ಹೈದರಾಬಾದ್ :ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಸ್ವಂತ ಮನೆ ಕಟ್ಟಿಕೊಳ್ಳುವ ಇಲ್ಲವೇ ಖರೀದಿಸುವ ಆಸೆ ಹೊಂದಿರುತ್ತಾರೆ. ಇದು ಜೀವನ ಸಾಧನೆಗಳಲ್ಲಿ ಒಂದಾಗಿದೆ. ಈ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ಬ್ಯಾಂಕ್ ಅಥವಾ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆಯಲು ಮುಂದಾಗುತ್ತಾರೆ.
ಯಾವ ಬ್ಯಾಂಕ್ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡುತ್ತದೆ ಎಂಬುದನ್ನು ನೋಡುತ್ತೇವೆ. ಸಾಲ ಪಡೆಯಬೇಕಾದರೆ ಪ್ರಮುಖವಾಗಿ ನಮ್ಮ ವಹಿವಾಟಿನ ಸಿಬಿಲ್ ಸ್ಕೋರ್ ಚೆನ್ನಾಗಿ ಇದ್ದರೆ ತ್ವರಿತ ಸಾಲ ಪಡೆಯಲು ಅರ್ಹರಿರುತ್ತೇವೆ. ಈ ಸಿಬಿಲ್ ಅಂಕಗಳು ಏಷ್ಟು ಇರಬೇಕು. ಇದನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ಕ್ರೆಡಿಟ್ ಮಾಹಿತಿ ಬ್ಯೂರೋ ಇಂಡಿಯಾ ಲಿಮಿಟೆಡ್ (ಸಿಬಿಲ್) ಸ್ಕೋರ್ ಸಾಲದ ಪಡೆಯುವ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಸಿಬಿಲ್ ಸ್ಕೋರ್ ಹೆಚ್ಚಿದ್ದರೆ ಸಾಲ ಸಿಗುವ ಸಾಧ್ಯತೆಗಳು ಹೆಚ್ಚು. ತ್ವರಿತವಾಗಿ ಸಾಲ ಪಡೆಯಲು ಬಯಸಿದರೆ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಸುಧಾರಿಸಿಕೊಂಡಿರಬೇಕು.
ಉತ್ತಮ ಸ್ಕೋರ್ ಬಯಸಿದರೆ ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ಇಎಂಐಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು. ವಿಳಂಬ ಮಾಡಿದರೆ ಸಿಬಿಲ್ ರೇಟಿಂಗ್ ಕಡಿಮೆಯಾಗುತ್ತದೆ. 750ಕ್ಕಿಂತ ಹೆಚ್ಚು ಸ್ಕೋರ್ ಸಿಬಿಲ್ ಸ್ಕೋರ್ ಇದ್ದರೆ ಒಳ್ಳೆಯದು. ಕುಟುಂಬದ ಇಬ್ಬರಿಗಿಂತ ಹೆಚ್ಚು ಸದಸ್ಯರು ಇದ್ದರೆ ಜಂಟಿ ಸಾಲಕ್ಕೆ ಅರ್ಜಿ ಸಲ್ಲಿಸುವುದು ಉತ್ತಮ.
ಇದು ಹೆಚ್ಚಿನ ಮೊತ್ತ ಪಡೆಯಲು ಸಹಕಾರಿಯಾಗುತ್ತದೆ. ಈ ಜಂಟಿ ಸಾಲವನ್ನು ಸಂಗಾತಿ ಮತ್ತು ಪೋಷಕರೊಂದಿಗೆ ಒಟ್ಟಿಗೆ ತೆಗೆದುಕೊಳ್ಳಬಹುದು. ಸಾಲದ ಅರ್ಹತೆ ಹೆಚ್ಚಿಸುವುದರ ಜೊತೆಗೆ ಇಎಂಐ ಹೊರೆಯನ್ನು ಹಂಚಿಕೊಳ್ಳಬಹುದು. ಜೊತೆಗೆ ಆದಾಯ ತೆರಿಗೆ ವಿನಾಯಿತಿಗೆ ಇದು ಉಪಯುಕ್ತವಾಗಿದೆ.
ಸಾಲ ಪಾವತಿ ಅವಧಿ ಖಚಿತಪಡಿಸಿಕೊಳ್ಳಿ :ದೊಡ್ಡ ಮೊತ್ತದ ಸಾಲದ ಅಗತ್ಯವಿದ್ದಾಗ ಪಾವತಿಯ ಅವಧಿ ಸಾಧ್ಯವಾದಷ್ಟು ದೀರ್ಘವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದು ಇಎಂಐ ಹೊರೆಯನ್ನು ಕಡಿಮೆ ಮಾಡುತ್ತದೆ. ಇದು ಬಡ್ಡಿಯ ಹೊರೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಮರೆಯಬೇಡಿ. ಇತರ ಮೂಲಗಳಿಂದ ಆದಾಯವನ್ನು ಬಹಿರಂಗಪಡಿಸಿ. ಇತರ ಮೂಲಗಳಿಂದ ಬರುವ ಆದಾಯವು ಗೃಹ ಸಾಲ ಅರ್ಹತೆಯನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗಿದೆ.