರಿ ಯುದ್ಧವು ಮಾನವನಿರ್ಮಿತ ದುರಂತವಾಗಿದೆ ಎಂದು ಐಕಿಯಾ ಹೇಳಿದೆ. ನಮ್ಮ ಈ ನಿರ್ಧಾರದಿಂದ ಸಾವಿರಾರು ಐಕಿಯಾ ಸಹೋದ್ಯೋಗಿಗಳ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಕಂಪನಿಯು ಉದ್ಯೋಗಿಗಳ ಆದಾಯದ ಸ್ಥಿರತೆಯನ್ನು ಭದ್ರಪಡಿಸುತ್ತದೆ. ಅವರಿಗೆ ಮತ್ತು ಅವರ ಕುಟುಂಬಗಳಿಗೆ ಬೆಂಬಲ ನೀಡುತ್ತದೆ ಎಂದು ಹೇಳಿದೆ.

ಇದನ್ನೂ ಓದಿ:ರಷ್ಯಾದ ಯಾವುದೇ ವಿಷಯವಸ್ತುಗಳನ್ನು ಪ್ರಸಾರ ಮಾಡುವುದಿಲ್ಲ : ನೆಟ್ ಫ್ಲಿಕ್ಸ್

ABOUT THE AUTHOR

...view details