ಕರ್ನಾಟಕ

karnataka

ETV Bharat / business

ಕಾರು ಪ್ರಿಯರಿಗೆ ಬಂಪರ್: ಹೋಂಡಾ ಕಾರುಗಳ ಮೇಲೆ 2.5 ಲಕ್ಷ ರೂ. ತನಕ ವಿಶೇಷ ಆಫರ್! - ಹೊಸ ಕಾರುಗಳು

ಹೋಂಡಾ ಸಿವಿಕ್‌ನ ಪೆಟ್ರೋಲ್ ಆವೃತ್ತಿಗೆ ವಾಹನ ತಯಾರಕರು 1 ಲಕ್ಷ ರೂ. ಆಫರ್ ನೀಡಿದ್ದಾರೆ. ಅಕ್ಟೋಬರ್‌ನಲ್ಲಿ ಡೀಸೆಲ್ ಸಿವಿಕ್ ಖರೀದಿಸಲು ಬಯಸಿದರೆ, 2.5 ಲಕ್ಷ ರೂ.ಗಳ ಬೃಹತ್ ನಗದು ರಿಯಾಯಿತಿಯ ಲಾಭ ಪಡೆಯಬಹುದು. ಈ ಕೊಡುಗೆಗಳು ಹೋಂಡಾ ಸಿವಿಕ್‌ನ ರೂಪಾಂತರ ವ್ಯಾಪ್ತಿಯಲ್ಲಿ ಲಭ್ಯವಿದೆ.

Honda
ಹೋಂಡಾ

By

Published : Oct 10, 2020, 8:10 PM IST

ನವದೆಹಲಿ:ಹೋಂಡಾ ಕಾರ್ಸ್ ಇಂಡಿಯಾ ತನ್ನ ವೆಬ್‌ಸೈಟ್​ನಲ್ಲಿ 2020ರ ಅಕ್ಟೋಬರ್​ನಲ್ಲಿ ಇತ್ತೀಚಿನ ರಿಯಾಯಿತಿ ಮತ್ತು ಕೊಡುಗೆಗಳನ್ನು ನವೀಕರಿಸಿದೆ.

ಹೋಂಡಾ ನಗದು ಲಾಭ ಮತ್ತು 2.5 ಲಕ್ಷ ರೂ. ತನಕ ರಿಯಾಯಿತಿ ನೀಡುತ್ತಿದೆ. ಈ ತಿಂಗಳ ಹೋಂಡಾದಿಂದ ಇತ್ತೀಚೆಗೆ ಪ್ರಾರಂಭಿಸಲಾದ ಅಥವಾ ನವೀಕರಿಸಿದ ಎಲ್ಲ ಮಾದರಿಗಳಲ್ಲಿ ಪ್ರಯೋಜನ ದೊರೆಯುತ್ತವೆ. ಹೋಂಡಾ ಅಮೇಜ್, ಹೊಸ ಜಾಝ್, ಹೊಸ ಡಬ್ಲ್ಯುಆರ್-ವಿ, ಫಿಫ್ತ್​-ಗೆಟ್ ಸಿಟಿ ಮತ್ತು ಸಿವಿಕ್ ಈ ಆಫರ್​ನಲ್ಲಿ ಸೇರಿವೆ.

ಪ್ರಸ್ತುತ, ಈ ತಿಂಗಳು ಹೊಸ ಹೋಂಡಾ ಸಿಆರ್-ವಿ ಅಥವಾ ಹಳೆಯ ನಾಲ್ಕನೇ ಜನ್ ಸಿಟಿ ಬಯಸುವ ಗ್ರಾಹಕರಿಗೆ ಯಾವುದೇ ರಿಯಾಯಿತಿ ಅಥವಾ ಪ್ರಯೋಜನಗಳು ದೊರೆಯುವುದಿಲ್ಲ.

ಹೊಸ ಹೋಂಡಾ ಅಮೇಜ್ ಖರೀದಿಸಲು ಬಯಸುವ ಗ್ರಾಹಕರು ಅಕ್ಟೋಬರ್‌ನಲ್ಲಿ 47,000 ರೂ.ಗಳ ಲಾಭ ಉಳಿಸಬಹುದು. ಖಾತರಿ ಯೋಜನೆಯಡಿ 12,000, 20,000 ರೂ.ಗಳವರೆಗೆ ನಗದು ರಿಯಾಯಿತಿ ಮತ್ತು 15 ಸಾವಿರ ರೂ. ವಿನಿಮಯ ಬೋನಸ್ ಒಳಗೊಂಡಿದೆ.

ಹೊಸ ಹೋಂಡಾ ಜಾಝ್​ ಬಿಎಸ್- 6 ಮೇಲೆ 25 ಸಾವಿರ ರೂ. ತನಕ ರಿಯಾಯಿತಿ ಸಿಗಲಿದೆ. ಇದರ ಜೊತೆಗೆ ಎಕ್ಸ್​ಚೇಂಜ್​ ಬೋನಸ್ ಆಫರ್​ 15,000 ರೂ. ಇರಲಿದೆ. ಈ ರಿಯಾಯಿತಿ ಮತ್ತು ಕೊಡುಗೆಗಳು ಜಾಝ್​ನ ಎಲ್ಲ ಶ್ರೇಣಿಗಳಲ್ಲಿ ಲಭ್ಯವಿದ್ದು, ಹೊಸ ಬಿಎಸ್ 6 ಜಾಝ್​ನಲ್ಲಿ 40,000 ರೂ. ಕೊಡುಗೆ ಪಡೆಯಬಹುದು.

ಜಾಝ್​ನಂತೆ ಹೋಂಡಾ ಡಬ್ಲ್ಯುಆರ್​-ವಿನಲ್ಲಿ ಅದೇ ಮಾದರಿಯ ಕೊಡುಗೆಗಳು ಲಭ್ಯವಾಗಿವೆ. 25 ಸಾವಿರ ರೂ.ಗಳವರೆಗೆ ನಗದು ಲಾಭ ಮತ್ತು 15,000 ರೂ. ವಿನಿಮಯ ಬೋನಸ್ ಇದ್ದು, ಅಡಿ ಒಟ್ಟು 40,000 ರೂ.ಯಷ್ಟಿದೆ. ಈ ಕೊಡುಗೆಗಳು ವಿಶೇಷ ಆವೃತ್ತಿಯ ಮಾದರಿಗಳನ್ನು ಹೊರತುಪಡಿಸಿ, ಕಾಂಪ್ಯಾಕ್ಟ್ ಕ್ರಾಸ್‌ ಒವರ್‌ನ ಎಲ್ಲಾ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿದೆ.

ಹೊಸದಾಗಿ ಪ್ರಾರಂಭಿಸಲಾದ 5ನೇ ತಲೆಮಾರಿನ ಹೋಂಡಾ ಸಿಟಿ, ಜಪಾನಿನ ವಾಹನ ತಯಾರಕ ಪ್ರೀಮಿಯಂ ಮಧ್ಯಮ ಗಾತ್ರದ ಸೆಡಾನ್‌ನ ಎಲ್ಲಾ ಶ್ರೇಣಿಗಳ ಮೇಲೆ 30,000 ರೂ. ವಿನಿಮಯ ಬೋನಸ್ ನೀಡುತ್ತಿದೆ.

ಹೋಂಡಾ ಸಿವಿಕ್‌ನ ಪೆಟ್ರೋಲ್ ಆವೃತ್ತಿಗೆ ವಾಹನ ತಯಾರಕರು 1 ಲಕ್ಷ ರೂ. ಆಫರ್ ನೀಡಿದ್ದಾರೆ. ಅಕ್ಟೋಬರ್‌ನಲ್ಲಿ ಡೀಸೆಲ್ ಸಿವಿಕ್ ಖರೀದಿಸಲು ಬಯಸಿದರೆ, 2.5 ಲಕ್ಷ ರೂ.ಗಳ ಬೃಹತ್ ನಗದು ರಿಯಾಯಿತಿಯ ಲಾಭ ಪಡೆಯಬಹುದು. ಈ ಕೊಡುಗೆಗಳು ಹೋಂಡಾ ಸಿವಿಕ್‌ನ ರೂಪಾಂತರ ವ್ಯಾಪ್ತಿಯಲ್ಲಿ ಲಭ್ಯವಿದೆ.

ABOUT THE AUTHOR

...view details