ಕರ್ನಾಟಕ

karnataka

ETV Bharat / business

2022ರಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ ಕೋಟಿ ಕೋಟಿ ಹಣ ಗಳಿಸೋಕೆ ಅತ್ಯುತ್ತಮ ಮಾರ್ಗಗಳಿವು!

2022ರಲ್ಲಿ ಜನರು ತಮ್ಮ ಗುರಿ ಸಾಧನೆಗಳಾಗಿ ಸಾಕಷ್ಟು ರೆಸೆಲೂಷನ್‌ಗಳನ್ನು ಕೈಗೊಳ್ಳುತ್ತಾರೆ. ತಮ್ಮ ಬರುವ ಆದಾಯದಲ್ಲೇ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಾರೆ. ಅಂತಹ ಕನಸುಗಳು ನನಸಾಗಬೇಕಾದರೆ ಯಾವ ರೀತಿಯ ಹೂಡಿಕೆ ಮಾಡಿದರೆ ಒಳ್ಳೆಯದು, ಎಲ್ಲಿ ಹೆಚ್ಚಿನ ಲಾಭ ಸಿಗುತ್ತದೆ, ಹೇಗೆ ಹೂಡಿಕೆ ಮಾಡಿದರೆ ಉತ್ತಮ ಎಂಬುದರ ಮಾಹಿತಿ ಇಲ್ಲಿದೆ.

How to reap rich dividends by investing wisely in 2022?
2022ರಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ ಕೋಟಿ ಕೋಟಿ ಹಣ ಗಳಿಸೋಕೆ ಅತ್ಯುತ್ತಮ ಮಾರ್ಗಗಳು ಇವು...

By

Published : Jan 1, 2022, 10:28 AM IST

ಹೈದರಾಬಾದ್‌: ಒತ್ತಡ ಮುಕ್ತ ಜೀವನವನ್ನು ನಡೆಸಲು ಹಣ ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಣಕಾಸಿನ ಗುರಿಗಳನ್ನು ಸುಲಭವಾಗಿ ಸಾಧಿಸಲು ಸರಿಯಾದ, ದೃಢವಾದ ಯೋಜನೆಗಳನ್ನು ಮಾಡಬೇಕು. ಆದರೆ, ನಾವು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಲು ವಿಫಲವಾದರೆ, ನಷ್ಟ ಕಾಣಬೇಕಾಗುತ್ತದೆ. ಒಂದು ನಿರ್ದಿಷ್ಟ ವಯಸ್ಸಿನ ನಂತರ ನಾವು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡದೇ ನಮ್ಮ ಭವಿಷ್ಯವನ್ನು ಯೋಜಿಸುವಲ್ಲಿ ವಿಫಲವಾದರೆ ಮುಂದೆ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ಹಣ ಗಳಿಸುವುದು ಮತ್ತು ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ನಮಗೆ ಲಾಭಾಂಶ ನೀಡುತ್ತದೆ. ಹಾಗಾಗಿ ಪ್ರತಿ ರೂಪಾಯಿಗೂ ಒಂದು ಲೆಕ್ಕಾಚಾರ ಇರಬೇಕು. ಆರ್ಥಿಕವಾಗಿ ಯಶಸ್ವಿಯಾಗಲು ಅನುಸರಿಸಬೇಕಾದ ಮೊದಲ ತತ್ತ್ವವೇ ಇದು. ಜೊತೆಗೆ ಗಳಿಸಿದ ಹಣವನ್ನು ಹೇಗೆ ಉಳಿಸುವುದು ಮತ್ತು ಅದು ಬೆಳೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಈ ಸಂದರ್ಭದಲ್ಲಿ ನಾವು ಹಣಕಾಸು ಯೋಜನೆಯಲ್ಲಿ ಕೆಲವು ಪ್ರಮುಖ ಸಲಹೆಗಳ ನೀಡಲಾಗಿದೆ.

ಅತ್ಯುತ್ತಮ ಹಣಕಾಸು ಯೋಜನೆಗಳು:

ಗಳಿಸಿದ ಎಲ್ಲ ಹಣ ಖರ್ಚು ಮಾಡಲು ಸಾಧ್ಯವಿಲ್ಲ. ಅದೇ ರೀತಿ ಅಷ್ಟೂ ಹಣವನ್ನು ಉಳಿಸಲು ಆಗುವುದಿಲ್ಲ. ಆದರೆ, ಆದಾಯದ ಶೇ.50ರಷ್ಟು ಹಣವನ್ನು ನಮ್ಮ ಅಗತ್ಯಗಳಿಗಾಗಿ ಖರ್ಚು ಮಾಡಬಹುದು. ಉಳಿದ ಮೊತ್ತದಲ್ಲಿ 20ರಷ್ಟು ಅಲ್ಪಾವಧಿಯ ಅಗತ್ಯಗಳಿಗಾಗಿ, ತುರ್ತು ನಿಧಿ ಹಾಗೂ ಇತರ ಅಗತ್ಯಗಳಿಗಾಗಿ ಮೀಸಲಿಡಬೇಕು.

ಉಳಿದ ಶೇ.30 ರಷ್ಟು ದೀರ್ಘಾವಧಿ ಯೋಜನೆಯೊಂದಿಗೆ ಹೂಡಿಕೆ ಮಾಡಬೇಕು. ಇದು ನಿವೃತ್ತಿ ಯೋಜನೆ, ಮಕ್ಕಳ ಉನ್ನತ ಶಿಕ್ಷಣ ಹಾಗೂ ಯಾವುದೇ ಪ್ರಮುಖ ಖರೀದಿಗಳನ್ನು ಒಳಗೊಂಡಿರಬೇಕು. ಈ 50-20-30 ನಿಯಮವನ್ನು ಪ್ರತಿ ರೂಪಾಯಿಗೂ ಅನುಸರಿಸಬೇಕು.

15-15-15 ನಿಯಮ:

ನೀವು ಕೋಟ್ಯಧಿಪತಿಗಳು ಆಗಬೇಕಾದರೆ ಈ ಸಲಹೆಯನ್ನು ಅನುಸರಿಸುವುದು ಉತ್ತಮವಾಗಿದೆ. ಒಬ್ಬ ವ್ಯಕ್ತಿಯು ಒಂದು ಯೋಜನೆಗಳಲ್ಲಿ 15 ವರ್ಷಗಳವರೆಗೆ 15,000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಅದು ಶೇ.15 ರಷ್ಟು ಆದಾಯವನ್ನು ತಂದು ಕೊಡುತ್ತದೆ. ಅಂತಿಮವಾಗಿ ಈ ಮೊತ್ತ ಒಂದು ಕೋಟಿ ರೂಪಾಯಿ ತಲುಪುವ ಸಾಧ್ಯತೆ ಇರುತ್ತದೆ.

ಈ 15-15-15 ತತ್ವವು ಎರಡು ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ದೀರ್ಘಾವಧಿಯ ಹೂಡಿಕೆಗೆ ಉಪಯುಕ್ತವಾಗಿದೆ. ಉತ್ತಮ ಆದಾಯವನ್ನು ಗಳಿಸಲು ಸಹಕಾರಿಯಾಗಿದ್ದು, ಷೇರುಪೇಟೆಗಳಲ್ಲಿ ಏರಿಳಿತಗಳಿದ್ದರೂ, ನಾವು ದೀರ್ಘಕಾಲ ಹೂಡಿಕೆ ಮಾಡುವುದನ್ನು ಮುಂದುವರಿಸಿದರೆ ಲಾಭ ಗಳಿಸಬಹುದಾಗಿದೆ.

ಇಕ್ವಿಟಿ ಹೂಡಿಕೆ:

ನೀವು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲು ಬಯಸಿದಾಗ ನಿಮ್ಮ ವಯಸ್ಸನ್ನು 100 ರಿಂದ ಕಳೆಯಬೇಕು. ಅದರಲ್ಲಿ ಬಂದ ಅಂಕಿ ಅಂಶದ ಆಧಾರದ ಮೇಲೆ ನಿಮ್ಮ ಹೂಡಿಕೆ ಮೊತ್ತದಲ್ಲಿ ನೀವು ಶೇಕಡಾವಾರು ಇಕ್ವಿಟಿಯನ್ನು ನಿರ್ಧರಿಸಬೇಕು.

ಉದಾಹರಣೆಗೆ, ನಿಮಗೆ 30 ವರ್ಷ ಎಂದು ಭಾವಿಸಿದರೆ ನೀವು ಶೇ.70 ರಷ್ಟು ವರೆಗೆ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಬೇಕು. ಉಳಿದ 30ರಷ್ಟು ಅನ್ನು ಸಾಲಕ್ಕೆ ನೀಡಬೇಕಾಗುತ್ತದೆ. ಈ ಅನುಪಾತವು ವಯಸ್ಸಿನೊಂದಿಗೆ ಬದಲಾಗುತ್ತಲೇ ಇರಬೇಕು. ನೀವು ಇನ್ನೂ ಯೋಜಿಸದಿದ್ದರೆ, ನಿದ್ರೆಯಿಂದ ಎಚ್ಚರಗೊಂಡು ಸಮೃದ್ಧ ಲಾಭಾಂಶವನ್ನು ಪಡೆಯಲು ಬುದ್ಧಿವಂತಿಕೆಯಿಂದ 2022ರ ಈ ಹೊಸ ದಿನಗಳಲ್ಲೇ ಹೂಡಿಕೆ ಮಾಡಿ.

ಇದನ್ನೂ ಓದಿ:ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ವಿವಿಧ ವಿಧಾನಗಳು ಯಾವುವು?

ABOUT THE AUTHOR

...view details